ನಲಿದಾಡೆ ಎನ್ನ ನಾಲಿಗೆ ಮೇಲೆ, ಸರಸ್ವತಿ ದೇವಿ | Gayaki Veena R Badiger | Nalidade enna nalige mele
Автор: Rayarakrupa
Загружено: 2026-01-18
Просмотров: 43
Dasa dare songs with lyrics in kannada
Nalidade enna nalige mele
ನಲಿದಾಡೆ ಎನ್ನ ನಾಲಿಗೆ ಮೇಲೆ, ಸರಸ್ವತಿ ದೇವಿ
ಕುಣಿದಾಡೆ ಎನ್ನ ನಾಲಿಗೆ ಮೇಲೆ ||ಪ||
ಸಲಿಲಜೋದ್ಭವನ ವದನನಿಲಯಳೆ
ಇಳೆಯೊಳಪ್ರತಿಮ ಗುಣಗಣಾಂಬುಧಿ ತಾಯೆ
ದಿನಕರಕೋಟಿತೇಜದಿ ಹೊಳೆವ
ಅನುಪಮವಾದ ಕನಕ ವಸನದಿಂದ ಎಸೆವ
ಘನವಾದ ಜಘನ ಗಗನದಂದದಿ ಸುಂದರ ಕಟಿಯಲಿ ಮೆರೆವ
ಮಣಿಧಾಮ ವಿಭವ
ತನು ಜಠರವು ಜಾಹ್ನವಿ ಸುಳಿನಾಭಿಯು ಘನ
ಸ್ತನಯುಗಳ ಚಂದನಲೇಪಿತಳೆ
ನಸುನಗುಮುಖವು ನಾಸಾಭರಣ
ಎಸೆವ ಕಪೋಲ
ಹೊಸ ಕುಂಡಲ ಚಳತೊಂಬುಳ್ಳ ಶ್ರವಣ
ಬಿಸಜದಳದಂತೆ
ಲಸಿತ ಕರ್ಣಾಂತವಾದ ನಯನ
ತಿಲಕದ ಹಸನ
ಶಶಿಸೂರ್ಯರ ಆಭರಣ ಸುಶೋಭಿತೆ
ಕುಸುಮ ಮುಡಿದ ಮೂರ್ಧಜವುಳ್ಳವಳೆ
ಶೃಂಗಾರವಾದ ಜಡೆ ಭಂಗಾರ
ಹೊಂಗ್ಯಾದಿಗೆ ಮುಡಿದ
ಭಂಗಾರದ ಹೆರಳಿನ ರಾಕಟಿ ವರ-
ಭೃಂಗದ ಸ್ವರ ಹಿಂಗದೆ ಭಕ್ತರ ಸಲಹುವ ಭಾರ
ಕಂಗಳ ಮನೋಹರ ರಂಗ ಪುರಂದರವಿಠಲ ರಾಯನ
ಮಂಗಳ ಮೂರ್ತಿಯ ತೋರೆ ಶುಭಾಂಗಿ ||
Доступные форматы для скачивания:
Скачать видео mp4
-
Информация по загрузке: