ನಿಷ್ಕ್ರಿಯಗೊಂಡಿರುವ ಹಣ ಹಸ್ತಾಂತರಿಸುವ ಕುರಿತು ಶಿಬಿರ | ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಶಿಬಿರ
Автор: DD Chandana News
Загружено: 2025-12-09
Просмотров: 40
ವಿವಿಧ ಬ್ಯಾಂಕ್ ಗಳ ಗ್ರಾಹಕರ ಖಾತೆಗಳಲ್ಲಿ ನಿಷ್ಕ್ರಿಯಗೊಂಡಿರುವ ಹಣವನ್ನು ಹಸ್ತಾಂತರಿಸುವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿನ್ನೆ ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶಿಬಿರ ಆಯೋಜಿಸಲಾಗಿತ್ತು.
ಆರ್ ಬಿಐ ವಲಯ ನಿರ್ದೇಶಕಿ ಕಾವ್ಯ ತ್ರಿಪಾಠಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಲತಾ ಸರಸ್ವತಿ, ಜೀವ ವಿಮಾ ನಿಗಮದ ಹಿರಿಯ ವ್ಯವಸ್ಥಾಪಕರಾದ ಅರುಳ್ ಸೆಲ್ವಿ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ಬ್ಯಾಂಕ್ ಅಧಿಕಾರಿಗಳು, ಫಲಾನುಭವಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಬಳಿಕ ಕಾವ್ಯ ತ್ರಿಪಾಠಿ, ಹಾಸನ ಜಿಲ್ಲೆಯಲ್ಲಿ ಒಟ್ಟು 71.75 ಕೋಟಿ ರೂಪಾಯಿ ವಿವಿಧ ಬ್ಯಾಂಕ್ ಗಳ ಖಾತೆಯಲ್ಲಿ ನಿಷ್ಕ್ರಿಯಗೊಂಡಿದ್ದು, ಆ ಹಣವನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಶಿಬಿರ ಆಯೋಜಿಸಲಾಗಿದೆ. ಪ್ರತಿಯೊಬ್ಬ ಖಾತೆದಾರರು ಸದುಪಯೋಗಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಲತಾ ಸರಸ್ವತಿ, ಜಿಲ್ಲೆಯಲ್ಲಿ 71 ಕೋಟಿ ರೂಪಾಯಿ ನಿಷ್ಕ್ರಿಯ ಖಾತೆಗಳಲ್ಲಿದ್ದು, ಅದರಲ್ಲಿ 2.5 ಕೋಟಿ ಹಣವನ್ನು ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗಿದೆ. ಗ್ರಾಹಕರು ತಮ್ಮ 10 ವರ್ಷಗಳ ಹಳೆಯ ಖಾತೆಯಲ್ಲಿರುವ ನಿಷ್ಕ್ರಿಯ ಹಣವನ್ನು ವಾಪಾಸ್ ಪಡೆಯುವ ನಿಟ್ಟಿನಲ್ಲಿ ಅಭಿಯಾನ ಆರಂಭಿಸಿದ್ದು, ಪ್ರತಿಯೊಬ್ಬರು ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ಅರುಳ್ ಸೆಲ್ವಿ, ಜಿಲ್ಲೆಯಲ್ಲಿ ಎಲ್ಐಸಿ ಖಾತೆಗಳಲ್ಲಿ 3.8 ಕೋಟಿ ರೂಪಾಯಿ ಇದ್ದು, ಈಗಾಗಲೇ 38 ಲಕ್ಷ ರೂಪಾಯಿ ಪಾಲಸಿದಾರರಿಗೆ ಸಂದಾಯ ಮಾಡಲಾಗಿದೆ. ಉಳಿದವರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಫಲಾನುಭವಿ ಜೋಸೆಫ್, ಇಂಡಿಯನ್ ಬ್ಯಾಂಕ್ ನಲ್ಲಿ ಖಾತೆ ತೆರೆದು ಬಹಳ ವರ್ಷಗಳಿಂದ ನಿರ್ವಹಣೆ ಮಾಡಿರಲಿಲ್ಲ. ಖಾತೆಯಲ್ಲಿ 30 ಸಾವಿರ ರೂಪಾಯಿ ಇದ್ದು, ಆ ಹಣ ವಾಪಸ್ ಪಡೆಯುತ್ತಿರುವುದರಿಂದ ತುಂಬಾ ಖುಷಿಯಾಗಿದೆ ಎಂದರು.
ಮತ್ತೋರ್ವ ಫಲಾನುಭವಿ ದೇವೇಗೌಡ ಎಚ್.ಆರ್., ಕಳೆದ ನಾಲ್ಕೈದು ವರ್ಷದ ಹಿಂದೆ ಎಲ್ಐಸಿ ಪಾಲಿಸಿ ಮಾಡಿಸಿ ಹಣ ಪಾವತಿಸಲಾಗದೆ ಅರ್ಧಕ್ಕೆ ನಿಲ್ಲಿಸಿದ್ದೇ, ಈಗ 1.5 ಲಕ್ಷ ರೂಪಾಯಿ ವಾಪಸ್ ಬಂದಿರುವುದು ಸಂತೋಷವಾಗಿದೆ ಎಂದರು.
#LiveDDChandanaNews #DDChandanaNews #DDChandana #DDKannada
Доступные форматы для скачивания:
Скачать видео mp4
-
Информация по загрузке: