ಬಳ್ಳಾರಿ ನಗರದಲ್ಲಿ ಎರಡು ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾರಾ ಭರತ್ ರೆಡ್ಡಿ ಭೂಮಿ ಪೂಜೆ! ಮಹಾತ್ಮ
Автор: @gKarnataka Power tv
Загружено: 2025-12-01
Просмотров: 48
gkarnataka power tv//01//12//2025//#@
ಬಳ್ಳಾರಿ ನಗರದಲ್ಲಿ ಎರಡು ಕೋಟಿಯ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಾರಾ ಭರತ್ ರೆಡ್ಡಿ ಭೂಮಿ ಪೂಜೆ!
ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ! ಹಲವು ವಾರ್ಡುಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ.
ಜನಜೀವನ ಸುಧಾರಣೆಯೇ ಗುರಿ! ಬಳ್ಳಾರಿಯಲ್ಲಿ ಹೊಸ ಯೋಜನೆಗಳಿಗೆ ಶಾಸಕರಿಂದ ಶಂಕುಸ್ಥಾಪನೆ!
ಬಳ್ಳಾರಿಯ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ - ಶಾಸಕ ಭರತ್ ರೆಡ್ಡಿ ನೇತೃತ್ವದಲ್ಲಿ ನೂತನ ಕಾಮಗಾರಿಗಳಿಗೆ ಚಾಲನೆ!
ಬಳ್ಳಾರಿ ನಗರದ ವಿವಿಧ ವಾರ್ಡುಗಳಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಅಡಿ ಕೈಗೊಳ್ಳಲಿರುವ ಅಂದಾಜು ಎರಡು ಕೋಟಿ ರೂಪಾಯಿಗಳ ಮೌಲ್ಯದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಶಾಸಕ ನಾರಾಭರತ್ ರೆಡ್ಡಿ ಭೂಮಿ ಪೂಜೆ ನೆರವೇರಿಸಿದರು. ನಗರದ ಮೂಲಭೂತ ಸೌಕರ್ಯಗಳ ಸುಧಾರಣೆ, ರಸ್ತೆ ಡ್ರೈನೇಜ್ ವ್ಯವಸ್ಥೆ ನವೀಕರಣ, ಕುಡಿಯುವ ನೀರಿನ ವ್ಯವಸ್ಥೆ ಬಲಪಡಿಕೆ ಹಾಗೂ ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿ ಗುರಿಯೊಂದಿಗೆ ಈ ಯೋಜನೆಗಳನ್ನು ಕೈಗೊಳ್ಳಲಾಗಿದೆ. ನಗರದಲ್ಲಿ ವೇಗವಾಗಿ ಬೆಳೆಯುತ್ತಿರುವ ವಾರ್ಡ್ ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಜನರ ದೀರ್ಘಕಾಲದ ಬೇಡಿಕೆಗಳಿಗೆ ಉತ್ತರ ನೀಡುವಂತಿದೆ ಎಂದು ಶಾಸಕ ನಾರ ಭರತ್ ರೆಡ್ಡಿ ಮಾತನಾಡಿದರು. ಬಳ್ಳಾರಿ ನಗರವನ್ನು ಅಭಿವೃದ್ಧಿಯ ದಿಕ್ಕಿನಲ್ಲಿ ಇನ್ನಷ್ಟು ಮುನ್ನಡೆಸುವುದು, ಪ್ರತಿ ವಾರ್ಡಿನ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಪರಿಹಾರಕ್ಕೆ ಬದ್ಧವಾಗಿದ್ದೇವೆ ಎಂದು ಹೇಳಿದರು. ವರದಿಗಾರರು ಮೊಹಮ್ಮದ್ ರಫಿ ಬಳ್ಳಾರಿ ಜಿಲ್ಲೆ
@gkarnatakapowertv
@TV5Kannada
@NewsFirstKannada
@tv9kannada
Доступные форматы для скачивания:
Скачать видео mp4
-
Информация по загрузке: