|| ಪಡುಬಿದ್ರಿ | ಶ್ರೀ ಮಹಾಲಿಂಗೇಶ್ವರ | ಮಹಾಗಣಪತಿ | ದೇಗುಲದ | ವಾರ್ಷಿಕ | ರಥೋತ್ಸವ | Padubidri Temple | Utsav
Автор: Emedia Kannada
Загружено: 2025-03-21
Просмотров: 6571
ಪಡುಬಿದ್ರಿ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ವಾರ್ಷಿಕ ಹಗಲು ರಥೋತ್ಸವ (The annual chariot festival of the Padubidri Mahalingeshwara Maha Ganapathi Temple)
ಪಡುಬಿದ್ರಿ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ವಾರ್ಷಿಕ ಹಗಲು ರಥೋತ್ಸವ
(ಚಿತ್ರ ಕೃಪೆ : ರವಿ ಡಿಜಿಟಲ್ಸ್ ಪಡುಬಿದ್ರಿ)
(Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇವಸ್ಥಾನದ ವಾರ್ಷಿಕ ಹಗಲು ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
ದೇಗುಲದಲ್ಲಿ ಪೂಜಾ ವಿಧಿ ವಿಧಾನ ಕಾರ್ಯಕ್ರಮ ಗಳ ಬಳಿಕ ಬಲಿ ಉತ್ಸವ, ರಥಶುದ್ಧಿ, ಪೂರ್ಣ ಬಲಿಯ ನಂತರ ರಥಾರೋಹಣ ಕಾರ್ಯಕ್ರಮ ನೆರವೇರಿತು.
ದೇವಳದ ಪ್ರಧಾನ ತಂತ್ರಿ ವರ್ಯರಾದ ಕಂಬಳಕಟ್ಟ ಶಿವರಾಜ ಉಪಾಧ್ಯಾಯರವರ ನೇತೃತ್ವದಲ್ಲಿ ದೇವಳದ ಪ್ರಧಾನ ಅರ್ಚಕ ಗುರುರಾಜ್ ಭಟ್ ಎರ್ಮಾಳು, ಪದ್ಮನಾಭ ಭಟ್ ರವರಿಂದ ಪೂಜಾ ವಿಧಿ ವಿಧಾನ ನೆರವೇರಿತು.
ಈ ಸಂದರ್ಭ ಅನುವಂಶೀಯ ಮೊಕ್ತೇಸರರಾದ ರತ್ನಾಕರ ರಾಜ್ ಅರಸು ಕಿನ್ನಕ್ಕ ಬಳ್ಳಾಲ್, ಅನುವಂಶೀಯ ಮೊಕ್ತೇಸರ ಭವಾನಿ ಶಂಕರ್ ಪಡುಬಿದ್ರಿ ಶೆಟ್ಟಿ ಪೇಟೆ ಮನೆ, ಹಾಗೂ ದೇವಾಲದ ಅರ್ಚಕರು, ಸಿಬ್ಬಂದಿ ವರ್ಗ ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತ ಅಭಿಮಾನಿಗಳು ಉಪಸ್ಥಿತರಿದ್ದರು.
Доступные форматы для скачивания:
Скачать видео mp4
-
Информация по загрузке: