ಪ್ರಾಣದೇವ ನೀನಲ್ಲದೆ ಕಾಯ್ವರಕಾಣೆನೋ | Gayaka Raghavendra S Katti | Pranadeva ninallade kayvara kanenu
Автор: Rayarakrupa
Загружено: 2026-01-27
Просмотров: 118
Dasa dare song
Prana deva ninallade
ಪ್ರಾಣದೇವ ನೀನಲ್ಲದೆ ಕಾಯ್ವರ
ಕಾಣೆನೋ ಜಗದೊಳಗೆ , ಮುಖ್ಯ-
ಪ್ರಾಣಾಪಾನವ್ಯಾನೋದಾನ ಸ-
ಮಾನನೆನಿಪ ಮುಖ್ಯಪ್ರಾಣ ನೀನಲ್ಲದೆ ||
ವಾಸವ ಕುಲಿಶದಿ ಘಾಸಿಸೆ ಜೀವರ
ಶ್ವಾಸ ನಿರೋಧಿಸಿದೆ
ಆ ಸಮಯದಿ ಕಮಲಾಸನ ಪೇಳಲು
ನೀ ಸಲಹಿದೆ ಜಗವ ಮುಖ್ಯ- ||
ಅಂಗದ ಪ್ರಮುಖ ಪ್ಲವಂಗರು ರಾಮನ
ಅಂಗನೆಯನು ಪುಡುಕೆ
ತಿಂಗಳು ಮೀರಲು ಕಪಿವರ-
ಪುಂಗವ ಪಾಲಿಸಿದೆ ಮುಖ್ಯ- ||
ಪಾವನ ಪಾಶದಿ ರಾವಣ ನೀಲ ಸು-
ಗ್ರೀವ ಮುಖ್ಯರ ಬಿಗಿಯೆ
ಸಾವಿರದೈವತ್ತು ಗಾವುದದಲ್ಲಿಹ ಸಂ-
ಜೀವನವನು ತಂದೆ ಮುಖ್ಯ- ||
Доступные форматы для скачивания:
Скачать видео mp4
-
Информация по загрузке: