16ನೇ ರಾಷ್ಟ್ರೀಯ ಮತದಾರರ ದಿನ ; ನನ್ನ ಭಾರತ - ನನ್ನ ಮತ ಪರಿಕಲ್ಪನೆ
Автор: DD Chandana News
Загружено: 2026-01-25
Просмотров: 16
ಇಂದು ದೇಶಾದ್ಯಂತ 16ನೇ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. 'ನನ್ನ ಭಾರತ- ನನ್ನ ಮತ' ಪರಿಕಲ್ಪನೆಯಡಿ ಪ್ರಸಕ್ತ ವರ್ಷದ ಕಾರ್ಯಕ್ರಮ ಆಯೋಜನೆಗೊಂಡಿದ್ದು, ದೆಹಲಿಯ ಕಂಟೋನ್ ಮೆಂಟ್ ನಲ್ಲಿ ನಡೆದ ಪ್ರಧಾನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿಯಾಗಿದ್ದರು.
ಈ ವೇಳೆ ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ವಾಲ್, ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್, ಆಯುಕ್ತರಾದ ವಿವೇಕ್ ಜೋಶಿ ಹಾಗೂ ಎಸ್. ಎಸ್. ಸಂದು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ, ರಾಷ್ಟ್ರಪತಿ ಅವರು ಹೊಸದಾಗಿ ನೋಂದಾಯಿಸಿಕೊಂಡ ಯುವ ಮತದಾರರಿಗೆ ಮತದಾರರ ಭಾವಚಿತ್ರ ಸಹಿತ ಗುರುತಿನ ಚೀಟಿಗಳನ್ನು ಹಸ್ತಾಂತರಿಸಿದರು.
ಮತದಾನದ ವ್ಯವಸ್ಥೆಯ ಕುರಿತು ಚುನಾವಣಾ ಆಯೋಗ ಸಿದ್ಧಪಡಿಸಿರುವ ವಿಶೇಷ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.
2025- ಚುನಾವಣಾ ವರ್ಷ ಹಾಗೂ ಚುನಾವಣಾ ಪರ್ವ ಬಿಹಾರದ ಗರ್ವ ಶೀರ್ಷಿಕೆಯ ಎರಡು ಪ್ರಕಟಣೆಗಳನ್ನು ರಾಷ್ಟ್ರಪತಿ ಲೋಕಾರ್ಪಣೆ ಮಾಡಿದರು.
ಬಳಿಕ ರಾಷ್ಟ್ರೀಯ ಮತದಾರ ದಿನಾಚರಣೆಯ ಪುರಸ್ಕಾರಗಳನ್ನು ಪ್ರದಾನ ಮಾಡಲಾಯಿತು.
ಸಭೆಯನ್ನುದ್ದೇಶಿಸಿ ರಾಷ್ಟ್ರಪತಿ ಅವರು, ಮತದಾನವು ಕೇವಲ ರಾಜಕೀಯ ಅಭಿವ್ಯಕ್ತಿಯಲ್ಲ, ಬದಲಾಗಿ ದೇಶದ ಪ್ರಜಾಪ್ರಭುತ್ವ ಚುನಾವಣಾ ಪ್ರಕ್ರಿಯೆಯಲ್ಲಿ ನಾಗರಿಕರ ನಂಬಿಕೆಯ ಪ್ರತಿಬಿಂಬವಾಗಿದೆ. ಜನತೆ ತಮ್ಮ ಆಕಾಂಕ್ಷೆಗಳನ್ನು ವ್ಯಕ್ತಪಡಿಸುವ ಮಾಧ್ಯಮವಾಗಿಯೂ ಇದು ಕಾರ್ಯನಿರ್ವಹಿಸುತ್ತದೆ. ಇಂದಿನ ಮತದಾರರು ಭವಿಷ್ಯದ ಭಾರತದ ಶಿಲ್ಪಿಗಳು ಎಂದು ಅಭಿಪ್ರಾಯಪಟ್ಟರು.
ಭಾರತೀಯ ಪ್ರಜಾಪ್ರಭುತ್ವದ ಹೃದಯ ಭಾಗದಲ್ಲಿರುವ ನಾಗರಿಕ ಎಂಬ ಪದ ಅನನ್ಯವಾದುದು, ಇತ್ತೀಚೆಗೆ ಮುಕ್ತಾಯಗೊಂಡ ಪ್ರಜಾಪ್ರಭುತ್ವ ಮತ್ತು ಚುನಾವಣಾ ನಿರ್ವಹಣೆ ಕುರಿತಾದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ 42 ಚುನಾವಣಾ ನಿರ್ವಹಣಾ ಸಂಸ್ಥೆಗಳು ಮತ್ತು ಹಲವು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ದೇಶದ ಎಲ್ಲ ಅರ್ಹ ಮತದಾರರು ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವುದು ಅತಿ ಮುಖ್ಯವಾಗಿದೆ ಎಂದು ತಿಳಿಸಿದರು.
#LiveDDChandanaNews #DDChandanaNews #DDChandana #DDKannada
Доступные форматы для скачивания:
Скачать видео mp4
-
Информация по загрузке: