ಕೂದಲು ಕಸಿ ಶಾಶ್ವತ ಪರಿಹಾರವೆ? ಆ ಕೂದಲು ಎಷ್ಟು ಕಾಲ ಉಳಿಯುತ್ತವೆ?
Автор: The Venkat Center for Skin and Plastic Surgery
Загружено: 2021-04-10
Просмотров: 38755
ಬೋಳು ತಲೆಗೆ ಕೂದಲು ಕಸಿ ಶಾಶ್ವತ ಪರಿಹಾರವೇ? ಕೂದಲು ಕಸಿಯಲ್ಲಿ ಕೂದಲುಗಳು ಎಂದಿಗೂ ಬೆಳೆಯುತ್ತವೆಯೆ ಮತ್ತು ಕೂದಲುಗಳು ಜೀವನದ ಪರ್ಯಂತ
ಉಳಿಯುತ್ತವೆಯೇ? ಈ ರೀತಿಯ
ಪ್ರಶ್ನೆಗಳನ್ನು ಕೂದಲು ಕಸಿ ಅಥವಾ ಕೂದಲು ಚಿಕಿತ್ಸೆಗೆ ಬರುವ ರೋಗಿಗಳು
ಸಾಮಾನ್ಯವಾಗಿ ನಮ್ಮನ್ನು ಕೇಳುತ್ತಾರೆ. ಈ ವಿಡಿಯೋದಲ್ಲಿ ಡಾಕ್ಟರ್ ವೆಂಕಟರಾಮ್ ಮೈಸೂರ್ ರವರು ಕೂದಲು ಉದುರುವಿಕೆಗೆ ಶಾಶ್ವತ ಪರಿಹಾರದ ಸಾಧ್ಯತೆ ಬಗ್ಗೆ ವಿವರವಾಗಿ ತಿಳಿಸಿದ್ದಾರೆ
ಕೂದಲಿನ ಕಸಿಯನ್ನು ತಲೆಯ ಹಿಂಭಾಗದಿಂದ
ಕೂದಲುಗಳನ್ನು ತೆಗೆದು ಅವಶ್ಯಕತೆ ಇರುವ ಜಾಗಕ್ಕೆ ಹಾಕಲಾಗುತ್ತದೆ. ಈ ಭಾಗದ ಕೂದಲು ಗಳು ಶಾಶ್ವತ ಕೂದಲು. ಹಾಗಾಗಿ ಕಸಿ ಮಾಡಿದ ನಂತರ ಕೂಡ ಕೂದಲು ಶಾಶ್ವತವಾಗಿರುತ್ತದೆ, ಮತ್ತು ಸ್ವಾಭಾವಿಕವಾಗಿ ಬೆಳೆಯುತ್ತದೆ
ಹೀಗಾದರೂ, ಕೆಲವು ಜನರಲ್ಲಿ ಕೂದಲು ಕಸಿಯ ಕೆಲವು ಸಮಯದ ನಂತರ ಕೂದಲು ಮತ್ತೆ ತೆಳ್ಳಗಾಗುತ್ತಿದೆ ಎಂಬ ದೂರು ಕೇಳಿಬರುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು
೧. ಕಸಿ ಮಾಡುವ ಸಮಯದಲ್ಲಿ ಸರಿಯಾದ ಕೌಶಲ್ಯ ಮತ್ತು ತಂತ್ರಜ್ಞಾನ ಬಳಸದೆ ಯಿರುವುದು
೨. ತಲೆಯ ಹಿಂದಿನ ಸುರಕ್ಷಿತ ಜಾಗದಿಂದ ಕೂದಲನ್ನು ತೆಗೆಯದೆ ಅಸುರಕ್ಷಿತ ಜಾಗದಿಂದ ತೆಗೆದು ಬಳಸುವುದು
೩. ಸುರಕ್ಷಿತ ಜಾಗದ ಕೂದಲು ನಿಶ್ಯಕ್ತ ವಾಗಿದ್ದರೆ ಅವುಗಳನ್ನು ಔಷಧಗಳ ಮೂಲಕ ಬಲಪಡಿಸದೆ, ಅವಸರದಲ್ಲಿ ಆ ನಿಶ್ಯಕ್ತ ಕೂದಲುಗಳನ್ನು ಹಾಗೆಯೇ ಕಸಿಗೆ ಬಳಸುವುದು
೪. ಉಳಿದಿರುವ ಕೂದಲುಗಳನ್ನು ಉಳಿಸಿ, ಬೆಳೆಸಲು ಔಷಧಿ, ಪಿ ಆರ್ ಪೀ ಗಳನ್ನ ಬಳಸದೆ ಯಿರುವುದು
೫. ತರಬೇತಿಯೆಯಿಲ್ಲದ , ವೈದ್ಯರೇ ಅಲ್ಲದವರ ಬಳಿ, ದುಡ್ಡು ಕಡಿಮೆ ಆಗುತ್ತದೆ ಎಂಬ ಕಾರಣಕ್ಕೆ ಕಸಿ ಮಾಡಿಸಿಕೊಳ್ಳುವುದು
ಇದರ ಅರ್ಥ ಸಾರಾಂಶ :
ಶಾಶ್ವತವಾಗಿ ಕೂದಲು ಉಳಿಯಲು,ಬೆಳೆಯಲು ತಲೆಯ ಕೂದಲು ಕಸಿ ಮಾಡಲು ಬಯಸುವವರು ಸರಿಯದ ಅನುಭವ ಜ್ಞಾನ ಕೌಶಲ್ಯ ಇರುವ
ತಜ್ಞರ ಬಳಿ ಕೂದಲು ಕಸಿಯನ್ನು ಮಾಡಿಸಿದಾಗ ಮಾತ್ರ
ಕೂದಲು ಕಸಿ ಯಶಸ್ವಿಯಾಗುತ್ತದೆ.
Доступные форматы для скачивания:
Скачать видео mp4
-
Информация по загрузке: