ಯಕ್ಷರಂಗದ ಭಾಗವತ ಹಂಸ ಖ್ಯಾತಿಯ ಪುತ್ತಿಗೆ ರಘುರಾಮ ಹೊಳ್ಳ (Famous as Bhagavata Hamsa Puttige Raghurama Holla)
Автор: ಯಕ್ಷರಂಗ ಕಟೀಲು ಸಿತ್ಲ ಫೌಂಡೇಶನ್ ರಿ, ಉಡುಪಿ-ಬೆಂಗಳೂರು (YAKSHARANGA)
Загружено: 2020-09-12
Просмотров: 6680
ಸುಶ್ರಾವ್ಯ, ಏರು ಕಂಠದ, ತೆಂಕುತಿಟ್ಟು ಯಕ್ಷರಂಗದ ಭಾಗವತ ಹಂಸ ಖ್ಯಾತಿಯ ಪುತ್ತಿಗೆ ರಘುರಾಮ ಹೊಳ್ಳ (Famous as Bhagavata Hamsa Puttige Raghurama Holla)
(An article in Kannada about Puttige Raghurama Holla - https://yaksharangabykateelusitla.blo...)
ತಮ್ಮ ಅದ್ಭುತವಾದ ಏರುಶ್ರುತಿಗೆ ಹೊಂದುವ ಕಂಠದಿಂದ ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಪ್ರಸಿದ್ಧ ಭಾಗವತರಾಗಿ ಜನಮನ್ನಣೆಯನ್ನು ಪಡೆದವರು ಪುತ್ತಿಗೆ ರಘುರಾಮ ಹೊಳ್ಳರು. ಸದ್ಯ ಧರ್ಮಸ್ಥಳ ಮೇಳದಲ್ಲಿ ಪ್ರಧಾನ ಭಾಗವತರಾಗಿ ತಿರುಗಾಟವನ್ನು ನಡೆಸುತ್ತಿದ್ದಾರೆ.
5-5-1955 ರಂದು ತೆಂಕುತಿಟ್ಟು ಯಕ್ಷಗಾನದ ಅಗ್ರಪಂಕ್ತಿಯ ಭಾಗವತರಲ್ಲೊಬ್ಬರಾದ ಪುತ್ತಿಗೆ ರಾಮಕೃಷ್ಣ ಜೋಯಿಸ ಮತ್ತು ಲಕ್ಷ್ಮೀಯಮ್ಮ ದಂಪತಿಗಳಿಗೆ ಪುತ್ರರಾಗಿ ಕಾಸರಗೋಡಿನ ಬೋವಿಕಾನದಲ್ಲಿ ಜನಿಸಿದರು. ಹೊಳ್ಳರ ಚಿಕ್ಕಪ್ಪ ಬಿ. ವಿ. ಹೊಳ್ಳರು ಪ್ರಸಂಗಕರ್ತರಾಗಿ, ಅರ್ಥಧಾರಿಗಳಾಗಿ ಖ್ಯಾತರು. ಬಿ. ಕಾಂ ಪದವೀಧರರಾಗಿರುವ ಹೊಳ್ಳರು ಮುಂದೆ ಅನಿವಾರ್ಯ ಕಾರಣಗಳಿಂದ ಯಕ್ಷಗಾನ ಕ್ಷೇತ್ರಕ್ಕೆ ಪದಾರ್ಪಣೆಯನ್ನು ಮಾಡಿದರು. ದಿ. ಕಿಟ್ಟಣ್ಣ ಭಾಗವತ ಮತ್ತು ದಿ. ಕುದ್ರೆಕೂಡ್ಲು ರಾಮ ಭಟ್ತರಲ್ಲಿ ಮದ್ದಳೆ ಮತ್ತು ಚೆಂಡೆವಾದನವನ್ನು ಅಭ್ಯಸಿಸಿದ್ದಾರೆ. ಭಾಗವತಿಕೆಗೆ ಹೊಳ್ಳರಿಗೆ ತಂದೆಯವರೇ ಗುರು.
ಪ್ರಾರಂಭದಲ್ಲಿ ಒಂದು ವರ್ಷ ಧರ್ಮಸ್ಥಳ ಮೇಳದಲ್ಲಿ ತಿರುಗಾಟವನ್ನು ಮಾಡಿ ಆ ಬಳಿಕ 6 ವರ್ಷಗಳ ತಿರುಗಾಟವನ್ನು ಕದ್ರಿ ಮೇಳದಲ್ಲಿ ನಡೆಸಿದರು. ಆಗ ಗೆಜ್ಜೆ ಪೂಜೆ ಎನ್ನುವ ತುಳು ಪ್ರಸಂಗದ ಮೂಲಕ ಪ್ರಸಿದ್ಧಿಗೆ ಬಂದರು. ಅಲ್ಲಿ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಒಡನಾಟ ದೊರಕಿತು. ಇದು ಹೊಳ್ಳರಿಗೆ ಸಹಕಾರಿಯಾಗಿ ಪರಿಣಮಿಸಿತು. ಬಳಿಕ ಮತ್ತೆ ಧರ್ಮಸ್ಥಳ ಮೇಳವನ್ನು ಸೇರಿ 3 ದಶಕಗಳಿಗೂ ಮಿಕ್ಕಿದ ತಿರುಗಾಟದ ಅನುಭವವನ್ನು ಸಂಪಾದಿಸಿದ್ದಾರೆ.
ರಂಗದಲ್ಲಿ ಪ್ರದರ್ಶನ ಚಂದಗಾಣಿಸುವಲ್ಲಿ ಹೊಳ್ಳರ ಆಶಯದ ಕಾರಣ ಕಲಾವಿದರಿಗೆ ಸನ್ನಿವೇಶ, ಸಂದರ್ಭಕ್ಕನುಗುಣವಾಗಿ ಸೂಕ್ತ ಮಾರ್ಗದರ್ಶ್ನವನ್ನು ನೀಡಬಲ್ಲವರು. ಕಲಾವಿದರ ಸಾಮರ್ಥ್ಯ, ಅಂತರ್ಯವನ್ನು ಅರಿತುಕೊಂಡು ಕುಣಿಸಬಲ್ಲ ಯೋಗ್ಯತೆ ಹೊಳ್ಲರಲ್ಲಿದೆ. ಗದಾಯುದ್ಧ, ಕರ್ಣಾರ್ಜುನ, ದುಶ್ಯಾಸನ ವಧೆ ಮೊದಲಾದ ಪ್ರಸಂಗಗಳು ಹೊಳ್ಳರ ಹಾಡಿನಿಂದ ರಂಜನೀಯವಾಗಿ ಜನಮನ ಗೆದ್ದಿದೆ.
ಹಿಂದಿ, ಸಂಸ್ಕೃತ ಭಾಷೆಯ ಯಕ್ಷಗಾನ ಪ್ರಸಂಗಗಳಲ್ಲಿ ಹಾಡಿದ ಅನುಭವ ಇವರದು. ಯಕ್ಷಮಂಜೂಷಾ ತಂಡದ ಮೂಲಕ ದೇಶ-ವಿದೇಶಗಳಲ್ಲಿ ಯಕ್ಷಗಾನದ ಹಾಡುಗಾರಿಕೆಯನ್ನು ಮಾಡಿದ್ದಾರೆ. ಮಾಜಿ ರಾಷ್ಟ್ರಪತಿ ದಿ. ಶಂಕರ ದಯಾಳ ಶರ್ಮರಿಂದ ಗೌರವ, ದೆಹಲಿಯ ಕನ್ನಡ ಸಂಘದ ಗೌರವ, ಮಂಗಳೂರು, ಎಡನೀರು ಮೊದಲಾದೆಡೆ ಸಂಮಾನಿಸಲ್ಪಟ್ಟಿದ್ದಾರೆ.
2013 ರಲ್ಲಿ ರಘುರಾಮಾಭಿನಂದನಂ ಎನ್ನುವ ಅದ್ಧೂರಿ ಕಾರ್ಯಕ್ರಮದ ಮೂಲಕ ಯಕ್ಷಾಭಿಮಾನಿಗಳು, ಹೊಳ್ಳರ ಅಭಿಮಾನಿಗಳು ಹೊಳ್ಳರಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಶ್ರೀಮತಿ ವಾಣೀ ಹೊಳ್ಳರ ಪತ್ನಿ. ಶ್ರೀಲಕ್ಷ್ಮೀ ಮತ್ತು ಶ್ರೀವಿದ್ಯಾ ಇವರ ಮಕ್ಕಳು. ಸದ್ಯ ಸುರತ್ಕಲ್ಲಿನಲ್ಲಿ ವಾಸವಿದ್ದಾರೆ. ಪುತ್ತಿಗೆ ರಘುರಾಮ ಹೊಳ್ಳರಿಗೆ ಶುಭವನ್ನು ಹಾರೈಸುತ್ತೇನೆ.
ಶ್ರೀಮತಿ ನಾಗರತ್ನ ಅವರು ಶ್ರೀ ಪುತ್ತಿಗೆ ರಘುರಾಮ ಹೊಳ್ಳರ ಕಿರು ಪರಿಚಯವನ್ನು ಮಾಡಿ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳು. ಶ್ರೀ ಮಧುಸೂದನ ಅಲೆವೂರಾಯರು ನನ್ನ ವಿನಂತಿಯ ಮೇರೆಗೆ ಇನ್ನೂರಕ್ಕು ಹೆಚ್ಚಿನ ಛಾಯಾಪಟಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅವುಗಳಲ್ಲಿ ಬಹಳಷ್ಟನ್ನು ಬಳಸಿಕೊಂಡಿದ್ದೇನೆ. ಮಧುಸೂದನ ಅಲೆವೂರಾಯರಿಗೆ ನನ್ನ ಧನ್ಯವಾದಗಳು.
ಈ ಸಂದರ್ಶನದ ಸಾಕ್ಷ್ಯಚಿತ್ರದಲ್ಲಿ ಅಂಬಾಶಪಥ, ಗದಾಯುದ್ಧ ಯಕ್ಷಗಾನಗಳನ್ನೂ, ವಾಲಿಮೋಕ್ಷ ತಾಳಮದ್ದಳೆಯನ್ನೂ ಅಳವಡಿಸಿಕೊಂಡಿದ್ದೇನೆ. ಅಂಬಾಶಪಥ ಯಕ್ಷಗಾನದ ಸಿಡಿಯನ್ನು ಡಾ. ಕೋಳ್ಯೂರು ರಾಮಚಂದ್ರ ರಾಯರು ನೀಡಿದ್ದರು ಹಾಗೂ ಅದನ್ನು ಬಳಸಿಕೊಳ್ಳಬಹುದು ಅನ್ನುವ ಅನುಮತಿಯನ್ನು ಕೋಳ್ಯೂರರ ಮಗನಾದ ಶ್ರೀ ಶ್ರೀನಿವಾಸರು ನನಗೆ ನೀಡಿದ್ದರು. ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಗದಾಯುದ್ಧ ನನಗೆ ಓರ್ವ ಮಿತ್ರರು ನೀಡಿದ್ದರು. ಕೊಪ್ಪದಲ್ಲಿ ನಡೆದಿದ್ದ ಆ ವೀಡಿಯೋದಲ್ಲಿ ಇರುವಷ್ಟರ ಮಾಹಿತಿಯನ್ನು ನೀಡಿರುವೆ. ಅದೇ ರೀತಿ ವಾಲಿಮೋಕ್ಷ ತಾಳಮದ್ದಳೆಯನ್ನೂ ನನ್ನೋರ್ವ ಮಿತ್ರರು ನೀಡಿರುವಂತಹುದು. ನವಗಿರಿ ಯಕ್ಷಗಾನ ಮಂಡಳಿ, ಕುಳಾಯಿ, ಹೊಸಬೆಟ್ಟು ಸಂಸ್ಥೆಯವರು ಸಂಯೋಜಿಸಿ ಆಯೋಜಿಸಿರುವಂತಹುದು. ಅವರಿಗೂ ನನ್ನ ಧನ್ಯವಾದಗಳು. ಈ ಎಲ್ಲವನ್ನೂ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವಂತಿಲ್ಲ.
ಯಕ್ಷಗಾನ ಕ್ಷೇತ್ರದ ಸಾಮಾನ್ಯ ಯಕ್ಷಗಾನ ಕಲಾಭಿಮಾನಿಯಾದ ಹಾಗೂ ಶ್ರೀ ಪುತ್ತಿಗೆ ರಘುರಾಮ ಹೊಳ್ಳರ ಸಾಮಾನ್ಯ ಅಭಿಮಾನಿಯಾದ ನನ್ನ ಅಭಿನಂದನೆಗಳನ್ನು ಈ ಡಾಕ್ಯುಮೆಂಟರಿಯ ಮೂಲಕ ಸಲ್ಲಿಸುತ್ತಿದ್ದೇನೆ.
ಬಲು ತಾಳ್ಮೆವಹಿಸಿ ಇದನ್ನು ಮಾಡಿದ್ದೇನೆ. ಈ ಡಾಕ್ಯುಮೆಂಟರಿಯನ್ನು ನೋಡಲೂ ಸಹ ಬಹಳ ಸಮಯದ ಅನುಕೂಲ್ಯತೆಯೂ ಮತ್ತು ತಾಳ್ಮೆಯ ಆವಶ್ಯಕತೆಯೂ ಇದೆ. ಆದರೆ ಇದನ್ನು ಸಂಪೂರ್ಣ ನೋಡಿದ ಕಲಾಭಿಮಾನಿಗಳಿಗೆ ನಿಜಕ್ಕೂ ಸಂತೋಷವಾದೀತು ಎಂಬ ವಿಶ್ವಾಸವುಳ್ಳವನಾಗಿದ್ದೇನೆ.
ವೃತ್ತಿಪರನಲ್ಲ ನಾನು. ನನ್ನ ಸೀಮಿತ ತಿಳುವಳಿಕೆ, ಜ್ಞಾನ, ಮತ್ತು ಸೀಮಿತ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಡಾಕ್ಯುಮೆಂಟರಿ ಮಾಡಿದ್ದೇನೆ. ದೋಷಗಳಿದ್ದರೂ ಕಲಾಭಿಮಾನಿಗಳು ವಿಶಾಲ ಮನಸ್ಸಿನಿಂದ ಸ್ವೀಕರಿಸುವಿರೆಂಬ ಆಶಯದೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
_________________________________________________________________
I hereby declare that, the content is in the public domain OR is not eligible for copyright protection.
I swear, under penalty of perjury, that I have a good faith belief that the material does not fall under copyright protection.
I consent to the jurisdiction of the Federal District Court for the district in which my address is located, or if my address is outside of the United States, the judicial district in which YouTube is located, and will accept service of process from the claimant if any.
Доступные форматы для скачивания:
Скачать видео mp4
-
Информация по загрузке: