ಕೆಲ ರೈತ ಮುಖಂಡರು
Автор: Sidlaghatta
Загружено: 2025-04-29
Просмотров: 8761
ಶಿಡ್ಲಘಟ್ಟದ ಕೆಲ ರೈತ ಮುಖಂಡರು ಕೈಗಾರಿಕಾ ಪ್ರದೇಶಾಭಿವೃದ್ಧಿ ವಿಚಾರವಾಗಿ ಗೊಂದಲ ಉಂಟುಮಾಡಲು ಯತ್ನಿಸುತ್ತಿದ್ದಾರೆ. ಹಸಿರು ಶಾಲು ಹಾಕಿಕೊಂಡು ರೈತ ಸಂಘ ಎಂದು ಹೇಳಿಕೊಂಡು ಓಡಾಡುವವರಲ್ಲಿ ಕೆಲವರು ರೈತ ಮಕ್ಕಳೇ ಅಲ್ಲ. ಇವತ್ತು ರೈತ ಸಂಘದಲ್ಲಿ ಕೂಡಾ ಸಾಕಷ್ಟು ಗುಂಪುಗಳಿವೆ. ನಾವು ಜನರಿಂದ ಆಯ್ಕೆಯಾದವರು. ರೈತರು, ಕೂಲಿಕಾರ್ಮಿಕರು, ಜನಸಾಮಾನ್ಯರು ಎಲ್ಲರೂ ಮತ ನೀಡಿ ನಮ್ಮನ್ನು ಆಯ್ಕೆ ಮಾಡಿರುವುದು. ರೈತರ ಪರವಾಗಿ ನಾವಿಲ್ಲ ಎಂಬ ಹೇಳಿಕೆಯನ್ನು ಹೇಗೆ ತಾನೆ ಕೊಡುತ್ತೀರಿ. ಹಸಿರು ಟವಲ್ ಹಾಕಿದವರು ಮಾತ್ರ ರೈತರಾ. ಈ ಭಾವನೆಯನ್ನು ಅವರು ತಮ್ಮ ತಲೆಯಿಂದ ತೆಗೆದುಹಾಕಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ಹಲವಾರು ಕಟ್ಟಡಗಳ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಅವರು ತಾಲ್ಲೂಕಿನ ಜಂಗಮಕೋಟೆ ಹೋಬಳಿ ವ್ಯಾಪ್ತಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಕೈಗಾರಿಕಾ ಪುದೇಶವನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿರುವ ಯೋಜನೆಯ ಕುರಿತಾಗಿ ಅವರು ಮಾತನಾಡಿದರು.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻 / sidlaghatta
Instagram 📷 / sidlaghatta
Website 🌐 https://www.sidlaghatta.com
Youtube ▶️ / sidlaghatta
📱 Join WhatsApp https://wa.me/917406303366?text=Hi
Доступные форматы для скачивания:
Скачать видео mp4
-
Информация по загрузке: