ಕೂಡಿದ ಜಾಗ ಕೂಗ ಹೊಡಿತಾವ।Bhajana Pada।Manju Mishrikoti।Janapada Song।Uttara Karnataka।Bhajana Song
Автор: Subhan Audio
Загружено: 2023-10-21
Просмотров: 1888357
Kudida Jaga Kuga Hoditava Nanna Kanda
Singer And Act;Manju Mishrikoti
Lyrics: Shivakanta S Pujari
Direction;Camara:Editi;Jagadish Mooki
Shrishail Kadakol
Female Anctor;Nirmala Vijayapura
Prodused By:Subhan Nadaf (Subhan Audio)
Recording:Shree Recording Studio Hebballi
Media Partner;Praveen Kadapatti Music
#manjumishrikoti
#bhajanapada
#uttarakarnataka
#janapada
#janapadasong
#uttaraKarnatakabhajanapada
#kudidajagakugahoditava
ಪಲ್ಲವಿ.ಕೂಡಿದ ಜಾಗ ಕೂಗ ಹೋಡಿತಾವ ನನ್ನ ಕಂಡ||2||
ಲಗ್ಗಣ ಕಾರ್ಡಾಗ ನಿನ್ನೆಸರಿಗಿ ಯಾವನೋ ಗಂಡ.
ಮದುವಿ ಆದ...
ಮದುವಿ ಆದ ಏ೦ಟ ತಿಂಗಳಿಗಿ ಹಡದಿ ಗಂಡ||2||
ಹುಟ್ಯೈತಂತ ಮಾತಾಡತಾರ ಹಂಡಬಂಡ..
ಚರಣ..೧
ಹಾಲಿನ ನೇವ ಮಾಡಕೋಂಡ ಬಂದ ಹಾಸಿಗಿವಳಗ ಒದ್ದಾಡಿ.
ನಿಮ್ಮಪ್ಪ ಹುಡುಗನ ಹುಡಿಕ್ಯಾನಂತ ಬಿಟ್ಟ ಹೊ೦ಟಿ ಬಿದ್ದಾಡಿ.
ಜಾತ್ರಿವಳಗ ವೇಲ ಕಟಗೋಂಡ ನನ್ನ ಜೋಡ ಅಡ್ಡಾಡಿ.
ಮದುವಿವಳಗ ಶಾಲ ಹೋಚಗೋಂಡ ಹೆಂಗ ನಿಂತೆಳ್ ಅಡ್ನಾಡಿ.
ಇದ್ರೂ ನೀನ ಸತ್ರೂ ನೀನ ಅಂತ ನನ್ನ ಸುಖ ನೋಡಿ
ಸರಕಾರ ನೌಕ್ರಿ ಸಾವಾಕಾರ ಚಾಕ್ರಿ ಹೆಂಗ ಒಪ್ಪಿ ಸುಡಗಾಡಿ..
ಹುಡಿಗ್ಯಾರಿಗಿ ಮರದಿ ಕೋಡಬೇಕ ಅಂತ ಅಂತಾರ||2||
ಆದ್ರ ನಿಮ್ಮಂತ ಹುಡಿಗ್ಯಾರ ಹೋಟ್ಟಿಗಿ ಏನ ತಿಂತಾರ...
ಚರಣ.೨
ಹಿಂದ ಬಿದ್ದ ಎಸ್ಟೋ ಹುಡಿಗ್ಯಾರನ ಬಿಟ್ಯಾ ನಿನ್ನ ಸಲುವಾಗಿ
ಮಾಡಕೋಕ ಬಂದ ಒಬ್ಬ ಹುಡುಗನ ಬ್ಯಾಡ ಅನಲಿಲ್ಲ ನನಗಾಗಿ..
ಮೆರವಣಗಿಗಿ ಮಣ್ಣ ತುರತನ ಅಡ್ಡ ನಿಂತ ದಾರಿಗಿ
ಕೋಡ್ಲಿ ಮಸದ ಇಟ್ಟನ ಕಡಿಯಾಕ ಹೋಳ್ಳಿ ಬಂದರ ಊರಿಗಿ.
ಅಪ್ಪ ಗಳಿಸಿದ ಆಸ್ತಿ ಇತ್ತ ನಂದ ಏ೦ಟ ಕೂರಿಗಿ
ಕೂಡಿಯಾಕ ಸಾಲವಲ್ಲದ ಮಾರಿ ಬಾಕಿ ಕಟ್ಟಿನಿ ಬಾರಿಗಿ..
ರಾಮ-ಲಕ್ಷ್ಮಣನಂಗ ಇದ್ದವ ಜೋಡ ಹೋರಿ||2||
ಸಾಲ ಕೋಟ್ಟೊರು ಅವ್ನ ಹೋಡಕೋಂಡ ಹೋದ್ರ ಪೋರಿ...
ಚರಣ 3)
ಹುಟ್ಟಿದ ಕೂಸ ನನ್ನ ರೂಪ ಅಂತಾದಲ್ಲ ಊರುರಾ.
ಹೆಂಗ ಮುಚ್ಚಿ ಇಡತಿ ಕೇಳಿರ ನಿನ್ನ ಗಂಡನ ಮನಿಯವರ.
ನಿನ್ನ ಕೂಸಿಗಿ ನನ್ನ ಹೆಸರ ಕರಿತಿಯಂತ ಕಂಡಂಗ.
ಸ೦ಶ ಬಂದ ಕೇಳಿರ ಏನ ಹೇಳತಿ ನಿನ್ನ ಗಂಡಂಗ.
ಆತ ಏನ ಹುಡುಗಿ ನಿನಗ ಹೋಟ್ಟಿ ತುಂಬಾ ಉಂಡಂಗ.
ಊರ ಕಾಲಿ ಮಾಡ ಯವ್ವ ನಾಳಿ ಹೊತ್ತ ಹೋಂಡಂಗ.
ರೋಕ್ಕ ಕೊಟ್ಟರು ಸಿಗಂಗಿಲ್ಲ ಅಂತಾ ಸುಖ..||2||
ಎಷ್ಟೋ ದಿವಸ ಕೊಟ್ಟಿ ಹುಡಗಿ ಅಷ್ಟ ಸಾಕ.
Доступные форматы для скачивания:
Скачать видео mp4
-
Информация по загрузке: