ಅಕ್ಷರಬ್ಯಾಸದ ಮಾಹಿತಿ ಹಾಗೂ ಕೂಡ್ಲಿ ಶಾರದಾಪೀಠದ ವಿಶೇಷತೆ | aksharabhyasa at koodli, shimoga|must visit place
Автор: SS Digital Diaries
Загружено: 2022-02-04
Просмотров: 8045
kudli shri sharadhamba temple location :-
Kudli https://g.co/kgs/sHdSBV
aksharabhyasa timing :- morning 10.30am to 1.30pm
prasada timing :- 1pm to 2pm
aksharabhyasa puja price 250 rupees per child.
need to get these things for aksharabhyasam :-
1) slate and chalk ( ಸ್ಲೇಟ್ ಮತ್ತು ಬಳಪ)
2) 2 jaggery cube ( 2 ಅಚ್ಚು ಬೆಲ್ಲ)
3) dry coconut 2 (ಒಣ ಕೊಬ್ಬರಿ 2)
4) 2 coconut (ತೆಂಗಿನ ಕಾಯಿ 2)
5) 5 set of book /slate and chalk or pen or pencil ( ಐದು ಜೊತೆ ಪೆನ್ನು ಮತ್ತು ಪುಸ್ತಕ)
ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನ ಅಕ್ಷರಾಭ್ಯಾಸ ಮಾಡುವುದಿಲ್ಲ.
ಪುಟ್ಟ ಮಗು ಜಗತ್ತಿಗೆ ಕಣ್ಬಿಟ್ಟ ಕ್ಷಣದಿಂದಲೇ ಅದರ ಕಲಿಕೆ ಆರಂಭವಾಗಿರುತ್ತದೆ. ಕಣ್ಣಾಡಿಸುವುದು, ನಗುವುದು, ಕೂರುವುದು, ನಿಲ್ಲುವುದು, ಚಪ್ಪಾಳೆ ತಟ್ಟುವುದು, ಮಾತು ಎಲ್ಲವೂ ಮಗುವಿಗೆ ಕಲಿಕೆಯೇ. ಇವೆಲ್ಲ ತನ್ನನ್ನು ತಾನು ಸಂಭಾಳಿಸಿಕೊಳ್ಳಲು ಆಯಿತು. ಇದರ ಜೊತೆಗೇ ದೊಡ್ಡವರನ್ನು ನೋಡಿ ಕ್ಷಣಕ್ಷಣವೂ ಸಾಕಷ್ಟು ಕಲಿಯುತ್ತಲೇ ಇರುತ್ತದೆ. ಇಷ್ಟೆಲ್ಲ ಆಗಿ ಜ್ಞಾನಾರ್ಜನೆಗೆ ಸಜ್ಜಾಗುವಾಗ ಎರಡ್ಮೂರು ವರ್ಷಗಳು ಕಳೆದು ಹೋಗಿರುತ್ತವೆ. ಹಾಗಾಗಿಯೇ ಮಗುವಿಗೆ 2 ವರ್ಷದ ನಂತರ 4 ವರ್ಷದೊಳಗೆ ಅಕ್ಷರಾಭ್ಯಾಸ ಮಾಡಿಸುವ ಕ್ರಮ ಇದೆ. ಅಕ್ಷರಾಭ್ಯಾಸ ಎಂದರೆ ಓದು, ಬರಹದ ಆರಂಭ. ವಿದ್ಯೆಯನ್ನು ಆರಂಭಿಸುವಾಗ ವಿದ್ಯಾಧಿದೇವತೆ ಸರಸ್ವತಿಯ ಆಶೀರ್ವಾದ ಪಡೆದೇ ಮುಂದುವರಿಯಬೇಕು. ಈ ವಿದ್ಯಾರಂಭವನ್ನು ಮನೆಯಲ್ಲಿಯೇ ಆದರೂ ಸರಿ, ಇಲ್ಲವೇ ದೇವಸ್ಥಾನದಲ್ಲಾದರೂ ಸರಿ ಕ್ರಮವಾಗಿ ಮಾಡಿಸಬೇಕು.
ಈ ದಿನಗಳು ಒಳ್ಳೆಯದು
ಅಕ್ಷರಾಭ್ಯಾಸಕ್ಕೆ ವಸಂತ ಪಂಚಮಿ(ಮಾಘ ಶುಕ್ಲ ಪಂಚಮಿ) ಅತ್ಯುತ್ತಮ ದಿನ. ಏಕೆಂದರೆ ಅಂದು ಸರಸ್ವತಿ(Goddess Saraswati) ಮಾತೆಯ ಜನ್ಮದಿನ. ಈ ವರ್ಷ ಇದು ಫೆಬ್ರವರಿ 6ರಂದು ಬರುತ್ತದೆ. ಇದಲ್ಲದೆ, ದಸರ ಸಂದರ್ಭದಲ್ಲಿ ಮೂಲ ನಕ್ಷತ್ರದ ದಿನ ಕೂಡಾ ವಿದ್ಯಾರಂಭಕ್ಕೆ ಅತ್ಯುತ್ತಮವಾಗಿದೆ. ಈ ಎರಡು ದಿನಗಳಲ್ಲಿ ಅಕ್ಷರಾಭ್ಯಾಸ ಮಾಡಿಸಿದರೆ ಮಗುವು ಅತ್ಯಂತ ಹೆಚ್ಚು ಜ್ಞಾನ ಪಡೆಯುತ್ತದೆ ಹಾಗೂ ಉದ್ಯೋಗರಂಗದಲ್ಲಿ ಬಹಳ ಎತ್ತರಕ್ಕೇರುತ್ತದೆ ಎಂಬ ನಂಬಿಕೆ ಇದೆ. ವಸಂತ ಪಂಚಮಿಯ ದಿನ ಇಡೀ ದಿನ ಅತ್ಯುತ್ತಮವಾಗಿರುತ್ತದೆ, ಸಮಯ ನೋಡುವ ಅಗತ್ಯವಿಲ್ಲ.
ಇನ್ನು ನವರಾತ್ರಿಯ ಪಂಚಮಿ ತಿಥಿ, ಸೂರ್ಯನ ಹುಟ್ಟಿದ ದಿನವೆಂದು ಹೇಳಲಾಗುವ ರಥಸಪ್ತಮಿಯ ದಿನ (ಈ ವರ್ಷ ಫೆ.7) ಕೂಡಾ ಅಕ್ಷರಾಭ್ಯಾಸಕ್ಕೆ ಅತ್ಯುತ್ತಮವಾಗಿದೆ.
ಉತ್ತಮ ತಿಥಿ: 2, 3, 5, 7 ಹಾಗೂ 10.
ಉತ್ತಮ ದಿನ: ಸೋಮವಾರ(Monday), ಬುಧವಾರ(wednesday), ಗುರುವಾರ(Thursday) ಹಾಗೂ ಶುಕ್ರವಾರ(Friday)
ಉತ್ತಮ ನಕ್ಷತ್ರ: ಅಶ್ವಿನಿ, ಪುನರ್ವಸು, ಪುಶ್ಯಮಿ, ಹಸ್ತಾ, ಚಿತ್ತಾ, ಸ್ವಾತಿ, ಅನುರಾಧ, ಶ್ರವಣ ಹಾಗೂ ರೇವತಿ.
ಉತ್ತಮ ಲಗ್ನ: ಮೇಷ, ತುಲಾ, ಮಕರ, ಕರ್ಕಾಟಕ
Доступные форматы для скачивания:
Скачать видео mp4
-
Информация по загрузке: