Yadgir|| ವಿ.ಬಿ.ಆರ್ ಆಸ್ಪತ್ರೆ–ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 25ರಂದು ಉಚಿತ ನೇತ್ರ ಚಿಕಿತ್ಸೆ ಶಿಬಿರ
Автор: Awaaz Samvidhan
Загружено: 2025-12-21
Просмотров: 16
ವಿ.ಬಿ.ಆರ್ ಆಸ್ಪತ್ರೆ–ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 25ರಂದು ಉಚಿತ ನೇತ್ರ ಚಿಕಿತ್ಸೆ ಹಾಗೂ ಆರೋಗ್ಯ ತಪಾಸಣಾ ಶಿಬಿರ
ಯಾದಗಿರಿ: ದೇಶದ ಮಾಜಿ ಪ್ರಧಾನಿ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಾಜಿ ಸಚಿವ ದಿವಂಗತ ವಿಶ್ವನಾಥರೆಡ್ಡಿ ಮುದ್ನಾಳ ಅವರ ಜಯಂತಿ ಮತ್ತು ಮಾಜಿ ಶಾಸಕ ಹಾಗೂ ಖ್ಯಾತ ವೈದ್ಯರಾದ ದಿವಂಗತ ಡಾ. ವೀರಬಸಂತ ರೆಡ್ಡಿ ಮುದ್ನಾಳ ಅವರ ಜನ್ಮಸ್ಮರಣಾರ್ಥವಾಗಿ ಲಯನ್ಸ್ ಕ್ಲಬ್ ಯಾದಗಿರಿ, ವಿ.ಬಿ.ಆರ್ ಆಸ್ಪತ್ರೆ ಯಾದಗಿರಿ ಹಾಗೂ ಲಯನ್ಸ್ ಆಸ್ಪತ್ರೆ ಮಹೀಬೂಬುನಗರ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 25, 2025ರಂದು ವಡಗೇರಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ನೇತ್ರ ಚಿಕಿತ್ಸಾ ಹಾಗೂ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ವಡಗೇರಾ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಶಿಬಿರದ ಸದುಪಯೋಗ ಪಡೆಯುವಂತೆ ಮನವಿ ಮಾಡಲಾಯಿತು. ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ನಗರಕ್ಕೆ ಕರೆದೊಯ್ದು ಉಚಿತ ಚಿಕಿತ್ಸೆ ನೀಡಿ ಮರಳಿಸುವ ವ್ಯವಸ್ಥೆಯನ್ನು ಲಯನ್ಸ್ ಕ್ಲಬ್ ಮಾಡಲಿದೆ.ಸುದ್ದಿಗೋಷ್ಠಿಯಲ್ಲಿ ರಾಚನಗೌಡ ಮುದ್ನಾಳ, ಭೀಮನಗೌಡ ಕ್ಯಾತ್ನಾಳ, ಡಾ. ಶಿವಪುತ್ರರೆಡ್ಡಿ ಪಾಟೀಲ ಚಟ್ನಳ್ಳಿ, ವೆಂಕಟರೆಡ್ಡಿ ಪಾಟೀಲ ತಂಗಡಗಿ ಹಾಗೂ ಡಾ. ಸಿದ್ಧರಾಜರೆಡ್ಡಿ ಉಪಸ್ಥಿತರಿದ್ದರು.
#awaaz_samvidhan #ಆವಾಜ್_ಸಂವಿಧಾನ #yadgirnews #yagirlivenews
#Yadgiri #VBRHospital #LionsClubYadgiri
#FreeHealthCamp #FreeEyeCheckup #HealthForAll #EyeCareCamp #MedicalCamp
#CommunityHealth #Vadagera #PublicHealth
#ServiceToSociety #LionsService #FreeTreatment #ರಾಚನಗೌಡಮುದ್ನಾಳ
#ಭೀಮನಗೌಡಕ್ಯಾತ್ನಾಳ #ಡಾ_ಶಿವಪುತ್ರರೆಡ್ಡಿಪಾಟೀಲ
#ವೆಂಕಟರೆಡ್ಡಿಪಾಟೀಲತಂಗಡಗಿ #ಡಾ_ಸಿದ್ಧರಾಜರೆಡ್ಡಿ
#ಲಯನ್ಸ್‌ಕ್ಲಬ್‌ಯಾದಗಿರಿ #ಸಾಮಾಜಿಕಸೇವೆ
#ಆರೋಗ್ಯಶಿಬಿರ
Доступные форматы для скачивания:
Скачать видео mp4
-
Информация по загрузке: