ಅಕ್ಷಯ ಪಾತ್ರೆ ರಂಗೋಲಿ ಮತ್ತು ಅಕ್ಷಯ ಪಾತ್ರೆ ಹಾಡು | Aksyaya Patre Rangoli with Akshaya Patre Song
Автор: Geethanjali's cooking
Загружено: 2020-12-12
Просмотров: 8801
#GeethanjalisCooking #AkshayaPatreRangoli
ವಾದಿರಾಜ ವಿರಚಿತ ಅಕ್ಷಯಪಾತ್ರೆ ಹಾಡು
=================================
ಎದ್ದಾರು ವನವಾಸಕ್ಕೆ ಬುದ್ದಿವಂತ ಪಾಂಡವರು ||ಪ||
ಅಲ್ಲಿದ್ದ ಜನರು ಅಲ್ಲಿ ಇರಲಾರರೆಂದು ಸಿದ್ದರಾದರು
ಏನು ಮಾಡಿದನು ಪಾಪಿ ಮೂಢ ಶಕುನಿಯ ಮಾತು ಕೇಳಿ
ಆಡಿ ಪಗಡೆ ಸೋಲಿಸಿ ಅವರನು ಅಡವಿಗಟ್ಟಿದ ದುಷ್ಟ ದುರ್ಯೋಧನನು||1||
ನಿಮಗೆ ಪಗಡೆಯಾಡಿ ಸೋಲಿಸಿದ ವಾರ್ತೆಯನ್ನು ನೀವು ಕಳುಹಿಸುತಿರೆ
ಹೀಗೆ ಧನ ದ್ರವ್ಯವು ಇದ್ದ ಅವನಿಗೆ ದಯಾಧರ್ಮ ಎಳ್ಳಷ್ಟು ಬೇಡವೆ
ಲೋಭ ಮೋಹ ಪಾಶದಿಂದ ಬಿಗಿದುಕೊಂಡರು ||2||
ವಿಪ್ರರ ಮಾತು ಕೇಳಿ ದೌಮ್ಯಚಾರ್ಯರ ಪಾದಕ್ಕೆರಗಿ
ಅವರು ಹೇಳಿದಂತೆ ಮಾಡಿದ ಧರ್ಮಜ ಸೂರ್ಯೋಪಾಸನೆಯನ್ನು
ಕಂಡು ಸೂರ್ಯ ಪ್ರತ್ಯಕ್ಷನಾಗಿ ಏನು ಬೇಕು ಬೇಡು ಎಂದು ವರವ
ಕೊಟ್ಟನು ||3||
ಲಕ್ಷಕೋಟಿ ಬ್ರಾಹ್ಮಣರ ಭೋಜನವನ್ನು ಆಲಸ್ಯವಿಲ್ಲದಂತೆ ಮಾಡಿಸಬೇಕು
ಎಂಬ ಮಾತು ಕೇಳಿ ಕೊಟ್ಟ ಸೂರ್ಯ ಅಕ್ಷಯ ಪಾತ್ರೆಯ
ಸ್ವಚ್ಚವಾಗಿ ತೊಳೆದುತನ್ನ ಪತ್ನಿಯ ಕೈಯಲ್ಲಿ ಕೊಟ್ಟ ||4||
ಅಚ್ಯುತನ ನಾಮ ನಮಗೆ ಸಾರು ಪಲ್ಯ ವಾಸುದೇವನ ನಾಮ ಹಾಸಿಗೆ ತಲೆದಿಂಬು
ಅಕ್ಷಯಪಾತ್ರೆಯನ್ನು ಕೊಟ್ಟು ತೆರಳಿದ ಸೂರ್ಯ ||5||
ಇಷ್ಟವಾದ ವನದೊಳಗೆ ಅಷ್ಟ್ವೈಶ್ವರ್ಯದಿಂದಿದ್ದರು ಪಂಚಪಾಂಡವರು
ಮುತ್ತೈದೆಯರು ಉದಯ ಕಾಲದಲಿ ಈ ಪದವ ಹೇಳಿ ಕೇಳಿದರೆ
ಅಷ್ಟ್ವೈಶ್ವರ್ಯವನ್ನು ಕೊಟ್ಟು ಪುತ್ರಸಂತಾನವನ್ನು ಕೊಟ್ಟು ರಕ್ಷಿಸುವ ನಮ್ಮ ಶ್ರೀಹಯವದನನು ||6||
Доступные форматы для скачивания:
Скачать видео mp4
-
Информация по загрузке: