ಭಕ್ತ ಸುದನ್ವ ಕಾಳಗ ಬಯಲಾಟ ಕುಡೀತೀನಿ |ಭಾಗ 3
Автор: Bandri Lingappa drama artist
Загружено: 2026-01-18
Просмотров: 362
ಸುಮಾರು 150 ವರ್ಷಗಳ ಇತಿಹಾಸ ಇರುವ ಬಯಲಾಟ ಕಲೆಯು ನಮ್ಮ ಭಾಗದ ಬಹುದೊಡ್ಡ ಪರಂಪರೆ ಗ್ರಾಮೀಣ ಭಾಗದ ಜನರ ಮಾತಿನಲ್ಲಿ ರಾಮಾಯಣ ಮಹಾಭಾರತದ ಪರಂಪರೆಯನ್ನು ತಿಳಿಸಿದ್ದೆ ಈ ಕಲೆಯ ವಿಶೇಷ
ಬಯಲಾಟದ ಇತಿಹಾಸವು ೧೯ನೇ ಶತಮಾನದಷ್ಟು ಹಳೆಯದಾಗಿದ್ದು, ಯಕ್ಷಗಾನದಿಂದ ಹುಟ್ಟಿಕೊಂಡ ಬಯಲು ರಂಗಮંચದ ಕಲೆಯಾಗಿದೆ, ಇದು ಹೆಚ್ಚಾಗಿ ಉತ್ತರ ಕರ್ನಾಟಕದಲ್ಲಿ ಜನಪ್ರಿಯವಾಗಿದೆ; ಇದು ಹಾಡು, ಕುಣಿತ ಮತ್ತು ಸಂಭಾಷಣೆಗಳ ಮೂಲಕ ಮಹಾಕಾವ್ಯಗಳ ಕಥೆಗಳನ್ನು ಹೇಳುತ್ತದೆ, ಕುಮಾರರಾಮದಂತಹ ಪ್ರಾಚೀನ ಕೃತಿಗಳನ್ನು ಒಳಗೊಂಡಿದ್ದು, ಕಾಲಕ್ರಮೇಣ ದೊಡ್ಡಾಟ, ಸಣ್ಣಾಟದಂತಹ ರೂಪಗಳನ್ನು ಪಡೆದುಕೊಂಡು ಜನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ
ಕರ್ನಾಟಕ ಬಯಲಾಟ ಅಕಾಡೆಮಿ ಮತ್ತು ಸ್ಥಳೀಯ ಸಂಸ್ಥೆಗಳು ತರಬೇತಿ ಶಿಬಿರಗಳನ್ನು ನಡೆಸಿ, ಕಲಾವಿದರನ್ನು ಒಗ್ಗೂಡಿಸಿ ಈ ಕಲೆಗೆ ಮರುಜೀವ ನೀಡಲು ಪ್ರಯತ್ನಿಸುತ್ತಿವೆ.
ಬಯಲಾಟದ ನಾಟಕವನ್ನು ಊರಿನಲ್ಲಿ ಪ್ರದರ್ಶನವಾಗುವ ಎರಡು ದಿನದ ಮುಂಚಯೇ ಸುತ್ತಳ್ಳಿಗಳಿಗೆ ಡಂಗುರ ಸಾರಿ, ಕರಪತ್ರ ಹಂಚುತ್ತಾರೆ. ನಾಟಕ ಪ್ರದರ್ಶನ ದಿನದ ಮುನ್ನ "'ಗೆಜ್ಜೆಪೂಜೆ" ಮಾಡಿಸುತ್ತಾರೆ. ಗೆಜ್ಜೆಪೂಜೆ ಎಂದರೆ ಪಾತ್ರಾಧಾರಿಗಳು ಬಣ್ಣ ಹಚ್ಚಿ, ವೇಷಭೂಷಣ ತೂಟ್ಟು ತಾಲೀಮ್ ಮಾಡುವುದಾಗಿದೆ. ನಾಟಕದ ಪ್ರದರ್ಶನ ದಿನ ಪಾತ್ರ ವರ್ಗಕ್ಕೆ ಬಣ್ಣದ ಚೌಕಿಯಲ್ಲಿ ದೇವರ ಸ್ತುತಿ ಮಾಡಿ, ವಾದ್ಯಗಳ ಪೂಜೆ ಮಾಡುತ್ತಾರೆ. ಗುಡಿಯಲ್ಲಿಯೇ ಪೂಜೆ ಸಲ್ಲಿಸಿ ಅಲ್ಲೇ ಬಣ್ಣ ಹಚ್ಚಿಕೊಂಡು, ವೇಷ ಭೂಷಣಗಳನ್ನು ಧರಿಸಿ, ರಂಗಮಂಟಪಕ್ಕೆ ಬರುವ ಪದ್ದತಿ ಇದೆ. ಮೊದಲಿಗೆ ಗಣಪತಿ ಪೊಜೆಯನ್ನು ಮಾಡಿ, ರಂಗಮಂಟಪಕ್ಕೆ ಬಾಲಗಣಪತಿ ವೇಷದ ಪಾತ್ರಧಾರಿ ಆಗಮಿಸಿ, ಜೊತೆಗೆ ನಾಟಕದ ಸೂತ್ರಧಾರಿ ಸಾರಥಿಯು ಜೊತೆಗೆ ಸಂಭಾಷಣೆ ಮಾಡಿ, ನಾಟಕವನ್ನು ಯಾವುದೇ ಅಡ್ಡಿ-ಆತಂಕಗಳಿಲ್ಲದೇ ನೆರವೇರಿಸಲು ಸಾರಥಿ ಬಾಲಗಣಪತಿ ಹತ್ತಿರ ಬೇಡಿಕೊಳ್ಳುತ್ತಾನೆ. ನಂತರ ನಾಟಕ ಪ್ರದರ್ಶನ ಆರಂಭವಾಗುತ್ತದೆ. ಊರಿನ ಗ್ರಾಮ ದೇವ-ದೇವತೆಗಳ ಸ್ತುತಿ ಮಾಡುತ್ತಾರೆ.
ಸ್ತುತಿ
ಶ್ರೀ ಗೌರಿವರಪುತ್ರಾ ಸತತಾ ಶುಭ ಚರಿತ್ರಾ
ಯೋಗಿ ಸಜ್ಜನ ಸ್ತೋತ್ರಾ| ಗಜನಿಭಾಗಾತ್ರಾಃ||೧||
ನಿಟಿಲ ನೇತ್ರನ ಸುತನೆ| ನಿಗಮಾಗಮ ವಂದಿತನೆ
ಸುಚಿತಾ ಸನ್ನಿತರ್ಣಾ| ಕುಂಟಲಾಭರಣಾ||೨|
ರಂಗಮಂಟಪ
ಬಯಲಾಟವು ರಾತ್ರಿಯೆಲ್ಲಾ ನಡೆದು ಸೂರ್ಯೋದಯದ ವೇಳೆಗೆ ಮುಕ್ತಾಯವಾಗುತ್ತದೆ. ದೊಡ್ಡಾಟಕ್ಕೆ ಮಂಟಪ ಕಟ್ಟುವುದೇ ಒಂದು ದೊಡ್ಡ ಕೆಲಸ. ಆಟಕ್ಕೆ ಇನ್ನು ಹತ್ತಿಪ್ಪತ್ತು ದಿನ ಇರುವಾಗಲೇ ಆಡುವ ಜಾಗವನ್ನು ಆಯ್ಕೆ ಮಾಡಿ ಅಲ್ಲಿ 'ಹಂದರಗಂಬ'ವೊಂದನ್ನು ನಿಲ್ಲಿಸುತ್ತಾರೆ. ಈ ಕಂಬ ಆಟಕ್ಕೆ ಮುಂಚನೆಯಿದ್ದಂತೆ; ಪ್ರದರ್ಶನಕ್ಕೆ ಪ್ರಚಾರವಿದ್ದಂತೆ. ಆಟ ಇನ್ನು ಒಂದೆರಡು ದಿನವಿರುವಾಗ ತಂಡದ ಸದಸ್ಯರೆಲ್ಲ ಸೇರಿ 'ಅಟ್ಟ' ಕಟ್ಟಲು ಪ್ರಾರಂಭಿಸುತ್ತಾರೆ. ಸಾಮಾನ್ಯವಾಗಿ ಊರಿನ ಮಧ್ಯ ಭಾಗದಲ್ಲಿ ಜನ ಹೆಚ್ಚಾಗಿ ಸೇರುವಂತಹ ವಿಶಾಲವಾದ ಬಯಲಿನಲ್ಲೋ ಅಥವಾ ದೇವಸ್ಥಾನದ ಮುಂಭಾಗದಲ್ಲೋ ಬಯಲಾಟದ ಅಟ್ಟ ಕಟ್ಟುತ್ತಾರೆ.ಸಣ್ಣ ಗೂಟಗಳನ್ನು ನೆಟ್ಟು ಅದರ ಮೇಲೆ ಹಲಗೆಗಳನ್ನು ಹರಡಿ ಬಿಗಿದು ಎತ್ತರದ ವೇದಿಕ ಸಿದ್ದ ಮಾಡುತ್ತಾರೆ. ಈ ವೇದಿಕೆ ಸುಮಾರು ೩೦*೪೦ರಷ್ಟಿರುತ್ತದೆ.ಇದಕ್ಕೆ 'ಮಂತು' ಹಾಕುವುದು ಎಂದು ಹೇಳುತ್ತಾರೆ. ವೇದಿಕೆಯ ಮೇಲೆ ಸುಮಾರು ೧೦ ಮೊಳ ಎತ್ತರದ ಚಪ್ಪರ ಹಾಕಿ ಸುತ್ತ ಮೂರು ಕಡೆಯಿಂದಲೂ ತಗಡು, ಸೋಗೆ ಅಥವಾ ಜಮಖಾನ ಮೊದಲಾದವುಗಳಿಂದ ಮುಚ್ಚುತ್ತಾರೆ. ಚಪ್ಪರದಲ್ಲಿ ಹಿಂದಿನ ಒಂದಿಷ್ಟು ಭಾಗವನ್ನು ಬಣ್ಣ ಹಚ್ಚುವುದಕ್ಕೆ, ವೇಷಭೂಷಣ ಹಾಕಿಕೊಳ್ಳುವುದಕ್ಕೆ ಬಿಟ್ಟುಕೊಂಡಿರುತ್ತಾರೆ. ಇದಕ್ಕೆ 'ಚೌಕಿ' ಎನ್ನುತ್ತಾರೆ. ಮಂಟಪದ ಮುಖಭಾಗಕ್ಕೊಂದು ಹಿಂದಕ್ಕೊಂದು ಪರದೆ ಇರುತ್ತದೆ ರಾತ್ರಿ ಊಟ ಮುಗಿದ ಮೇಲೆ ಸುಮಾರು 8 ಗಂಟೆ ವೇಳೆಗೆ ಬಯಲಾಟ ಆರಂಭವಾಗುವುದು.
ಬಯಲಾಟದಲ್ಲಿ ಪೌರಾಣಿಕ ಕಥೆಗಳಾದ ರಾಮಾಯಣ, ಮಹಾಭಾರತದಿಂದ ಆರಿಸಿಕೊಂಡ ಪ್ರಸಂಗಗಳೇ ಹೆಚ್ಚು. ಕುರುಕ್ಷೇತ್ರ, ಕೃಷ್ಣಸಂಧಾನ, ಸುಗಂಧ ಪುಷ್ಪಹರಣ, ವಿರಾಟ ಪರ್ವ, ಕರ್ಣಪರ್ವ, ಸುಧನ್ವಾರ್ಜನ, ತಾರಕಾಸುರ ವಧೆ, ವೀರ ಅಭಿಮನ್ಯು, ಆಶ್ವಮೇಧಯಾಗ, ವಾಲಿ-ಸುಗ್ರೀವ ಕಾಳಗ, ದ್ರೌಪದೀ ವಸ್ತ್ರಾಪಹರಣ, ರತಿಕಲ್ಯಾಣ, ಲವಕುಶರ ಕಾಳಗ, ತಾಮ್ರಧ್ವಜನ ಕಾಳಗ, ಅಹಿರಾವಣ- ಮಹಿರಾವಣ, ಶ್ವೇತ ಚರಿತ್ರೆ, ಭೀಮಾರ್ಜುನರ ಯುದ್ದ, ಕರ್ಣಾರ್ಜುನರ ಕಾಳಗ, ಕಲಾವತಿ ಸ್ವಯಂವರ, ವೃತ್ತಪಾಲಕರಾಜ, ದುರ್ಗಾಸುರನ ಕಾಳಗ, ಭೀಷ್ಮಪರ್ವ, ಸುಭದ್ರಾಕಲ್ಯಾಣ, ಭಕ್ತ ಮಾರ್ಕಂಡೇಯ, ಸತ್ಯ ಹರಿಶ್ಚಂದ್ರ, ಇಂದ್ರಜಿತ್ ಕಾಳಗ, ಹಿಡಂಬಿ ಕಲ್ಯಾಣ, ಊರ್ವಶಿ, ರಾಮಾಂಜನೇಯ ಯುದ್ದ, ಲಂಕಾದಹನ, ಜಲಂಧರನ ಕಾಳಗ, ಸಾನಂದ ಗಣೇಶ, ಪಾಂಡುವಿಜಯ, ಕರಿಭಂಟನ ಕಾಳಗ, ಚಂದ್ರಹಾಸ, ವಿಕ್ರಮಾರ್ಜುನ ಕಥೆ, ಕನಕಾಂಗಿ ಕಲ್ಯಾಣ, ಕುಂಭನೀ ಯಾಗ, ಬಾಣಾಸುರನ ಕಾಳಗ, ಸೀತಾಪಹರಣ, ಮದನಸುಂದರಿ, ಬಾಣಾಸುರನ ಕಾಳಗ, ಲಂಕಾದಹನ, ಅಲ್ಲಮಪ್ರಭು, ಪ್ರಮೇಳ, ಕರಿಭಂಟನ ಕಾಳಗ ಇತ್ಯಾದಿ ಆಟಗಳನ್ನು ಆಡುತ್ತಾರೆ
Доступные форматы для скачивания:
Скачать видео mp4
-
Информация по загрузке: