ಈ ಒಂದು ಕೆಲಸ ಮಾಡಿದರೆ ಆನಂದ ಸದಾ ನಮ್ಮೊಂದಿಗಿರುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ
Автор: Avadhootha
Загружено: 2023-05-11
Просмотров: 18797
ಈ ಒಂದು ಕೆಲಸ ಮಾಡಿದರೆ ಆನಂದ ಸದಾ ನಮ್ಮೊಂದಿಗಿರುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ
ಶಸ್ತ್ರಗಳಿಂದ ಪ್ರಪಂಚ ಸರಿಮಾಡೋಕೆ ಈಗ ಪ್ರಯತ್ನ ಆಗ್ತಿದೆ. ಆದರೆ ಶಾಸ್ತ್ರ ಇಲ್ಲದೇ ಜಗತ್ತನ್ನು ಸರಿಮಾಡೋದೇ ಆಧ್ಯಾತ್ಮ. ಶಸ್ತ್ರದಿಂದ ಬದಲಾವಣೆ ಮಾಡಿದ್ರೆ ಕ್ರಾಂತಿ. ಶಾಸ್ತ್ರದಿಂದ ಬದಲಾವಣೆ ಮಾಡಿದ್ರೆ ಶಾಂತಿ. ದೇಹಕ್ಕೆ ಖಾಯಿಲೆ ಅಂಟುವ ಮೊದಲು ಮನಸ್ಸಿಗೆ ಅಂಟುತ್ತೆ. ಅದನ್ನು ಸರಿಮಾಡೋದು ಶಾಸ್ತ್ರದಿಂದ ಆಗುತ್ತೆ. ಅದಕ್ಕೆ ಭಗವದ್ಗೀತೆ, ರಾಮಾಯಣ ಮತ್ತು ಮಹಾಭಾರತ ಅಂತಹ ಧರ್ಮಗ್ರಂಥಗಳು ಅವಶ್ಯವಿದೆ. ಇದೆಲ್ಲಾ ಜನಸಾಮಾನ್ಯರಿಗೆ ಅರ್ಥ ಮಾಡಿಕೊಳ್ಳೋದು ಕಷ್ಟ ಅಂತಲೇ ಎಲ್ಲ ವೇದಗಳನ್ನು ಅನುಭವ ಮಂಟಪ ಎನ್ನುವ ಅದ್ಭುತ ಕಲ್ಪನೆಯಲ್ಲಿ ಸರಳವಾಗಿ ಹೇಳಲು ದಾರ್ಶನಿಕರು ವಚನಗಳನ್ನು ಹೇಳಿದರು. ಭಗವದ್ಗೀತೆಗೆ ಜಗತ್ತನ್ನು ಬದಲು ಮಾಡುವ ಶಕ್ತಿ ಇದೆ. ಜಗತ್ತಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವ ಏಕೈಕ ಜಾಗ ಭಗವದ್ಗೀತೆ. ಭಗವದ್ಗೀತೆಯನ್ನು ಅರಿತಾಗ ಅಲ್ಲಿ ಪ್ರಶ್ನೆಗಳಿರುವುದಿಲ್ಲ. ಜಗತ್ತಿನ ದೇವರಕೋಣೆ ಭಾರತವೇ ಆಗಿದೆ. ವ್ಯಸನದಿಂದ ಪಡೆಯುವುದು ಸುಖ ಅದು ಆನಂದ ನೀಡುವುದಿಲ್ಲ. ಆನಂದವನ್ನು ಕಂಡುಕೊಳ್ಳುವ ವಿಧಾನ ಸೇವೆಯಲ್ಲಿದೆ. ಇದೇ ಜಗತ್ತಿನ ಬದಲಾವಣೆಯ ಸೂತ್ರ. ಧರ್ಮ ಎಂದರೆ ದಯೆ. ದಯೆ ಇಲ್ಲ ಧರ್ಮ ಯಾವುದಯ್ಯಾ ಎಂಬ ಮಾತಿನ ಹಾಗೆ ದಯೆಯೇ ಧರ್ಮದ ಮೂಲ ಅಂದರೆ ತಪ್ಪಲ್ಲ. ನಮ್ಮ ಮಡಿ ಮೈಲಿಗೆ ಆಚರಣೆ ಪ್ರಕೃತಿ ವಿಕೋಪದ ರೀತಿಯಲ್ಲಿ ನಮಗೆ ಪಾಠ ಕಲಿಸುತ್ತದೆ. ನಾಲ್ಕು ದಿನ ವೇದ ಓದೋಕಿಂತ ಒಂದು ದಿನ ಭೇದ ಇಲ್ಲದೇ ಜೀವನ ಮಾಡಬೇಕು. ನಾವು ಬೇರೆ ಬೇರೆ ಜಾತಿ ಇರಬಹುದು, ಬೇರೆ ಬೇರೆ ಭಾಷೆ ಮಾತನಾಡಬಹುದು, ಬೇರೆ ಬೇರೆ ಆಹಾರ ಪದ್ಧತಿ ಅಳವಡಿಸಿಕೊಂಡಿರಬಹುದು, ಬೇರೆ ಬೇರೆ ರೂಪ ಇರಬಹುದು. ಆದರೆ ನಿಂತ ನೆಲ ಒಂದೇ. ನಮ್ಮ ಹೃದಯ ಒಂದೇ. ನಮ್ಮನ್ನು ಪೋಷಿಸುತ್ತಿರೋ ಭಾರತ ಮಾತೆ ಒಂದೇ. ಜೀವ ಶಿವ ಆಗುವುದು ಸೇವೆಯಿಂದ. ಪ್ರಾಣಿಯಾದವನು ವಿವೇಕಪ್ರಜ್ಞೆಯಿಂದ ಪ್ರಜೆ ಆಗಬಹುದು. ಪ್ರಜೆ ಮನುಷ್ಯತ್ವದಿಂದ ಮಾನವ ಆಗಬಹುದು. ಮಾನವ ನಿಸ್ವಾರ್ಥ ಸೇವೆಯಿಂದ ಮಾಧವ ಆಗಬಹುದು. ಈ ಪರಿಕಲ್ಪನೆಯನ್ನೇ ಶೂನ್ಯ ಸಿಂಹಾಸನ ಎಂದು ಅಲ್ಲಮ ಮಹಾ ಪ್ರಭುಗಳು ತಿಳಿಸಿದ್ದಾರೆ.
For More Videos:
ಮನೆ ಒಡತಿ ಹೇಗಿರಬೇಕು? | ಅವಧೂತ ಶ್ರೀ ವಿನಯ್ ಗುರೂಜಿ • ಮನೆ ಒಡತಿ ಹೇಗಿರಬೇಕು? | ಅವಧೂತ ಶ್ರೀ ವಿನಯ್ ಗುರೂಜಿ
ಇದು ಕುಂಡಲಿನೀ ಶಕ್ತಿಯನ್ನು ಸಾಧಿಸುವ ರಹದಾರಿ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ಕುಂಡಲಿನೀ ಶಕ್ತಿಯನ್ನು ಸಾಧಿಸುವ ರಹದಾರಿ! | ...
ಮಾಂಸಾಹಾರ ಮತ್ತು ದೇವತಾರಾಧನೆ | ಸಂಪೂರ್ಣ ಮಾಹಿತಿ | ಅವಧೂತ ಶ್ರೀ ವಿನಯ್ ಗುರೂಜಿ
• ಮಾಂಸಾಹಾರ ಮತ್ತು ದೇವತಾರಾಧನೆ | ಸಂಪೂರ್ಣ ಮಾಹಿತಿ...
ಉತ್ತರಹಳ್ಳಿ ಅವಧೂತ ಆಶ್ರಮದಲ್ಲಿ ಶಿವರಾತ್ರಿ ಆಚರಿಸಿದ ಭಕ್ತಸಾಗರ ! | ಅವಧೂತ ಶ್ರೀ ವಿನಯ್ ಗುರೂಜಿ • ಉತ್ತರಹಳ್ಳಿ ಅವಧೂತ ಆಶ್ರಮದಲ್ಲಿ ಶಿವರಾತ್ರಿ ಆಚರಿ...
ಅವಧೂತರ ಶಿವಾರಾಧನೆ | ಶಿವರಾತ್ರಿ ವಿಶೇಷ | ಅವಧೂತ ಶ್ರೀ ವಿನಯ್ ಗುರೂಜಿ • ಅವಧೂತರ ಶಿವಾರಾಧನೆ | ಶಿವರಾತ್ರಿ ವಿಶೇಷ | ಅವಧೂತ...
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #health #tips #homeremedies
#hospital #medicine #Family #Familylife #blessing #GayatriMantra
Доступные форматы для скачивания:
Скачать видео mp4
-
Информация по загрузке: