ಏನು ವಲ್ಲೆ ಶ್ರೀಹರಿ ನಿನ್ನ ಸ್ತುತಿಸಿ ಕೇಳೋದು. ದಾಸರಪದ --ಕನಕದಾಸರು
Автор: Manjula Nagaraj
Загружено: 2025-12-06
Просмотров: 96
ರಚನೆ: ಕನಕದಾಸರು
ಅಂಕಿತ ನಾಮ: ಆದಿಕೇಶವ
ಗಾಯನ: ಶ್ರೀಮತಿ ಮಂಜುಳ ನಾಗರಾಜ್
ಸಾಹಿತ್ಯ :
ಏನು ವಲ್ಲೆ ಶ್ರೀಹರಿ ನಿನ್ನ ಸ್ತುತಿಸಿ ಕೇಳೋದು
ಏನು ವಲ್ಲೆ ಶ್ರೀಹರಿ ನಿನ್ನ ಸ್ತುತಿಸಿ ಕೇಳೋದು
ಜ್ಞಾನ ಭಕ್ತಿ ಕೊಡು ಎನಗದೊಂದೆ ದೊಡ್ಡದು llಪll
ಹಿಂದೆ ನನ್ನ ಅನ್ನೋರೆಲ್ಲ ಅಂದಣವೇರಲಿ
ಮುಂದೆ ಎನ್ನ ಅನ್ನೋರೆಲ್ಲ ಚಂದವಾಗಿರಲಿ ll2ll
ಕುಂದು ಇಟ್ಟೋರೆಲ್ಲಾ ಕುದುರೆ ಕಟ್ಟಿ ಬಾಳಲಿ ll2ll
ಬಂದು ಒದಗೋರೆಲ್ಲ ಭತ್ತದ ಗದ್ದೆ ಬೆಳೆಯಲಿ ll೧ll
ಎನಗೊಂದು ನೆವದಿಂದ ಕಾಡಿದವರಿಗೆ
ಕನ್ಯಾದಾನ ಮಾಡಿದ ಪುಣ್ಯವು ಬರಲಿ ಅವರಿಗೆll2ll
ಜಂಭದಿಂದ ಸ್ತುತಿ ಭಾದೆ ಪಡಿಸಿದವರಿಗೆll2ll
ಹುಟ್ಟಲಿ ಹೆಣ್ಣು ಗಂಡು ಮಕ್ಕಳು ಆಗಲಿ ಅವರಿಗೆll೨ll
ಮಂದಿಯೊಳಗೆ ಮಾನಭಂಗ ಮಾಡಿದವರಿಗೆ
ಜೇನು ತುಪ್ಪ ಸಕ್ಕರೆ ಊಟ ಆಗಲಿ ಅವರಿಗೆll2ll
ಹಾನಿ ಬಾರದಂತ ಲೋಕ ಬರಲಿ ಅವರಿಗೆ ll2ll
ಮಹಾನುಭಾವ ಮುಕ್ತಿ ಕೊಡೋ ಆದಿಕೇಶವ
ನೆಲೆ ಆದಿಕೇಶವ ll೩ll
ರಚನೆ ------ಕನಕದಾಸರು
Доступные форматы для скачивания:
Скачать видео mp4
-
Информация по загрузке: