#ಇದುಭಾಗ್ಯಇದುಭಾಗ್ಯಇದುಭಾಗ್ಯವಯ್ಯಾ
Автор: Veena Krishnappa
Загружено: 2025-11-15
Просмотров: 92
#dasasahitya #song #bhajan #music #devotionalsongs #dasarapada #ದಾಸರಪದಗಳು #ಇದುಭಾಗ್ಯಇದುಭಾಗ್ಯವಯ್ಯಾ #IdubhagyaIdubhagyavayya #ಪುರಂದರದಾಸರು #ಪುರಂದರವಿಠಲ #ದಾಸಸಾಹಿತ್ಯ #ಕನ್ನಡಭಜನೆಗಳು #kannadadevotionalsongs #kannadabhajane #ಕನ್ನಡಸಾಹಿತ್ಯ #purandaradasaru #purandaravithala #dasarapadagalu #ದಾಸರಪದ
for more bhajans, easyDasarapada please do like share and Subscribe my you tube channel.
@veenakrishnappa6010
Song.. ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ರಚನೆ... ಪುರಂದರ ದಾಸರು.
ಅಂಕಿತ.. ಪುರಂದರ ವಿಠಲ.
ಕನ್ನಡ..
ಇದು ಭಾಗ್ಯ ಇದು ಭಾಗ್ಯ
ಪುರಂದರ ದಾಸರು
ಪುರಂದರ ದಾಸರು
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ || ಪ ||
ಪದುಮನಾಭನ ಪಾದಭಜನೆ ಸುಖವಯ್ಯಾ || ಅ.ಪ. ||
ಕಲ್ಲಾಗಿರಲು ಬೇಕು ಕಠಿಣ ಭವತೊರೆಯೊಳಗೆ
ಬಿಲ್ಲಾಗಿರಲು ಬೇಕು ಬಲ್ಲವರೊಳು
ಮೆಲ್ಲನೆ ಮಾಧವನ ಮನವ ಮೆಚ್ಚಿಸಬೇಕು
ಬೆಲ್ಲವಾಗಲುಬೇಕು ಬಂಧುಜನರೊಳಗೆ || 1 ||
ಬುದ್ಧಿಯಲಿ ತನುಮನವ ತಿದ್ದಿಕೊಳ್ಳಲುಬೇಕು
ಮುದ್ದಾಗಿರಬೇಕು ಮುನಿಯೋಗಿಗಳಿಗೆ
ಮಧ್ವಮತಾಬ್ಧಿಯೊಳು ಮೀನಾಗಿರಲು ಬೇಕು
ಶುದ್ಧನಾಗಿರಬೇಕು ಕರಣತ್ರಯಗಳಲಿ || ೨ ||
ವಿಷಯಭೋಗದ ತೃಣಕೆ ಉರಿಯಾಗಿರಲು ಬೇಕು
ನಿಶಿಹಗಲು ಶ್ರೀಹರಿಯ ನೆನೆಯಬೇಕು
ವಸುದೇವ ಶ್ರೀಪುರಂದರ ವಿಠಲರಾಯನ
ಹಸನಾದ ದಾಸನ ಸೇವಿಸಲುಬೇಕು || ೩ ||
Доступные форматы для скачивания:
Скачать видео mp4
-
Информация по загрузке: