ಪೋಷಕ -ಶಿಕ್ಷಕರ ಮಹಾಸಭೆ 14 ನವೆಂಬರ್ 2025, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಚನ್ನಪಟ್ಟಣ
Автор: Dhananjaya K S
Загружено: 2025-11-17
Просмотров: 178
ನವೆಂಬರ್ 14ರ ಮಕ್ಕಳ ದಿನಾಚರಣೆಯ ದಿನದಂದು ಚನ್ನಪಟ್ಟಣ ಟೌನ್ ನಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪೋಷಕರು, ಉಪನ್ಯಾಸಕರು, ಕಾಲೇಜು ಅಭಿವೃದ್ಧಿ ಸಮಿತಿ, ಮಕ್ಕಳ ಹಕ್ಕುಗಳ ತಜ್ಞರು ಮತ್ತು ಇಲಾಖಾಧಿಕಾರಿಗಳು ಒಟ್ಟಿಗೆ ಸಭೆ ಸೇರಲಾಗಿತ್ತು. ವಿದ್ಯಾರ್ಥಿಗಳ ಹಕ್ಕುಗಳು, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯಿದೆ, ವಿದ್ಯಾರ್ಥಿಗಳು ಮತ್ತು ಪೋಷಕರ ನಡುವಿನ ಹಿತಕರ ಸಂಬಂಧ, ಕಾಲೇಜಿನ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬರ ಪಾತ್ರದ ಬಗ್ಗೆ ವಿಸ್ತೃತ ಮಾತುಕತೆ ನಡೆದ ಫಲಪ್ರದ ಕಾರ್ಯಕ್ರಮ ಇದಾಗಿತ್ತು. ಸರ್ಕಾರ, ಇಲಾಖೆಯ ಆದೇಶದಂತೆ, ಪೂರ್ವ ಯೋಜನೆಯಂತೆ ನಡೆದ ಕಾರ್ಯಕ್ರಮದಲ್ಲಿ ಚನ್ನಪಟ್ಟಣ ತಾಲ್ಲೂಕಿನ ತಾಲೂಕು ದಂಡಾಧಿಕಾರಿಗಳು ಮತ್ತು ತಹಸೀಲ್ದಾರ್ ಆದ ಗಿರೀಶ್ ಬಿ ಎನ್ ರವರು ವಿದ್ಯಾರ್ಥಿಗಳಿಗೆ ಹಾಡು, ಕಥೆಗಳ ಮೂಲಕ ಸಂವಾದ ನಡೆಸುತ್ತಾ ಮೌಲ್ಯ ಮತ್ತು ಶಿಕ್ಷಣ ಮೈಗೂಡಿಸಿಕೊಳ್ಳಬೇಕು ಎಂದು ಹುರಿದುಂಬಿಸಿದರು. ಹಿರಿಯ ವಕೀಲರಾದ ಧರ್ಮೇಂದ್ರ ಅವರು ವಿದ್ಯಾರ್ಥಿಗಳಿಗೆ ಅತಿ ಉಪಯುಕ್ತವಾದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಅರಿವು ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಲಿಂಗಯ್ಯ, ಪ್ರಾಂಶುಪಾಲರಾದ ಉಮಾ ಎಸ್, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ನಾಗರಾಜು ಕೆ, ಸದಸ್ಯರಾದ ನಾಗರಾಜು ಹೆಚ್ ಸಿ, ರಾಧಿಕಾ ಕುಮಾರಸ್ವಾಮಿ ಹಾಜರಿದ್ದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಿತವಚನ ನುಡಿದರು. ವಿದ್ಯಾರ್ಥಿಗಳಿಂದಲೇ ಕಾರ್ಯಕ್ರಮ ನಿರ್ವಹಣೆಯಾಯಿತು. ಉಪನ್ಯಾಸಕರಾದ ಮಮತಾ ಜಿ ಎಂದು ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಓದು ಬೋಧಿಸಿದರು. ಉಪನ್ಯಾಸಕರಾದ ಶೈಲಜಾ ಕಾಲೇಜು ಅಭಿವೃದ್ಧಿಯಲ್ಲಿ ಪೋಷಕರ ಪಾತ್ರದ ಬಗ್ಗೆ ವಿವರಣೆ ನೀಡಿದರು. ಕನ್ನಡ ಉಪನ್ಯಾಸಕರಾದ ರಾಮು ಕೆ ರವರು ಪೋಷಕರೊಂದಿಗೆ ಸಂವಾದ ನಡೆಸಿದರು. ಮೇ ಸಭೆಯಲ್ಲಿ ಹಾಜರಿದ್ದ ಕೆಲವು ಪೋಷಕರು ಮಾತನಾಡಿದರು. ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬರಲು ಶ್ರಮಿಸಿದರು.
#college #parenting #parentingtips #girl #Girlscollege #motivation #girlsempowerment #teacher #education #ptm # Teacher-Parent meet
Доступные форматы для скачивания:
Скачать видео mp4
-
Информация по загрузке: