ದುಷ್ಟರ ದುಷ್ಟದ ಬೀಡಾದ ಸುಕ್ಷೇತ್ರದ ಉದ್ಯಾನವನ | 07 01 2026 | Kannada today News
Автор: KANNADA TODAY NEWS
Загружено: 2026-01-07
Просмотров: 306
ಭಯಾನಕವಾದ ಅಮರೇಶ್ವರ ದೈವಿವನ..!
ಲಿಂಗಸುಗೂರು ತಾಲೂಕಿನ ಐತಿಹಾಸಿಕ ದೇವಸ್ಥಾನಗಳಲ್ಲಿ ಒಂದಾದ ಶತಮಾನಗಳಿಂದಲೂ ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳ ಲಕ್ಷಾಂತರ ಭಕ್ತರ ಆರಾಧ್ಯ ದೈವವಾದ ಶ್ರೀ ಅಮರೇಶ್ವರ ದೇವಸ್ಥಾನವು ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದ್ದರೂ ಅಭಿವೃದ್ಧಿಯಲ್ಲಿ ಹಿನ್ನಡೆಯಲ್ಲಿ ಸಾಗುತ್ತಿರುವುದು ಅತಿ ವಿಷಾದನೀಯ
ದೇವಸ್ಥಾನದ ಹಿಂಬಾಗಕ್ಕೆ ಹೊಂದಿಕೊಂಡಿರುವ ಉದ್ಯಾನವನ ಶಿವನ ವಿಗ್ರಹ , ವಾಲ್ಮೀಕಿ ಆಶ್ರಮದ ಮುಂದೆ ಸೀತಾ ಮಾತಾ , ಲವ - ಕುಶ ರ ವಿಗ್ರಹ ವಿಧ್ಯಾಭಾಸದ ಸ್ಥಿತಿಯಲ್ಲಿ ವಿಗ್ರಹಗಳಿಂದ ಸುಂದರ ಅಲಂಕೃತವಾಗಿದ್ದ ಉದ್ಯಾನವನ ಇಂದು ಬಿಕೋ ಎನ್ನುತ್ತಿದೆ. ಒಣಗಿದ ಬಳ್ಳಿಗಳು, ಬತ್ತಿದ ಮರಗಳು, ಉದ್ಯಾನವನ ಸಂಪೂರ್ಣ ಹದಗೆಟ್ಟಿದ್ದು ದುಷ್ಟರ ದುಶ್ಚಟದ ಬೀಡಾಗಿ ಮಾರ್ಪಟ್ಟಿದ್ದು ದುಃಖದ ಸಂಗತಿ.
ಅರಣ್ಯ ಇಲಾಖೆ ಅಧಿಕಾರಿಗಳು ದೇವಸ್ಥಾನದ ಮಂಡಳಿ ಜಾಗೃತಿಯಿಂದ ಉದ್ಯಾನವನ ಮರು ನಿರ್ಮಾಣಕ್ಕೆ ಮುಂದಾಗಿ ಸುಂದರ ತಾಣವನ್ನು ಪುನಶ್ಚೇತನಗೊಳಿಸಿ ತಾಲೂಕಿನ ಐತಿಹಾಸಿಕ ದೇವಸ್ಥಾನದ ಘನತೆ ಗೌರವ ಕಾಪಾಡುವುದು ಅತ್ಯಗತ್ಯ
Доступные форматы для скачивания:
Скачать видео mp4
-
Информация по загрузке: