ಆರತಿ ಹಾಡುಗಳು || Aarathi songs
Автор: Uma Rao's Music Class
Загружено: 2024-07-07
Просмотров: 36906
ಆರತಿ ಹಾಡುಗಳು || Aarathi songs
Song - 1
ಆರತಿ ಬೆಳಗಿರೆ ಶಂಕರಿಗೆ
ವರದುರ್ಗಾಲಕ್ಷ್ಮಿ ಸರಸ್ವತಿಗೆ
ನಾರಿಯರೆಲ್ಲರು ಸೇರುತ ಮಂಗಳ
ಗೀತೆಯ ಹಾಡುತ ಹರುಷದಲ
ಧನುಜ ಸಂಹಾರಿಣಿ ವಿಶ್ವಕಲ್ಯಾಣಿ
ಚಾಮುಂಡೇಶ್ವರಿ ದಯಾಮಯಿ
ಹಿಮಗಿರಿ ನಂದಿನಿ ಮೂರ್ಜಗವಂದಿನಿ
ಆನಂದ ರೂಪಿಣಿ ಪಾರ್ವತಿಗೆ
ವಿದ್ಯದಾಯಿನಿ ಬುದ್ಧಿ ಪ್ರದಾಯಿನಿ
ವಿಶ್ವ ವಿನೋದಿನಿ ಶಾರದೆಗೆ
ವಾಣಿ ವೀಣಾ ಪುಸ್ತಕ ಪಾಣಿ
ಬ್ರಹ್ಮನ ರಾಣಿ ಭಾರತಿಗೆ
ಕ್ಷೀರ ಶರಾಧಿಸುತೆ ಸುರವರಸನ್ನುತೇ
ಶ್ರೀಹರಿದಯಿತೆ ಶ್ರೀಮಾತೆ
ಶ್ರಿತಜನ ಪಾಲಿನಿ ಭಾಗ್ಯ ಪ್ರದಾಯಿನಿ
ಆದಿನಾರಾಯಣಿ ಕಮಲಿನಿಗೆ
Song - 2
ಮಂಗಳಾರತಿ ಎತ್ತಿರೆ ಜಗದಂಬೆಗೆ
ಮಂಗಳವನು ಪಾಡಿರೆ
ಮಂಗಳಾರತಿ ಪ್ರಭೆ ತುಂಬಿತು ಜಗವೆಲ್ಲ
ಕಂಗೊಳಿಸುವ ಶ್ರೀ ರಂಗರಾಣಿಗೆ
ಕ್ಷೀರ ಸಾಗರ ತನೆಯೇ
ನಾರಾಯಣನ ಪಟ್ಟದ ರಾಣಿಯೇ
ಈರೇಳು ಲೋಕದೊಳ್ ಶ್ರೇಷ್ಠಳೆನಿಸಿ
ಮೆರೆವ ನಾರಾಯಣನ ಪ್ರಿಯ
ನಮಿಪೆ ನಳಿನಾಕ್ಷಿಯ
Доступные форматы для скачивания:
Скачать видео mp4
-
Информация по загрузке: