Heart Attack ಹೃದಯಾಘಾತ ಬರುವುದಕ್ಕಿಂತ ಮುಂಚೆ ತಪ್ಪದೇ ಇದನ್ನು ಮಾಡಿ ನೋಡಿ, ಈ ಮನೆ ಮದ್ದಿನಿಂದ ಸಂಪೂರ್ಣ ಪರಿಹಾರ.
Автор: Harish AL's Creativity
Загружено: 2023-06-07
Просмотров: 8337
ಹೃದಯ ಸ್ನಾಯುವಿನ ಊತಕ ಸಾವು (MI ) ಅಥವಾ ತೀವ್ರ ಹೃದಯ ಸ್ನಾಯುವಿನ ಊತಕ ಸಾವು (AMI ) ಎಂದರೆ ಹೃದಯದ ಒಂದು ಭಾಗಕ್ಕೆ ರಕ್ತ ಪೂರೈಕೆಯಲ್ಲಿ ಅಡ್ಡಿಯುಂಟಾಗಿ ಅಲ್ಲಿನ ಹೃದಯದ ಜೀವಕೋಶಗಳು ಸಾಯುವುದು ಎಂದರ್ಥ, ಇದನ್ನು ಸಾಮಾನ್ಯವಾಗಿ ಹೃದಯಾಘಾತ ಎಂದು ಕರೆಯುತ್ತಾರೆ. ಇದಕ್ಕೆ ಮುಖ್ಯ ಕಾರಣ ಸುಲಭವಾಗಿ ಘಾಸಿಗೊಳಗಾಗುವ ಅಪಧಮನಿಯ-ಕಾಠಿಣ್ಯದ ಪ್ಲೇಕ್(ತಂತುಯುಕ್ತವಾದ ಊತಕದ ಶೇಖರಣೆ)ಯ ಛಿದ್ರವಾಗುವುದರಿಂದ ಉಂಟಾಗುವ ಪರಿಧಮನಿಯ ಮುಚ್ಚಿಕೊಳ್ಳುವಿಕೆ (ತಡೆಗಟ್ಟುವಿಕೆ). ಈ ಪ್ಲೇಕ್ ಅಪಧಮನಿಯ ಪೊರೆಯಲ್ಲಿ ಲಿಪಿಡ್‌ಗಳು (ಕೊಬ್ಬಿನಾಮ್ಲಗಳು) ಮತ್ತು ಬಿಳಿರಕ್ತಕಣಗಳ (ವಿಶೇಷವಾಗಿ ಮ್ಯಾಕ್ರೊಫೇಜ್‌ಗಳು) ಅಸ್ಥಿರ ಸಂಗ್ರಹವಾಗಿದೆ. ಇದರಿಂದ ಉಂಟಾಗುವ ರಕ್ತಕೊರತೆ ಮತ್ತು ಆಮ್ಲಜನಕದ ಕ್ಷೀಣತೆಯನ್ನು ದೀರ್ಘಕಾಲದವರೆಗೆ ಚಿಕಿತ್ಸೆ ನೀಡದೆ ಹಾಗೆ ಬಿಟ್ಟರೆ, ಹೃದಯದ ಸ್ನಾಯು ಅಂಗಾಶವು (ಹೃದಯ ಸ್ನಾಯು ) ಹಾನಿಗೊಳಗಾಗಬಹುದು ಅಥವಾ ಸಾಯಬಹುದು (ಊತಕ ಸಾವು ).
Quick facts: ICD-10, ICD-9 …
ತೀವ್ರ ಹೃದಯ ಸ್ನಾಯುವಿನ ಊತಕ ಸಾವಿನ ಮಾದರಿ ರೋಗಲಕ್ಷಣಗಳೆಂದರೆ ಹಠಾತ್ ಎದೆ ನೋವು (ವಿಶಿಷ್ಟವಾಗಿ ಎಡ ಬಾಹುವಿನಲ್ಲಿ ಅಥವಾ ಕತ್ತಿನ ಎಡಭಾಗದಲ್ಲಿ), ಉಸಿರಾಟದ ತೊಂದರೆ, ವಾಕರಿಕೆ, ವಾಂತಿ ಮಾಡುವುದು, ನಾಡಿ ಮಿಡಿತ, ಬೆವರುವುದು ಮತ್ತು ಆತಂಕ (ಇದನ್ನು ಹೆಚ್ಚಾಗಿ ಸಾವು ಸನ್ನಿಹಿತವಾಗಿದೆ ಎಂಬ ಭಾವನೆ ಉಂಟಾಗುವುದೆಂದು ಹೇಳಲಾಗುತ್ತದೆ). ಮಹಿಳೆಯರು ಪುರುಷರಿಗಿಂತ ಕಡಿಮೆ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ, ಇವರಲ್ಲಿ ಹೆಚ್ಚಾಗಿ ಉಸಿರಾಟದ ತೊಂದರೆ, ನಿಶ್ಯಕ್ತಿ, ಅಜೀರ್ಣತೆ ಮತ್ತು ಬಳಲಿಕೆ ಮೊದಲಾದವು ಕಂಡುಬರುತ್ತವೆ. ಹೃದಯ ಸ್ನಾಯುವಿನ ಊತಕ ಸಾವುಗಳಲ್ಲಿ ಸರಿಸುಮಾರು ಕಾಲುಭಾಗವು ಎದೆ ನೋವು ಅಥವಾ ಯಾವುದೇ ಇತರ ರೋಗಲಕ್ಷಣಗಳಿಲ್ಲದೆ 'ಸದ್ದಿಲ್ಲದೆ' ಆಗುತ್ತದೆ.
ಹೃದಯ ಸ್ನಾಯುವಿನ ಹಾನಿಯನ್ನು ಕಂಡುಹಿಡಿಯಲು ಲಭ್ಯವಾಗಿರುವ ರೋಗನಿರ್ಣಯಿಸುವ ಪರೀಕ್ಷೆಗಳೆಂದರೆ ಎಲೆಕ್ಟ್ರೊಕಾರ್ಡಿಯೊಗ್ರ್ಯಾಮ್(ವಿದ್ಯುತ್ ಹೃಲ್ಲೇಖ) (ECG), ಎಕೊಕಾರ್ಡಿಯೊಗ್ರಫಿ ಮತ್ತು ವಿವಿಧ ರಕ್ತ ಪರೀಕ್ಷೆಗಳು. ಹೆಚ್ಚಾಗಿ ಬಳಸಲಾಗುವ ಗುರುತುಗಗಳೆಂದರೆ ಕ್ರಿಯೇಟಿನ್-ಕಿನೇಸ್-MB (CK-MB) ಅಂಶ ಮತ್ತು ಟ್ರೋಪೋನಿನ್ ಮಟ್ಟ. ತೀವ್ರ ಹೃದಯ ಸ್ನಾಯುವಿನ ಊತಕ ಸಾವು ಸಂಭವಿಸಬಹುದೆಂಬ ಸಂಶಯ ಬಂದಾಗ ತಕ್ಷಣವೇ ಆಮ್ಲಜನಕ, ಆಸ್ಪರಿನ್ ಮತ್ತು ನೈಟ್ರೊಗ್ಲಿಸರಿನ್ಅನ್ನು ಪೂರೈಸಬೇಕು.
STEMI (ST ಎಲಿವೇಶನ್ MI)ನ ಹೆಚ್ಚಿನ ರೋಗಿಗಳಿಗೆ ತ್ರೋಂಬೋಲಿಸಿಸ್ ಅಥವಾ ಚರ್ಮೀಯ ಪರಿಧಮನಿಯ ಮಧ್ಯಸ್ಥಿಕೆ (PCI)ಯಿಂದ ಚಿಕಿತ್ಸೆ ನೀಡಲಾಗುತ್ತದೆ. NSTEMI (ನಾನ್-ST ಎಲಿವೇಶನ್ MI) ಗೆ ಔಷಧಿಯಿಂದ ಚಿಕಿತ್ಸೆ ನೀಡಬೇಕು, ಆದರೂ ಆಸ್ಪತ್ರೆಗೆ ಸೇರಿಸಿದಾಗ PCI ಯನ್ನೂ ಬಳಸಲಾಗುತ್ತದೆ. ಅನೇಕ ತಡೆಗಳನ್ನು ಹೊಂದಿದ್ದು, ಅವು ಹೆಚ್ಚುಕಡಿಮೆ ಸ್ಥಿರವಾಗಿರುವವರಲ್ಲಿ ಅಥವಾ ಕೆಲವು ತುರ್ತು ರೋಗಿಗಳಲ್ಲಿ ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗುತ್ತದೆ.
ಹೃದಯಾಘಾತವು ಪ್ರಪಂಚದಾದ್ಯಂತ ಪುರುಷರು ಮತ್ತು ಮಹಿಳೆಯರಿಗಿಬ್ಬರಿಗೂ ಸಾವನ್ನು ತರುವ ಪ್ರಮುಖ ಕಾರಣವಾಗಿದೆ. ಪ್ರಮುಖ ಅಪಾಯಕಾರಿ ಕಾರಣಗಳೆಂದರೆ ಹಿಂದಿನ ಹೃದಯ ರಕ್ತನಾಳದ ಕಾಯಿಲೆ, ವಯಸ್ಸಿನ ಏರಿಕೆ, ಧೂಮಪಾನ, ರಕ್ತದಲ್ಲಿ ಕೆಲವು ಲಿಪಿಡ್‌ಗಳ (ಟ್ರೈಗ್ಲಿಸರೈಡ್‌ಗಳು, ಕಡಿಮೆ-ಸಾಂದ್ರತೆಯು ಲಿಪೊಪ್ರೋಟೀನ್) ಪ್ರಮಾಣ ಹೆಚ್ಚಾಗುವುದು ಮತ್ತು ಹೆಚ್ಚಿನ-ಸಾಂದ್ರತೆಯು ಲಿಪೊಪ್ರೋಟೀನ್‌ನ (HDL) ಪ್ರಮಾಣ ಕಡಿಮೆಯಾಗುವುದು, ಮಧುಮೇಹ, ಹೆಚ್ಚು ರಕ್ತದೊತ್ತಡ, ಸ್ಥೂಲಕಾಯತೆ, ದೀರ್ಘಕಾಲದ ಮೂತ್ರಜನಕಾಂಗದ ರೋಗ, ಹೃದಯ ಕಾರ್ಯ-ವಿಫಲತೆ, ವಿಪರೀತ ಮದ್ಯಪಾನ ಸೇವನೆ, ಕೆಲವು ಮಾದಕ ವಸ್ತುಗಳ ಬಳಕೆ (ಉದಾಹರಣೆಗಾಗಿ ಕೊಕೇನ್ ಮತ್ತು ಮೆತಾಂಪೆಟಮಿನ್) ಹಾಗೂ ದೀರ್ಘಕಾಲದ ಹೆಚ್ಚಿನ ಒತ್ತಡ.
ವರ್ಗೀಕರಣ
ತೀವ್ರ ಹೃದಯ ಸ್ನಾಯುವಿನ ಊತಕ ಸಾವಿನಲ್ಲಿ ಎರಡು ಪ್ರಕಾರಗಳಿವೆ:
ಟ್ರಾನ್ಸ್‌ಮುರಲ್ : ಇದು ಪ್ರಮುಖ ಪರಿಧಮನಿಯನ್ನು ಒಳಗೊಂಡ ಅಪಧಮನಿ-ಕಾಠಿಣ್ಯದೊಂದಿಗೆ ಸಂಬಂಧಿಸಿದೆ. ಇದನ್ನು ಮುಂಭಾಗದ, ಹಿಂಭಾಗದ ಅಥವಾ ಕೆಳಗಿನ ಎಂದು ಉಪಭಾಗಗಳಾಗಿ ವಿಂಗಡಿಸಬಹುದು. ಟ್ರಾನ್ಸ್‌ಮುರಲ್ ಸತ್ತ ಊತಕಗಳು ಹೃದಯ ಸ್ನಾಯುವಿನ ಸಂಪೂರ್ಣ ಪದರದಾದ್ಯಂತ ಹರಡುತ್ತವೆ ಮತ್ತು ಅವು ಸಾಮಾನ್ಯವಾಗಿ ಆ ಭಾಗದ ರಕ್ತ ಪೂರೈಕೆಯ ಸಂಪೂರ್ಣ ತಡೆಯಿಂದಾಗಿ ಉಂಟಾಗುತ್ತವೆ.
ಸಬೆಂಡೊಕಾರ್ಡಿಯಲ್ : ಇದು ಎಡ ಕುಹರ, ಕುಹರದ ನಡುತಡಿಕೆ ಅಥವಾ ತೊಟ್ಟಿನ ಸ್ನಾಯುಗಳ ಸಬೆಂಡೊಕಾರ್ಡಿಯಲ್ ಪೊರೆಯ ಒಂದು ಸಣ್ಣ ಭಾಗವನ್ನು ಒಳಗೊಳ್ಳುತ್ತದೆ. ಪರಿಧಮನಿಗಳು ಕಿರಿದಾಗುವುದರಿಂದ ರಕ್ತ ಪೂರೈಕೆಯ ಕ್ಷೀಣತೆಯಿಂದಾಗಿ ಸಬೆಂಡೊಕಾರ್ಡಿಯಲ್ ಸತ್ತ ಊತಕಗಳು ಉಂಟಾಗುತ್ತವೆ. ಸಬೆಂಡೊಕಾರ್ಡಿಯಲ್ ಭಾಗವು ಹೃದಯದ ರಕ್ತ ಪೂರೈಕೆಯಿಂದ ತುಂಬಾ ದೂರವಿರುತ್ತದೆ ಮತ್ತು ಈ ಪ್ರಕಾರದ ರೋಗಲಕ್ಷಣಕ್ಕೆ ಬೇಗನೆ ತುತ್ತಾಗುತ್ತದೆ.
ಪ್ರಾಯೋಗಿಕವಾಗಿ, ಹೃದಯ ಸ್ನಾಯುವಿನ ಊತಕ ಸಾವನ್ನು ECG ಬದಲಾವಣೆಗಳ ಆಧಾರದಲ್ಲಿ ST ಎಲಿವೇಶನ್ MI (STEMI) ವರ್ಸಸ್ ನಾನ್-ST ಎಲಿವೇಶನ್ MI (ನಾನ್-STEMI) ಎಂಬುದಾಗಿ ವರ್ಗೀಕರಿಸಬಹುದು.
"ಹೃದಯಾಘಾತ" ಪದವನ್ನು ಕೆಲವೊಮ್ಮೆ ಹಠಾತ್ ಹೃದಯ ಸ್ನಾಯುಗಳ ಸಾವನ್ನು ವಿವರಿಸಲು ತಪ್ಪಾಗಿ ಬಳಸಲಾಗುತ್ತದೆ, ಇದು ತೀವ್ರ ಹೃದಯ ಸ್ನಾಯುವಿನ ಊತಕ ಸಾವಿನಿಂದ ಉಂಟಾಗಬಹುದು ಅಥವಾ ಅದರಿಂದಲ್ಲದೆಯೂ ಉಂಟಾಗಬಹುದು. ಹೃದಯಾಘಾತವು ಭಿನ್ನವಾಗಿದೆ. ಆದರೆ ಇದು ಹೃದಯ ಸ್ತಂಭನದಿಂದ, ಅಂದರೆ ಹೃಯಬಡಿತ ನಿಲ್ಲುವುದು, ಮತ್ತು ಹೃದಯ ಸ್ನಾಯುವಿನ ಅಪಸಾಮಾನ್ಯ ಸ್ನಾಯು ಸಂಕೋಚನದಿಂದ, ಅಂದರೆ ಹೃದಯಬಡಿತವು ಅಪಸಾಮಾನ್ಯವಾಗಿರುವುದು, ಉಂಟಾಗಬಹುದು. ಇದು ಹೃದಯ ಕಾರ್ಯ-ವಿಫಲತೆಗಿಂತಲೂ ವಿಭಿನ್ನವಾಗಿದೆ, ಇದರಲ್ಲಿ ಹೃದಯದ ಪಂಪುಮಾಡುವ ಕ್ರಿಯೆಯು ದುರ್ಬಲಗೊಳ್ಳುತ್ತದೆ; ತೀವ್ರ ಹೃದಯ ಸ್ನಾಯುವಿನ ಊತಕ ಸಾವು ಹೃದಯದ ಕಾರ್ಯ ವಿಫಲತೆಗೆ ಕಾರಣವಾಗಬಹುದು, ಆದರೆ ಅಗತ್ಯವಾಗಿ ಅಲ್ಲ.[ಸೂಕ್ತ ಉಲ್ಲೇಖನ ಬೇಕು]
೨೦೦೭ರ ಒಮ್ಮತ ದಾಖಲೆಯು ಹೃದಯ ಸ್ನಾಯುವಿನ ಊತಕ ಸಾವನ್ನು ಐದು ಪ್ರಮುಖ ಪ್ರಕಾರಗಳಾಗಿ ವರ್ಗೀಕರಿಸುತ್ತದೆ:
ಪ್ರಕಾರ ೧ – ಪ್ಲೇಕ್ ಸವೆತ ಮತ್ತು/ಅಥವಾ ಛಿದ್ರ, ಬಿರುಕು ಅಥವಾ ತುಂಡರಿಕೆ ಮೊದಲಾದ ಪ್ರಾಥಮಿಕ ಪರಿಧಮನಿಯ ಘಾಸಿಗಳಿಂದಾಗಿ, ರಕ್ತ-ಕೊರತೆಯೊಂದಿಗೆ ಸಂಬಂಧಿಸಿದ ತಡೆಯಿಲ್ಲದ ಹೃದಯ ಸ್ನಾಯುವಿನ ಊತಕ ಸಾವು.
ಪ್ರಕಾರ ೨ – ಪರಿಧಮನಿ ಸೆಡೆತ, ಪರಿಧಮನಿಯ ಧಮನಿರೋಧ, ರಕ್ತಹೀನತೆ, ಹೃದಯ ಸ್ನಾಯುವಿನ ಅಪಸಾಮಾನ್ಯ ಸ್ನಾಯು ಸಂಕೋಚನ, ಅಧಿಕ ರಕ್ತದೊತ್ತಡ ಅಥವಾ ಕಡಿಮೆ ರಕ್ತದೊತ್ತಡ ಮೊದಲಾದವುಗಳ ಕಾರಣದಿಂದ ಹೆಚ್ಚಿದ ಆಮ್ಲಜನಕ ಬೇಡಿಕೆ ಅಥವಾ ಕ್ಷೀಣಿಸಿದ ಪೂರೈಕೆಯಿಂದಾಗಿ, ರಕ್ತ-ಕೊರತೆಗೆ ನೇರವಾಗಿ ಸಂಬಂಧಿಸಿರದ ಹೃದಯ ಸ್ನಾಯುವಿನ ಊತಕ ಸಾವು.
ಪ್ರಕಾರ ೩ – ಹೃದಯ-ಸ್ತಂಭನವನ್ನೂ ಒಳಗೊಂಡು ಹಠಾತ್ ಅನಿರೀಕ್ಷಿತ ಹೃದಯ ಸ್ನಾಯುಗಳ ಸಾವು. ಇದು ಹೆಚ್ಚಾಗಿ ಹೃದಯ ಸ್ನಾಯುವಿನ ರಕ್ತ-ಕೊರತೆಯನ್ನು ಸೂಚಿಸುವ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಇದನ್ನು ಹೊಸ ST ಉನ್ನತಿ ಅಥವಾ ಹೊಸ LBBB ನಿಂದ ಕಂಡುಹಿಡಿಯಬಹುದು ಅಥವಾ ಏಂಜಿಯೊಗ್ರಫಿ
Follow me on Instragram: https://www.instagram.com/invites/con...
Facebook: / harish.algowda
Доступные форматы для скачивания:
Скачать видео mp4
-
Информация по загрузке: