BHANDHUTVA. ಎಲ್ಲರ ರಕ್ತ ಒಂದೇ ಕೆಂಪು ಒಂದೇ ಮೂಲವದು. ಸರ್ವ ಧರ್ಮ ಸಮನ್ವಯದ ಹಾಡು..ಫಾ. ಸಿರಿಲ್ ಲೋಬೊ ಮುಡಿಪು.
Автор: Cyril Lobo
Загружено: 2021-06-25
Просмотров: 12036
INTER RELIGIOUS HARMONY, RELIGIOUS UNITY,
ಎಲ್ಲರ ರಕ್ತ ಒಂದೇ ಕೆಂಪು ಒಂದೇ ಮೂಲವದು.
ಗಾಳಿ ನೀರು ಒಂದೇ ನಮ್ಮೊಳು ಭೇದವು ಎಲ್ಲೆಯದು.
ಒಂದೇ ತೋಟದ ಸುಮ ನಾವೆಂದಿದೆ ಸಮರಸದ ತತ್ವ.
ಬಣ್ಣಿರಿ ಐಕ್ಯತೆಗೊಂದೇ ಮಂತ್ರ ಸಾರುವ ಬಂಧುತ್ವ.
ಬಂಧುತ್ವ(2) ಧರ್ಮ ಗೋಡೆಗಳ ತಗ್ಗಿಸೋಣ.
ಬಂಧುತ್ವ(2) ಸ್ನೇಹ ಸೇತುವೆಯ ಕಟ್ಟೋಣ
ಬಂಧುತ್ವ(2) ಧರ್ಮ ಸಮಾಗಮ ಸಂಧಿಸೋಣ.
ಬಂಧುತ್ವ(2) ಸೌಹಾರ್ದದ ಜಗವ ರಚಿಸೋಣ.
ಸರ್ವ ಧರ್ಮಗಳ ಸಾರ ಮನುಕುಲ ಉದ್ಧಾರ.
ಆದರೆತಕೋ ಸೆಣಸುತ್ತಿದೇ ನಮ್ಮೊಳಗಿನ ವೈರ.
ಮಾನವರಾಗೋಣ ನಾವು ಮನದ ಹಗೆತನವ ಎಸೆದು.
ಒಂದೇ ತಾಯಿಯ ಮಕ್ಕಳೆನ್ನುತ ಪ್ರೀತಿ ಕೈಗಳ ಬೆಸೆದು
ಹೊತ್ತ ಭೂಮಿಗೆ ಎಲ್ಲಿದೆ ಧರ್ಮ ಭಾಷೆಗಳ ಭೇದ.
ಹೃದಯ ಹಕ್ಕಿಯು ಹಾಡಲಿ ಸಾಮರಸ್ಯ ನಿನಾದ.
ಲೊಕದ ಬಡತನ ವ್ಯಾಧಿಗಳ ತೊಡೆಯಲತ್ನಿಸುವ ನಾವು
ನಮ್ಮ ಸೇವೆಯು ಕಳೆದು ಹಾಕಲಿ ಸಮುದಾಯದ ನೋವು.
ಒಂದೇ ಉರಿಯಲ್ಲಿ ಬೆಂದ ಅನ್ನ ಒಟ್ಟಿಗೆ ಉನ್ನೋಣ.
ಸೋದರತ್ವದ ಧರ್ಮವ ಕಟ್ಟಿ ಒಲವನು ಹಂಚೋಣ.
ಮಣ್ಣಿನ ಋಣವನ್ನು ತೀರಿಸಿ ಮಮತೆ ಸಂಸ್ಕೃತಿ ಉಳಿಸೋಣ.
ನಾಡಿನ ಕೀರ್ತಿಗೆ ಕಾರಣರಾಗಿ ಒಂದಾಗಿ .
"ನನ್ನ ಧರ್ಮ ಬಲು ಸರಳ; ಅದರ ಹೆಸರು ಕರುಣೆ"
*ಸಾಹಿತ್ಯ*: ಡಾ. ಅರುಣ್ ಉಳ್ಳಾಲ್
*ಸಂಗೀತ*: ಶ್ರೀ. ಸಂಜಯ್.
*ಹಾಡಿದವರು*: ಫಾ. ಸ್ಟ್ಯಾನಿ ಪಿರೇರಾ, ಸಿರಿಲ್ ಲೋಬೊ ಹಾಗೂ ಕುಮಾರಿ ಡಿಯಲ್ ಡಿಸೋಜಾ.
*ಛಾಯಾಗ್ರಹಣ*: ಅಶ್ವಿನ್ & ಪ್ರಿತೇಶ್ ಮುಡಿಪು.
*ಎಡಿಟಿಂಗ್*: ಡೆಲ್ಟನ್ & ಅಶ್ವಿನ್ ಬೊಂದೆಲ್.
Доступные форматы для скачивания:
Скачать видео mp4
-
Информация по загрузке: