Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

INFANT JESUS SUPRABHATHA- ದಿವ್ಯ ಬಾಲ ಯೇಸುವಿನ ಸುಪ್ರಭಾತ- NAMO MARIA AUDIO- BANGALORE

Автор: NAMO MARIA NAMAMI

Загружено: 2022-01-07

Просмотров: 294547

Описание:

SONG. : BALA YESUVE DIVYA
ALBUM. : KARUNA KANMANI
LYRICS. : C SHANTHA KUMAR
MUSIC. : DAMODHAR
SINGER. : MADHUSUDAN & AARATHI (Group)
PRODUCED BY: NAMO MARIA AUDIO, BANGALORE - 9880065321

Praise the Lord, Namo mariye sharanam,
Thank you so much for watching and sharing
God bless you and your family
Consider Subscribing

kindly download and enjoy 24/7 rosary prayer, daily reading and
gospel reflection and songs in Holy redeemer Radio app

https://play.google.com/store/apps/de...

ಆತ್ಮೀಯರೇ,
ಕ್ರೈಸ್ತ ಧಾರ್ಮಿಕ ಸುವಾರ್ತ ಸೇವೆಯಲ್ಲಿ ಕನ್ನಡದ ಮೊಟ್ಟ ಮೊದಲ ರೇಡಿಯೋ ಪ್ರಸಾರ. ಕೇಳಿ, ಆನಂದಿಸಿ.

ಕ್ರಿಸ್ತನ ಸೇವೆಗೆ, ಮಾತೆಯ ಪ್ರೀತಿಯಲ್ಲಿ
ನಿಮ್ಮವ
ಸಿ ಶಾಂತ ಕುಮಾರ್
ನಮೋ ಮರಿಯ ಆಡಿಯೋ
ಬೆಂಗಳೂರು

ಬಾಲ ಯೇಸುವೇ ದಿವ್ಯ ಬಾಲ ಯೇಸುವೆ ನಮ್ಮ ಮೊರೆಯನ್ನು ಆಲಿಸಿರಿ ನಮ್ಮ ಭಕ್ತಿಯ ಬೆಳಗಿಸಿ

ಕೇಳಿರಿ ನಿಮಗೆ ಕೊಡುವೆನೆಂದ
ಹುಡುಕಿರಿ ನಿಮಗೆ ಸಿಗುವುದೆಂಬ
ಭರವಸೆ ನೀಡಿದ ಪ್ರಭುವೇ ತಟ್ಟುತ್ತಾ
ಹೃದಯದ ಬಳಿಯೇ ಕಾದಿರುವೆ

ನನ್ನಯ ನಾಮದಿ ಪ್ರಾರ್ಥಿಸಿರಿ
ಬೇಡುವುದೆಲ್ಲವೂ ದೊರೆಯುವುದು
ಬಾಳಿನ ಬವಣೆಯ ನೀಗುವ ತಂದೆಯ ಪ್ರೀತಿಯ
ತನಯರೇ ಶ್ರೀ ಯೇಸುವೆ

ದೇವ ತಂದೆಯ ಸುಕುಮಾರನೇ
ಮಾತೆ ಮರಿಯಳ ವರ ಭಾಗ್ಯವೇ
ಆತ್ಮರ ವರಗಳ ಮಹಿಮೆಯ
ಪ್ರಭೆಯನ್ನು ಬೆಳಗುವ ಕಿರಣವೇ ಶ್ರೀಯೇಸುವೇ

ಸ್ನೇಹ ಪ್ರೀತಿಯ ಆಲವೇ
ತ್ಯಾಗ ಸೇವೆಯ ಕಣ್ಮಣಿಯೇ
ಜೀವ ಮಾರ್ಗವೇ ಸತ್ಯಜ್ಯೋತಿಯೇ
ಒಲುಮೆಯು ತುಂಬಿಹ ಶ್ರೀ ಯೇಸುವೆ

ದಯಾಪರರಾಗಿ ಕಾಯ್ವವರೇ
ಸತ್ಪಲ ಕರುಣಿಸಿ ಪೊರೆವವರೇ
ಪಾವನ ಜಲದಿ ಅಭಿಷೇಕ ಮಾಡಿ
ಉತ್ತಮ ನಡೆ-ನುಡಿ ಕಲಿಸುವರೇ

ಬಾಡಿಹ ಹೃದಯವ ತಣಿಸುವರು
ನಿರ್ಮಲ ಮನಗಳ ಹರಸುವರು
ಪರಿಶ್ರಮ ಬದುಕಿಗೆ ಬೆಂಬಲ ನೀಡುತ
ದುರ್ಜನ ಭಯವನ್ನು ನೀಗುವರು

ದಣಿದು ಬಳಲಿ ನೊಂದವರ
ಭಾರ ತಾಳದೆ ಅಳುವವರ
ನಿತ್ಯಜೀವದ ಮಾರ್ಗವ ತೋರುವ
ಶಾಂತಿಯ ಬಲವೇ ಶ್ರೀ ಯೇಸುವೆ

ಆತ್ಮದ ಜ್ಯೋತಿಯ ಆಗರವೇ
ಅನಂತ ಸೃಷ್ಟಿಯ ಆಶ್ರಯವೇ
ಸ್ತುತಿ ಘನ ಸ್ತೋತ್ರಕ್ಕೆ ಯೋಗ್ಯನೀ ಪ್ರಭುವೇ
ದೀನ ಮನದ ಶ್ರೀ ಯೇಸುವೇ

ದೈವ ನಿಯಮಕೆ ತಲೆಬಾಗುವ
ದೈವೀಕ ವಿಧಿಯನು ಪಾಲಿಸುವ
ಪಾಪಕೆ ಕ್ಷಮೆಯನ್ನು ಸ್ವರ್ಗೀಯ ಸಿರಿಯನ್ನು
ಕರುಣಿಸ ಬಂದಿಹ ಶ್ರೀ ಯೇಸುವೇ

ಬಡವರ ಕಾಯುವ ಪಾಲಕನೇ
ವಿನಯರ ಸಲಹುವ ಸ್ನೇಹಿತನೇ
ವಿಶ್ವಾಸ ಪ್ರೀತಿಯಿಂ ಬೇಡುವ ಮನಗಳ
ಸಂತೈಸಿ ಸಲಹುವ ಶ್ರೀ ಯೇಸುವೆ

ನ್ಯಾಯ ನೀತಿಯ ಸಾಧಕನೇ
ನಿರ್ಮಲ ಶಾಂತಿಯ ಪೋಷಕನೇ
ತಾಳುವ ಮನವನು ಬಾಳುವ ಒಲವನ್ನು
ನೀಡುವ ಪ್ರಭುವೆ ಶ್ರೀ ಯೇಸುವೇ

ಮೋಶೆಯ ಕಟ್ಟಳೆ ಪಾಲಿಸಲು
ನೂತನ ಕಟ್ಟಲೆ ನೀಡಿರುವ
ಧಾರ್ಮಿಕ ಶ್ರದ್ಧೆಯ ಆತ್ಮದ ಶುದ್ಧಿಯ
ಆಶ್ರಯ ದಾಯಕ ಶ್ರೀ ಯೇಸುವೆ

ಕೋಪ ಪ್ರತಿಕಾರ ದ್ವೇಷಗಳಾ
ಕ್ಷಮಿಸುತ್ತಾ ಬಾಳಲು ಬೋಧಿಸಿದೆ
ಪ್ರಭುವಿನ ಪ್ರಾರ್ಥನೆ ಬೇಡಲು ಕಲಿಸಿದ
ಭಕ್ತಿಯ ನಿಧಿಯೇ ಶ್ರೀ ಯೇಸುವೆ

ನಿಮ್ಮ ವೈರಿಗಳನ್ನು ಪ್ರೀತಿಸಲು
ಶತ್ರು ದ್ರೋಹಿಗಳ ಮನ್ನಿಸಲು
ಮುಗ್ಧ ಮಕ್ಕಳಂತೆ ಬಾಳಲು ನುಡಿದಿಹ
ಶಾಂತಿಯ ದಾಯಕ ಶ್ರೀ ಯೇಸುವೆ

ದಾನ ಧರ್ಮದ ಫಲಗಳಿಗೆ
ನೂರ್ಮಡಿ ಪ್ರತಿಫಲ ನೀಡಿರುವ
ಅಂತರಂಗವ ಅರಿತಿಹ ದೇವನೆ
ಪ್ರೀತಿ ದಾಯಕ ಶ್ರೀ ಯೇಸುವೆ

ಉಪವಾಸ ಪ್ರೀತಿಗೆ ಆರಂಭವೇ
ಉಪಶಮನ ನೀತಿಗೆ ಆರಂಭವೇ
ತನುಮನ ಪ್ರೀತಿಯ ಸೇವೆಯ ಸ್ಪೂರ್ತಿಯೇ
ಭಾಗ್ಯದ ನಿಧಿಯೇ ಶ್ರೀ ಯೇಸುವೇ

ಭುಜಿಸಲು ಜೀವಕೆ ಆಹಾರವೇ
ಭಜಿಸಲು ಭಕ್ತಿಗೆ ಆಧ್ಯಾತ್ಮವೇ
ರಕ್ಷಣಾ ಮಾರ್ಗವೇ ನವಜೀವ ಜ್ಯೋತಿಯೇ
ರಕ್ಷಣೆ ನೀಡುವ ಪ್ರಭು ಯೇಸುವೇ

ರೋಗನಿವಾರಕ ವೈದ್ಯನು ನೀ
ಅದ್ಭುತ ಶಕ್ತಿಯ ಆಪ್ತನೂ ನೀ
ಸಾವು-ನೋವಿನ ಭಯಶೋಕವ ನೀಗುವ
ಚೈತನ್ಯ ಸುಧೆಯೇ ಶ್ರೀ ಯೇಸುವೇ

ಸೈತಾನನ ತಂತ್ರ ಬಂಧದಿಂದ
ಬಿಡುಗಡೆ ನೀಡಿ ಪಾಲಿಸುವಾ
ವಾತ್ಸಲ್ಯ ಕರುಣೆ ಕಡಲಿನ ಮನವೇ
ಅನುಪಮ ರೂಪವೇ ಶ್ರೀ ಯೇಸುವೇ

ಬೆಳೆದಿಹ ಫಸಲನ್ನು ಕಾಯುವವನು
ತಪ್ಪಿಹ ಕುರಿಯನ್ನು ಹುಡುಕುವವನು
ವಚನ ಪಾಲಿಪ ಮನವನು ಹರಸುವ
ಅತಿಶಯ ತೇಜನೇ ಶ್ರೀ ಯೇಸುವೆ

ವಾರ್ತೆಗೆ ಜೀವವ ನೀಡುವನು
ಜೀವದ ಜ್ಯೋತಿಯ ಬೆಳಗುವನು
ಬೆಳಕಿನ ರಾಜ್ಯಕ್ಕೆ ಸೇರಿಸ ಎಲ್ಲರ
ಶ್ರಮಿಸುವ ಬೋಧಕ ಶ್ರೀ ಯೇಸುವೇ

ನನ್ನಯ ಶಿಷ್ಯರು ನೀವಾಗಲು
ಸತ್ಯದ ಜೀವನ ಪಾಲಿಸಲು
ನನ್ನಯ ನೊಗಕ್ಕೆ ಹೆಗಲನ್ನು ನೀಡಿರಿ
ಎನ್ನುತ ಕರೆದಿಹ ಶ್ರೀ ಯೇಸುವೇ

ಸಾಮ್ಯದ ರೂಪದಿ ಬೋಧಿಸಿದೆ
ಸುವಾರ್ತೆಯ ಜಗದಲ್ಲಿ ಅರಳಿಸಿದೆ
ಸೃಷ್ಟಿಯ ಚೆಲುವನ್ನು ಮಾನವಕುಲವನ್ನು
ರಕ್ಷಿಸ ಬಂದಿಹ ಶ್ರೀ ಯೇಸುವೇ

ನಿಮ್ಮನ್ನು ಬೇಡುವ ಸರ್ವರನ್ನು
ಕಲ್ಲೆದೆ ದುರ್ಮನ ದುರುಳರನ್ನು
ಕೈಬಿಡದೆಂದಿಗೂ ಕಾಯುತ ಹರಸುವ
ಸಂಪನ್ನ ಸ್ಪೂರ್ತಿಯೇ ಶ್ರೀ ಯೇಸುವೆ

ನಿಮ್ಮಯ ಪ್ರೀತಿಯ ತೋರಿಸಲು
ದಿವ್ಯ ಪ್ರಾಣವ ನೀಡಿದ ಕರ್ತನು ನೀ
ಸ್ನೇಹಕ್ಕೆ ಶಾಶ್ವತ ಅರ್ಥವ ತುಂಬಿದ
ಕರುಣಾನಿಧಿಯೇ ಶ್ರೀ ಯೇಸುವೇ

ನಿಮ್ಮಯ ಪಾದಕೆ ಬಂದಿದೆವು
ತನುಮನ ಎಮಯ ಬೆಳಗಿಹೆವು
ಎಂದೆಂದೂ ನಿಮ್ಮಯ ಅದ್ಭುತ ಆಸರೆ
ನೀಡುತ ಪೊರೆಯಲು ಬೇಡುವೆವು

ನೀವು ನೀಡಿದ ಉಪಕಾರಕ್ಕೆ
ಧನ್ಯತೆ ತುಂಬಿದ ಹೃದಯದಿಂದ
ನಿಮ್ಮಯ ಸತ್ಯವ ಲೋಕಕ್ಕೆ ಸಾರುವ
ಜ್ಞಾನವ ಕರುಣಿಸು ಶ್ರೀ ಯೇಸುವೆ

INFANT JESUS SUPRABHATHA- ದಿವ್ಯ ಬಾಲ ಯೇಸುವಿನ ಸುಪ್ರಭಾತ- NAMO MARIA AUDIO- BANGALORE

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

NITHYA SUPRABHATHA - ನಿತ್ಯ ಸುಪ್ರಭಾತ-  NAMO MARIA AUDIO- BANGALORE - AROGYA MATHEYE NAMO NAMAHA

NITHYA SUPRABHATHA - ನಿತ್ಯ ಸುಪ್ರಭಾತ- NAMO MARIA AUDIO- BANGALORE - AROGYA MATHEYE NAMO NAMAHA

DIVYA BALA YESUVIGE MANAVIMALE - ದಿವ್ಯ ಬಾಲ ಯೇಸುವಿಗೆ ಮನವಿ ಮಾಲೆ - NAMO MARIA AUDIO BANGALORE - 50 YEAR

DIVYA BALA YESUVIGE MANAVIMALE - ದಿವ್ಯ ಬಾಲ ಯೇಸುವಿಗೆ ಮನವಿ ಮಾಲೆ - NAMO MARIA AUDIO BANGALORE - 50 YEAR

Adoration & Daily Mass | 15-01-2026 | Divine Call Centre, Mulki

Adoration & Daily Mass | 15-01-2026 | Divine Call Centre, Mulki

Best Kannada Praise and Worship, Jesus Songs 🙏 ಸ್ತುತಿ ಗೀತೆಗಳು Jukebox #Jesussongs #KMHBIBLE

Best Kannada Praise and Worship, Jesus Songs 🙏 ಸ್ತುತಿ ಗೀತೆಗಳು Jukebox #Jesussongs #KMHBIBLE

St.ANTHONY'S SUPRABHATHA - ಸಂತ ಅಂತೋಣಿಯವರ ಸುಪ್ರಭಾತ- NAMO MARIA AUDIO- ನಮೋ ಮರಿಯ ಆಡಿಯೋ

St.ANTHONY'S SUPRABHATHA - ಸಂತ ಅಂತೋಣಿಯವರ ಸುಪ್ರಭಾತ- NAMO MARIA AUDIO- ನಮೋ ಮರಿಯ ಆಡಿಯೋ

ಬಾಳೊಕ್ ಜೆಜುಚಿ ಭಕ್ತಿಕ್ ಗಿತಾಂ  | Infant Jesus Hymns | Carmel Studio, Mangaluru |

ಬಾಳೊಕ್ ಜೆಜುಚಿ ಭಕ್ತಿಕ್ ಗಿತಾಂ | Infant Jesus Hymns | Carmel Studio, Mangaluru |

ಪವಿತ್ರ ಜಪಸರ - ದುಃಖದ ರಹಸ್ಯಗಳು / The Sorrowful Mysteries in Kannada

ಪವಿತ್ರ ಜಪಸರ - ದುಃಖದ ರಹಸ್ಯಗಳು / The Sorrowful Mysteries in Kannada

Kanneerina Moregalu ||VOL -02||Ps. B Kalanaik||#prayeroftear||#latestkannadachristiansong || #songs

Kanneerina Moregalu ||VOL -02||Ps. B Kalanaik||#prayeroftear||#latestkannadachristiansong || #songs

MATHEGE MANAVIMALE - ಮಾತೆಗೆ ಮನವಿ ಮಾಲೆ - MOTHER MARY LITANY IN KANNADA - NAMO MARIA AUDIO,BANGALORE

MATHEGE MANAVIMALE - ಮಾತೆಗೆ ಮನವಿ ಮಾಲೆ - MOTHER MARY LITANY IN KANNADA - NAMO MARIA AUDIO,BANGALORE

Nannesu I ನನ್ನೇಸು I ರಾಜೇಶ್ ಕೃಷ್ಣನ I ಡಾ. ವಿನ್ಸೆಂಟ್ . ಎ I Janadhare

Nannesu I ನನ್ನೇಸು I ರಾಜೇಶ್ ಕೃಷ್ಣನ I ಡಾ. ವಿನ್ಸೆಂಟ್ . ಎ I Janadhare

Beautiful Kannada Christian Devotional Songs NonStop

Beautiful Kannada Christian Devotional Songs NonStop

Konkani Mother Mary Hymns - ಮರಿಯೆ ಮಾಯೆಚ್ಯಾ ಮಾನಾಕ್ ಗಿತಾಂ

Konkani Mother Mary Hymns - ಮರಿಯೆ ಮಾಯೆಚ್ಯಾ ಮಾನಾಕ್ ಗಿತಾಂ

Father Chasararavara Prakyatha Geethegalu

Father Chasararavara Prakyatha Geethegalu

Divine Mercy Chaplet Kannada (song)(ದೈವಿಕ ಕೃಪೆಯ ಪ್ರಾರ್ಥನೆ )

Divine Mercy Chaplet Kannada (song)(ದೈವಿಕ ಕೃಪೆಯ ಪ್ರಾರ್ಥನೆ )

Kannada popular Praise and Worship, Christian Songs 🙏 ಸ್ತುತಿ ಗೀತೆಗಳು Best Praise and Worship Songs

Kannada popular Praise and Worship, Christian Songs 🙏 ಸ್ತುತಿ ಗೀತೆಗಳು Best Praise and Worship Songs

Псалом 26, 50, 90 | Защитные молитвы от врагов, нечистых сил и зла (7 раз)

Псалом 26, 50, 90 | Защитные молитвы от врагов, нечистых сил и зла (7 раз)

Maai Mogachi (Konkani Mother Mary Hymns)

Maai Mogachi (Konkani Mother Mary Hymns)

ಸಾಲದಿಂದ ಬಿಡುಗಡೆಗಾಗಿ ಪ್ರಾರ್ಥನೆ|Powerful Prayer for Debt cancellation|How to Pray For Debt|Pr.RameshG

ಸಾಲದಿಂದ ಬಿಡುಗಡೆಗಾಗಿ ಪ್ರಾರ್ಥನೆ|Powerful Prayer for Debt cancellation|How to Pray For Debt|Pr.RameshG

బాలయేసు స్తుతిగీతం-1 BALAYESU STUTHI GITAM -1 Telugu Infant Jesus Song

బాలయేసు స్తుతిగీతం-1 BALAYESU STUTHI GITAM -1 Telugu Infant Jesus Song

Father Chasararavara Prakyatha Geethegalu-3

Father Chasararavara Prakyatha Geethegalu-3

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com