Dhanvantari stuti/ಧನ್ವಂತರಿ ಸ್ತುತಿ.. own composition.. Deva devane dhanvantari neene gathi
Автор: Sumana P
Загружено: 2025-10-18
Просмотров: 24
ದೇವ ದೇವನೆ ಧನ್ವಂತರಿ ನೀನೆ ಗತಿ
ಸ್ವರಚಿತ ಕೃತಿ
ಅಂಕಿತ ಸುಮನಸಪ್ರಿಯ
ಸಾಹಿತ್ಯ:
ದೇವ ದೇವನೆ ಧನ್ವಂತರಿ ನೀನೇ ಗತಿ
ಜೀವರಕ್ಷಕನೆ ಪೊರೆ ಎಮ್ಮ ವೈದ್ಯಾಧಿಪತಿ ||
ಜೀವದಾನ ನೀಡು ಬಾ ಭವರೋಗ ವೈದ್ಯನೆ
ಜೀವತಂತಿ ಮಿಡಿಸು ಬಾ ಮನೋರೋಗ ತಜ್ಞನೆ ||
ಪಾಲ್ಗಡಲ ಮಥನದಲ್ಲಿ ಉದಿಸಿದ ದೇವನೆ
ಜಾಲ ಮಾಡಿ ಅಸುರರ ಮರುಳುಗೊಳಿಸಿದವನೆ ||
ಕರದಲಿ ಕಲಶ ಪಿಡಿದು ಹರಸಿದ ಕಮಲಾಕರ
ಸುರರಿಗೆ ಸುಧೆಯನು ಉಣಿಸಿದ ಮನೋಹರ ||
ಆಯುರಾರೋಗ್ಯ ನೀಡಿ ಪೊರೆ ನೀ ಹರಿರೂಪಿ
ಆಯುರ್ವೇದದ ವೈದ್ಯ ನೀ ದೇವತಾ ಸ್ವರೂಪಿ ||
ಜಯ ಜಯ ಜಯ ಶ್ರೀ ಧನ್ವಂತರಿ ದೇವ
ಜಯವನ್ನಿತ್ತು ಕಾಯೋ ಸುಮನಸಪ್ರಿಯ ದೇವ ||
Доступные форматы для скачивания:
Скачать видео mp4
-
Информация по загрузке: