ಇದು ಭಾಗ್ಯ ಇದು ಭಾಗ್ಯವಯ್ಯ| Idu Bhagya Idu Bhagyavayya | In Association with Spandana TV
Автор: Shanbhog Sisters
Загружено: 2024-08-09
Просмотров: 41357
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ |
ಪದುಮನಾಭನ ಪಾದಭಜನೆ ಸುಖವಯ್ಯಾ ||
ಕಲ್ಲಾಗಿರಲು ಬೇಕು ಕಠಿಣ ಭವತೊರೆಯೊಳಗೆ
ಬಿಲ್ಲಾಗಿರಲು ಬೇಕು ಬಲ್ಲವರೊಳು
ಮೆಲ್ಲನೆ ಮಾಧವನ ಮನವ ಮೆಚ್ಚಿಸಬೇಕು
ಬೆಲ್ಲವಾಗಲುಬೇಕು ಬಂಧುಜನರೊಳಗೆ ||
ಬುದ್ಧಿಯಲಿ ತನುಮನವ ತಿದ್ದಿಕೊಳ್ಳಲುಬೇಕು
ಮುದ್ದಾಗಿರಬೇಕು ಮುನಿಯೋಗಿಗಳಿಗೆ
ಮಧ್ವಮತಾಬ್ಧಿಯೊಳು ಮೀನಾಗಿರಲು ಬೇಕು
ಶುದ್ಧನಾಗಿರಬೇಕು ಕರಣತ್ರಯಗಳಲಿ ||
ವಿಷಯಭೋಗದ ತೃಣಕೆ ಉರಿಯಾಗಿರಲು ಬೇಕು
ನಿಶಿಹಗಲು ಶ್ರೀಹರಿಯ ನೆನೆಯಬೇಕು
ವಸುದೇವ ಶ್ರೀಪುರಂದರ ವಿಠಲರಾಯನ
ಹಸನಾದ ದಾಸನ ಸೇವಿಸಲುಬೇಕು ||
Доступные форматы для скачивания:
Скачать видео mp4
-
Информация по загрузке: