ಮಾಲೂರಿನಲ್ಲಿ ಅಪರೂಪದ ಬಿಳಿ ರಾಗಿ ಬೆಳೆದು ಯಶಸ್ವಿಯಾದ ರೈತ! ಈ ರಾಗಿ ವಿಶೇಷ ಏನು ಗೊತ್ತಾ?| Vijay Karnataka
Автор: Vijay Karnataka | ವಿಜಯ ಕರ್ನಾಟಕ
Загружено: 2024-02-22
Просмотров: 26061
ಕೋಲಾರ ಜಿಲ್ಲೆಯಲ್ಲಿ ಯಾರಾದ್ರು ರೈತರು ಬಿಳಿ ರಾಗಿಯನ್ನು ಬೆಳೆಯಬೇಕೆನ್ನುವವರಿಗೆ ಬಿತ್ತನೆಗೆ ಉಚಿತವಾಗಿ 3 ಕೆಜಿ ಬಿಳಿ ರಾಗಿ ಕೊಡುವುದಾಗಿ ರೈತ ಶ್ಯಾಮಣ್ಣ ಹೇಳಿದ್ದಾರೆ. ಸಾವಯವ ಮಾದರಿ ರಾಗಿ ಬೆಳೆ ರೋಗ ನಿರೋಧಕ ಶಕ್ತಿ ಹೊಂದಿದ್ದು ಬೇಕರಿ ತಿಂಡಿ, ಮಕ್ಕಳ ಪೌಷ್ಠಿಕಾಂಶದ ಸರಿ ಮಾಡಲು ಬಳಕೆ ಆಗುತ್ತದೆ. ಬಿಪಿ ಮತ್ತು ಶುಗರ್ ಇರುವವರಿಗೆ ಸಮಸ್ಯೆಯನ್ನು ಹತೋಟಿಯಲ್ಲಿಡಲು ಬಿಳಿರಾಗಿ ಪೂರಕ ಎಂಬ ನಂಬಿಕೆ ವೈದ್ಯಕೀಯ ಲೋಕದಲ್ಲಿ ಇರುವುದರಿಂದಾಗಿ ಹೆಚ್ಚಿನ ಬೆಲೆಗೆ ಮಾರಾಟ ಆಗುತ್ತಿದೆ ಎಂದು ಶ್ಯಾಮಣ್ಣ ಹೇಳಿದ್ದಾರೆ.
ಕೆಎಂಆರ್ 340 ತಳಿಯ ಬಿಳಿ ರಾಗಿ ಇದಾಗಿದ್ದು, ಬಿತ್ತನೆ ಮಾಡಿದ 4 ತಿಂಗಳಿಗೆ ಸಮೃದ್ಧವಾದ ತೆನೆ ಬಿಟ್ಟು ಸಂಪೂರ್ಣವಾಗಿ ಕಟಾವಿಗೆ ಬರುತ್ತದೆ. ಬಿಳಿ ರಾಗಿಯನ್ನು ವರ್ಷದ ಎಲ್ಲ ಕಾಲದಲ್ಲೂ ಬೆಳೆಯಬಹುದಾಗಿದೆ. ಸದ್ಯ ಪ್ರಾಯೋಗಿಕವಾಗಿ ರೈತ ಶ್ಯಾಮಣ್ಣ ಅವರು ನಾಲ್ಕು ಗುಂಟೆಯಲ್ಲಿ 3 ಕ್ವಿಂಟಾಲ್ ರಾಗಿ ಬೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಿಳಿ ರಾಗಿಯನ್ನು ಬೆಳೆಯುವ ಉದ್ದೇಶ ಇವರದ್ದಾಗಿದೆ.
Malur Farmer Grows White Ragi And What Is The Benefits Of White Ragi
#malurfarmer #ragi #agriculture
Our Website : https://Vijaykarnataka.com
Facebook: / vijaykarnataka
Twitter: / vijaykarnataka
Our Video Website: https://kannada.timesxp.com/
Доступные форматы для скачивания:
Скачать видео mp4
-
Информация по загрузке: