ಅಂಗವೈಫಲ್ಯತೆ ಇದ್ದರೂ ಬರವಣಿಗೆ ಕ್ಷೇತ್ರದಲ್ಲಿ ಹೆಸರು ಮಾಡಿದ ಯುವಕನ ಕಥೆ || ಸುಶಾಂತ್ ಪೂಜಾರಿ ಕನ್ನಡಿಕಟ್ಟೆ
Автор: ShadowBloom Productions
Загружено: 2024-09-03
Просмотров: 1832
ಎಲ್ಲಾ ಸೌಲಭ್ಯಗಳಿದ್ದು, ಯಾವುದೇ ಕೊರತೆ, ನೂನ್ಯತೆಗಳಿಲ್ಲದೆ ಹೂವಿನ ಹಾದಿಯಲ್ಲಿ ನಡೆದು ಸಾಧಿಸಿದ ವರ ನಿದರ್ಶನಗಳು ನಮ್ಮ ಮುಂದೆ ಸಾವಿರಾರಿದೆ. ಈ ಸಂದರ್ಶನದ ಮೂಲಕ ನಾವು ಪರಿಚಯಿಸುತ್ತಿರುವ ವ್ಯಕ್ತಿ ಆ ವರ್ಗಕ್ಕೆ ಸೇರಿದವರಲ್ಲ. ಬದಲಾಗಿ ತನ್ನ ಅಂಗವೈಫಲ್ಯತೆಯನ್ನೇ ಸವಾಲಾಗಿ ಸ್ವೀಕರಿಸಿ, ಸಾವಿರಾರು ಕಷ್ಟ ಅವಮಾನಗಳನ್ನ ಎದುರಿಸಿ, ಸಾಧಿಸಿ ಸೈ ಎನಿಸಿಕೊಂಡವರು. ತನ್ನೆರಡು ಕಾಲುಗಳು ಸ್ವಾಧೀನ ಕಳೆದುಕೊಂಡು ಎಲ್ಲರಂತೆ ನಡೆದಾಡಲು ಸಾಧ್ಯವಾಗದೆ ಹೋದರು ಊರಿನ ಪಂಚಾಯಿತಿಯಲ್ಲಿ ಡೇಟಾ ಕಲೆಕ್ಟೆರ್ ಆಗಿ ಕೆಲಸ ಮಾಡುತ್ತ, ಕುಟುಂಬದ ನಿರ್ವಹಣೆಯ ಜೊತೆಗೆ ತನ್ನ ಆಸಕ್ತಿಯ ಕ್ಷೇತ್ರ ಬರವಣಿಗೆಯಲ್ಲಿ ತಮ್ಮದೇ ಛಾಪು ಮೂಡಿಸಿದ ಒಬ್ಬ ಅದ್ಭುತ ಕಥೆಗಾರ, ಬರಹಗಾರ "ಸುಶಾಂತ್ ಪೂಜಾರಿ ಕನ್ನಡಿಕಟ್ಟೆ" ಯವರನ್ನು ಈ ಸಂದರ್ಶನದ ಮೂಲಕ ಪರಿಚಯಿಸಲಿದ್ದೇವೆ.
ಬದುಕಿನ ಸಣ್ಣ ಪುಟ್ಟ ಕಷ್ಟ ಅವಮಾನಗಳಿಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುವ, ತಮ್ಮ ನೂನ್ಯತೆಗಳು,ಕೊರತೆಗಳ ಕುರಿತು ಗಾಢವಾಗಿ ಚಿಂತಿಸಿ ಮನಸನ್ನು ಘಾಸಿಮಾಡಿಕೊಳ್ಳುವ, ಸಾಧನೆಯ ಹಾದಿಯಲ್ಲಿ ಬರುವ ನಿರಂತರ ಸೋಲುಗಳಿಂದ ಕಂಗೆಟ್ಟು, ಕೈ ಚೆಲ್ಲಿ ಕೂರುವ ಇಂದಿನ ಯುವಜನತೆಗೆ ಸುಶಾಂತ್ ರವರು ಬದುಕನ್ನು ಸ್ವೀಕರಿಸಿರುವ ರೀತಿ ಮತ್ತು ಸಾಧಿಸಿರುವ ಹಾದಿಯನ್ನು ಕಂಡಾಗ ಸಣ್ಣ ಮಟ್ಟದ ಪ್ರೇರಣೆ ದೊರೆಯಬಹುದು ಮತ್ತು ಆತ್ಮವಿಶ್ವಾಸದ ಬೆಳಕು ಮೂಡಬಹುದು ಎಂಬ ಉದ್ದೇಶದಿಂದ ಈ ಸಂದರ್ಶನವನ್ನು ಕೈಗೊಳ್ಳುತ್ತಿದ್ದೇವೆ.
Concept & Interviewer : Chethan Kashipatna
Best Support : Sooraj shetty Padangady
Do subscribe our channel🙏
#interview #motivation #talent #viralvideo
Доступные форматы для скачивания:
Скачать видео mp4
-
Информация по загрузке: