ಅಂಬುಧಿನಿಧಿಯಿಂದುದಹಿಸಿ l Ambudhi l krishna l ರುಕ್ಮಿಣಿ l ರತಿ ಮನ್ಮಥ ಕಲ್ಯಾಣ l Dr.Nagaraj K C Kalari
Автор: Dr. Nagaraj K C Kalari
Загружено: 2024-03-29
Просмотров: 64199
ಅಂಬುಧಿನಿಧಿಯಿಂದುದಹಿಸಿ ಎನ್ನಂ
ಸಂಭ್ರಮಗೊಳಿಸಿದ ಅಧಿದೇವತೆ
ಜಾದೂಗೈದೆನ್ನ ಹೃದಯ ರಂಗವ
ಮೋದದಿ ಸೆಳೆದ ಸದಮಲಶ್ರೀ
ಕಡಲಮಡಿಲಿಂ ಮೂಡಿ ಬಂದಾಕ್ಷಣ
ಮೋಡಿ ಮಾಡಿದಿರೆನ್ನ ಕುಡಿ ನೋಟದಿ
ನಾಡಿಮಿಡಿಸೆನ್ನ ಹೃದಯ ಪಲ್ಲಂಗದಿ
ಪವಡಿಸಲಾಶ್ರಯ ಬೇಡಿದ ಪ್ರಭುವೇ
ಆವದೇವಿಯು ನಿನ್ನ ಭಾವ ನಿರ್ಮಿಸಿದಾಕೆ
ನವಗುಣದತಿಶಯಿ ಭಾರ್ಗವಿ
ಶಿವ ಸತಿ ಭ್ರಮಾನಿಯೋ
ಬ್ರಹ್ಮನರಸಿ ವಾಗ್ದೇವಿಯೋ
ನಿನ್ನ ರೂಪ ರಚಿಸಿದಂತ ಆ ಕುಂಚಕೇ ನಿತ್ಯ ಬಳುವಳಿ ಚೆಲುವೆ
ಸುರಭಿ ಶುಭೋದಯದಿ ಸಿರಿದೇವಿಯ ವರಿಸಿದೆ ನಾಂ
ಬಂದೆನ್ನ ಬಂಧಿಯೊಳ್ ಆನಂದ ಪಡಿಸು
ಅಂಬುಧಿನಿಧಿಯಿಂದುದಹಿಸಿ ಎನ್ನಂ
ಸಂಭ್ರಮಗೊಳಿಸಿದ ಅಧಿದೇವತೆ
ಜಾದೂಗೈದೆನ್ನ ಹೃದಯ ರಂಗವ
ಮೋದದಿ ಸೆಳೆದ ಸದಮಲಶ್ರೀ
ಅಂಬುಧಿನಿಧಿಯಿಂದುದಹಿಸಿ
ಆವ ದೇವನೋ ನಿನ್ನ ಭಾವ ನಿರ್ಮಿಸಿದಾತ
ನವ ಗುಣ ಶೀಲಾ ಜನಾರ್ಧನ
ಗೌರಿ ಮನೋಹರನೋ
ಕೀರ್ವಾಣಿಯ ಪತಿ ಬ್ರಹ್ಮನೋ
ನಿನ್ನ ರೂಪ ರಚನೆಗೈದ ಆ ಕುಂಚಕೆ ನಿತ್ಯ ಬಳುವಳಿ ಚೆಲುವ
ಸುರಭಿ ಶುಭೋದಯದಿ, ಸಿರಿದೇವನ ವರಿಸಿದೆನಾ
ಬಂದೆನ್ನ ಬಂಧಿಯೊಳ್ ಆನಂದ ಪಡಿಸು
ಕಡಲಮಡಿಲಿಂ ಮೂಡಿ ಬಂದಾಕ್ಷಣ
ಮೋಡಿ ಮಾಡಿದಿರೆನ್ನ ಕುಡಿ ನೋಟದಿ
ನಾಡಿಮಿಡಿಸೆನ್ನ ಹೃದಯ ಪಲ್ಲಂಗದಿ
ಪವಡಿಸಲಾಶ್ರಯ ಬೇಡಿದ ಪ್ರಭುವೇ
Доступные форматы для скачивания:
Скачать видео mp4
-
Информация по загрузке: