Daasara Pada - Kallu Sakkare Kolliro - Vid. Kalavathy Avadhoot
Автор: Kay Kay
Загружено: 2021-06-09
Просмотров: 1013
ಹಾಡುಗಾರಿಕೆ - ವಿದುಷೀ ಕಲಾವತೀ ಅವಧೂತ
ರಾಗ - ಕಲ್ಯಾಣೀ
ರಚನೆ - ಪುರಂದರದಾಸರು
Vocals - Vid. Kalāvati Avadhūta
Rāga - Kalyāṇi
Sāhitya - Purañdaradāsa
ಕಲ್ಲು ಸಕ್ಕರೆ ಕೊಳ್ಳಿರೋ, ನೀವೆಲ್ಲರೂ
ಕಲ್ಲು ಸಕ್ಕರೆ ಕೊಳ್ಳಿರೋ|| ಪ||
ಕಲ್ಲು ಸಕ್ಕರೆ ಸವಿ ಬಲ್ಲವರೇ ಬಲ್ಲರು
ಫುಲ್ಲ ಲೋಚನ ಶ್ರೀಕೃಷ್ಣ ನಾಮವೆಂಬ || ಅ.ಪ||
ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ ಒ-
ತ್ತ್ಯೊತ್ತಿ ಗೋಣಿಯೋಳ್ ತುಂಬುವುದಲ್ಲ
ಎತ್ತ ಹೋದರು ಬಾಡಿಗೆ ಸುಂಕ ಇದಕಿಲ್ಲ
ಉತ್ತಮ ಸರಕಿದು ಅತೀ ಲಾಭ ಬರುವಂಥ ||
ನಷ್ಟ ಬೀಳುವುದಿಲ್ಲ ನಾತ ಹುಟ್ಟುವುದಿಲ್ಲ
ಎಷ್ಟು ಒಯ್ದರು ಬೆಲೆರೊಕ್ಕವಿದಕಿಲ್ಲ
ಕಟ್ಟಿರುವೆಯು ತಿಂದು ಕಡಿಮೆಯಾಗುವುದಲ್ಲ
ಪಟ್ಟಣದೊಳಗೆ ಪ್ರಸಿದ್ಧವಾಗಿರುವಂಥ ||
ಸಂತೆ ಸಂತೆಗೆ ಹೋಗಿ ಶ್ರಮ ಪಡಿಸುವುದಲ್ಲ
ಸಂತಯೊಳಗೆ ಇಟ್ಟು ಮಾರುವುದಲ್ಲ
ಸಂತತ ಭಕ್ತರ ನಾಲಿಗೆ ಸವಿಗೊಂಬ
ಕಾಂತ ಪುರಂದರ ವಿಠ್ಠಲನಾಮವೆಂಬ ||
kallu sakkare koḷḷirō, nīvellarū
kallu sakkare koḷḷirō ||
kallu sakkare savi ballavarē ballaru
phulla lōcana śrīkṛṣṇa nāmaveṁba ||
ettu hērugaḷiṁda hottu māruvudalla o-
tyotti gōṇiyoḷ tuṁbuvudalla
etta hōdarū bāḍige suṁka idakilla
uttama sarakidu ati lābha taruvaṁtha ||
naṣṭa bīḷuvudilla nāta huṭṭuvudilla
eṣṭu oydarū belerokkavidakilla
kaṭṭiruveyu tiṃdu kaḍimeyāguvudalla
paṭṭaṇadoḷage prasiddhavāgiruvaṁtha ||
sañte sañtege hōgi śrama paḍisuvudalla
sañteyoḷage iṭṭu māruvudalla
sañtata bhaktara nālige savigoṁba
kāñta purañdara viṭṭhala nāmaveṁba ||
Доступные форматы для скачивания:
Скачать видео mp4
-
Информация по загрузке: