ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಮತ್ತು ದೈವಗಳ ನೇಮೋತ್ಸವ
Автор: NAMMA PUTTUR
Загружено: 2025-12-21
Просмотров: 232
ಪುತ್ತೂರು; ಯು.ಆರ್. ಪ್ರಾಪರ್ಟೀಸ್ ಪುತ್ತೂರು ಹಾಗೂ ನಾಗರಕ್ತೇಶ್ವರಿ ಪ್ರತಿಷ್ಠಾನ ಬೆದ್ರಾಳದ ವತಿಯಿಂದ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆ ಮತ್ತು ದೈವಗಳ ನೇಮೋತ್ಸವ ಕಾರ್ಯಕ್ರಮ ಡಿ.23ರಂದು ನಡೆಯಲಿದೆ ಎಂದು ಯು.ಆರ್ ಪ್ರಾಪರ್ಟೀಸ್ ಆಡಳಿತ ನಿರ್ದೇಶಕ ಹಾಗೂ ನಾಗರಕ್ತೇಶ್ವರಿ ಪ್ರತಿಷ್ಠಾನದ ಸಂಚಾಲಕ ಉಜ್ವಲ್ ಪ್ರಭು ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಕಳೆದ 11 ವರ್ಷಗಳಿಂದ ಯು.ಆರ್ ಪ್ರಾಪರ್ಟೀಸ್ 19 ಲೇಔಟ್ ಗಳನ್ನು ಮಾಡಿದೆ. ಸಾಮಾಜಿಕವಾದ ಚಿಂತನೆಯೊಂದಿಗೆ ಎಲ್ಲರಿಗೂ ಅನುಕೂಲಕರ ನೆಲೆಯಲ್ಲಿ ಮನೆಗಳನ್ನು ಒದಗಿಸುವ ಕಾರ್ಯ ನಡೆಸುತ್ತಿದೆ. ಲೇಔಟ್ ಗಳಲ್ಲಿ ಸಂಪೂರ್ಣ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದೀಗ ಶ್ರೀಮಾ ಥೀಂ ಪಾರ್ಕ್ ಸಮಾಜಕ್ಕೆ ಮತ್ತೊಂದು ಕೊಡುಗೆಯಾಗಿದೆ. ಸುಮಾರು 10 ಎಕರೆ ಸ್ಥಳದಲ್ಲಿ ಈ ಥೀಂ ಪಾರ್ಕ್ ನಿರ್ಮಾಣಗೊಳ್ಳಲಿದೆ. ಇದರ ಜತೆಗೆ ಈ ಜಾಗದ ಪಕ್ಕದಲ್ಲಿ ಅಜೀರ್ಣಾವಸ್ಥೆಯಲ್ಲಿದ್ದ ದೈವಗಳ ಗುಡಿಗಳನ್ನು ನವೀಕೃತಗೊಳಿಸಿದ್ದು, ರಕ್ತೇಶ್ವರಿ ಸೇರಿದಂತೆ ಪರಿವಾರ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದರು.
ಡಿ.23ರಂದು ಸಂಜೆ 5 ಗಂಟೆಗೆ ಶ್ರೀಮಾ ಥೀಂ ಪಾರ್ಕ್ ಲೋಕಾರ್ಪಣೆಗೊಳ್ಳಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ದೀಪಪ್ರಜ್ವಲನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು.ಆರ್ ಪ್ರಾಪರ್ಟೀಸ್ ಆಡಳಿತ ನಿರ್ದೇಶಕ ಉಜ್ವಲ್ ಪ್ರಭು ವಹಿಸಲಿದ್ದಾರೆ. ಶಾಸಕ ಅಶೋಕ್ ರೈ ಥೀಂ ಪಾರ್ಕಿನ ಲೋಕಾರ್ಪಣೆ ಮಾಡಲಿದ್ದಾರೆ. ಕ್ಯಾ.ಬ್ರಿಜೇಶ್ ಚೌಟ ಶ್ರೀಮಾ ಸೆಲೆಸ್ಟಿಯಲ್ ಅನಾವರಣ ಮಾಡಲಿದ್ದಾರೆ. ಪುತ್ತೂರಿನ ಮೊತ್ತಮೊದಲ 14 ಅಂತಸ್ತುಗಳ ಕಟ್ಟಡ ಶ್ರೀಮಾ ಹೈಟ್ಸ್ ಗೆ ಮಾಜಿ ಕಾನೂನು ಸಚಿವ ಮಾಧು ಸ್ವಾಮಿ ಶಿಲಾನ್ಯಾಸ ಮಾಡಲಿದ್ದಾರೆ. ಸಿಂಧೂರ ಪಾರ್ಕ್‍ನ್ನು ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಗುಣರಂಜನ್ ಶೆಟ್ಟಿ ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಮಂಗಳೂರು ಗಣೇಶ್ ಬೀಡಿ ವಕ್ರ್ಸ್ ಆಡಳಿತ ನಿರ್ದೇಶಕ ಡಾ.ಜಗನ್ನಾಥ್ ಶೆಣೈ ಭಾಗಿಯಾಗಲಿದ್ದಾರೆ. ಎಂಎಲ್‍ಸಿ ಕಿಶೋರ್ ಬೊಟ್ಯಾಡಿ, ಮಾಜಿ ಎಂ.ಪಿ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಶೆಟ್ಟಿ, ಮಲ್ಲಿಕಾ ಪ್ರಸಾದ್, ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ, ರಾಜ್ಯ ಕುಸ್ತಿ ಸಂಘದ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಹುಬ್ಬಳ್ಳಿ, ಡಾ.ಪ್ರಸಾದ್ ಭಂಡಾರಿ, ಬಲರಾಮ ಆಚಾರ್ಯ, ಎಸ್.ಆರ್ ರಂಗಮೂರ್ತಿ, ಪುಷ್ಪರಾಜ್ ಜೈನ್, ಲೀಲಾವತಿ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ, ಮಂಗಳೂರು ಕಾರ್ಪೋರೇಟರ್ ಪ್ರವೀಣ್‍ಚಂದ್ರ ಆಳ್ವ, ಹೇಮನಾಥ ಶೆಟ್ಟಿ ಕಾವು, ನಗರಸಭಾ ಸದಸ್ಯೆ ರೋಹಿಣಿ ಭಾಗವಹಿಸಲಿದ್ದಾರೆ.
ಪುತ್ತೂರಿನ ಮಹಾಲಿಂಗೇಶ್ವರ ದೇವಳದ ವಠಾರದಿಂದ ಡಿ.22ರಂದು ಸಂಜೆ 4 ಗಂಟೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಡಾ.ಪ್ರಸಾದ್ ಭಂಡಾರಿ ಹಾಗೂ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಂಜೆ 6ಕ್ಕೆ ಮೈಸೂರಿನ ರಾಮಚಂದ್ರಾಚಾರ್ ಅವರಿಂದ ದಾಸವಾಣಿ ಕಾರ್ಯಕ್ರಮ ಹಾಗೂ ರಾತ್ರಿ 8.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.
ಡಿ.23ರಂದು ಬೆಳಿಗ್ಗೆ 8 ಗಂಟೆಗೆ ಕಲಶಪ್ರಧಾನ ಹೋಮ, ಕಲಶಾಭಿಷೇಕ, ಗಣಪತಿ ಹೋಮ, ನಾಗತಂಬಿಲ, ರಕ್ತೇಶ್ವರಿ ಸಪರಿವಾರ ದೈವಗಳಿಗೆ ಸೇವೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. 10 ಗಂಟೆಗೆ ನವೀಕೃತ ಬೆದ್ರಾಳ ಶ್ರೀದೇವಿ ಭಜನಾಮಂದಿರವನ್ನು ಯು.ಆರ್.ಪ್ರಾಪರ್ಟೀಸ್ ಸಹಾಯಕ ಆಡಳಿತ ನಿರ್ದೇಶಕಿ ರಕ್ಷಾ ಎಸ್.ಆರ್ ದೀಪಪ್ರಜ್ವಲನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಭಜನಾ ಸೇವೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ಕ್ಕೆ ದೈವಗಳ ಭಂಡಾರ ತೆಗೆಯುವುದು. ರಾತ್ರಿ 9 ಗಂಟೆಯಿಂದ ರಕ್ತೇಶ್ವರಿ ದೈವ ಹಾಗೂ ವರ್ಣರ ಪಂಜುರ್ಲಿ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ.
ಗೋಷ್ಟಿಯಲ್ಲಿ ಉದ್ಯಮಿಗಳಾದ ಸಂತೋಷ್ ಕುಮಾರ್ ರೈ, ಪ್ರಸನ್ನ ಕುಮಾರ್ ಶೆಟ್ಟಿ, ಬಾಲಕೃಷ್ಣ ಗೌಡ, ಸಂಜೀವ ಗೌಡ, ನಿತಿನ್ ಮಂಗಳ ಉಪಸ್ಥಿತರಿದ್ದರು.
Доступные форматы для скачивания:
Скачать видео mp4
-
Информация по загрузке: