ಮಾನವ ಕುಲದ ಪೋಷಣೆಗೆ | Mother Mary song in Kannada
Автор: Suptha Chethana
Загружено: 2022-09-07
Просмотров: 104849
ಪ್ರೀಯರೇ, ಮಾತೆ ಮರಿಯಳ ಜನ್ಮದಿನವನ್ನು ಕೊಂಡಾಡುತ್ತಿರುವ ಈ ಸುದಿನದಂದು ಸಂತ ಪೇತ್ರರ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಮಾತೆ ಮರಿಯಳಿಗೆ ಸಮರ್ಪಿತವಾದ ಈ ಗೀತೆಯನ್ನು ಪ್ರಸ್ತುತಪಡಿಸುತ್ತಿದ್ದೇವೆ. ಇದನ್ನು ಆಲಿಸಿ, ಪರರಲ್ಲಿ ಹಂಚಿ ಪ್ರೋತ್ಸಾಹಿಸಿರೆಂದು ವಿನಂತಿಸುತ್ತೇವೆ..
Dear Friends, on the Occasion of the Feast of The Nativity of Blessed Virgin Mary, St Peter's Kannada academy feels happy to releas a hymn on the honour of Mother Mary. Please do Like and share the song and subscribe the Channel.
Lyrics and Music - Br Joyal Vegas, Chikmagalur
Singer- Br Melwyn Fernandes, Gulbarga
ಸರ್ವರಿಗೂ ಮರಿಯ ಜಯಂತಿಯ ಹಾರ್ದಿಕ ಶುಭಾಷಯಗಳು..
Wishing you all a very happy Feast of the Nativity of Blessed Virgin Mary..
ಮಾನವ ಕುಲದ ಪೋಷಣೆಗೆ
ದೇವರ ರಕ್ಷಣಾ ಯೋಜನೆಗೆ
ಮುನ್ನುಡಿಯಾಗಿ ಜನ್ಮವತಾಳಿ
ಧರೆಗಿಳಿದವಳೇ ಮರಿಯ.(2)
ಸಂತ ಜೋಕಿಮ್ಮರ ಸಂತ ಅನ್ನರ
ಮುದ್ದು ಮುದ್ದು ಮಗಳೇ
ಕಂದ ಮರಿಯ
ನಮೋ ನಮೋ ನಮೋ ಮರಿಯ
ನಮೋ ನಮೋ ಕಂದಾ ಮರಿಯ
ಜನ್ಮಪಾಪದ ಕಳಂಕವಿಲ್ಲದೆ ಈ ಭುವಿಗೆ ನೀ ಬಂದೆ
ದೇವ ತಂದೆ ಮೆಚ್ಚುವಂತೆ ಪರಿಶುದ್ಧ ಜೀವನ ನೀ ಬಾಳಿದೆ
ದೇವ ದೂತನ ದಿವ್ಯ ಕರೆಗೆ ದೈನ್ಯತೆಯಲಿ ನೀ ಮಣಿದೆ
ತ್ಯಾಗಿಯಾದೆ ಸೇವಕಿಯಾದೆ ದೇವಪುತ್ರಗೆ ತಾಯಿಯಾದೆ
ಪ್ರೀತಿ ಮಮತೆ ವಾತ್ಸಲ್ಯದಿಂದ ಯೇಸುಕ್ರಿಸ್ತರ ಬೆಳೆಸಿದೆ
ಪ್ರೀಯ ಪುತ್ರ ಕಾಣದಿರಲು ದುಗುಡದಿಂದ ಹುಡುಕಿದೆ
ಶಿಲುಭೆ ಮೇಲೆ ಮಗನ ಕಂಡು ನೋವಿನಿಂದ ಮರುಗಿದೆ
ಶುದ್ಧಮನದಿ ಧೃಢವಿಶ್ವಾಸದಿ ಬಾಳ ನಡೆಸಲು ಮಾದರಿಯಾದೆ
Доступные форматы для скачивания:
Скачать видео mp4
-
Информация по загрузке: