ವಾಲ್ಮೀಕಿ ಶ್ರೀಗಳ ನೇತೃತ್ವದಲ್ಲಿಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಹೆಚ್.ಸಿ.ಮಹದೇವಪ್ಪರವರನ್ನು ಭೇಟಿ ಮಾಡಿದ
Автор: @gKarnataka Power tv
Загружено: 2025-12-05
Просмотров: 287
gkarnataka power tv//05//12//2025//#@
ವಾಲ್ಮೀಕಿ ಶ್ರೀಗಳ ನೇತೃತ್ವದಲ್ಲಿ
ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಹೆಚ್.ಸಿ.ಮಹದೇವಪ್ಪರವರನ್ನು ಭೇಟಿ ಮಾಡಿದ ಚಾಮರಾಜನಗರ ಜಿಲ್ಲಾ ನಾಯಕ ಹೋರಾಟ ಸಮಿತಿ...
ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿ ಹೊಳಿ,ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ, ಅವರನ್ನು ವಾಲ್ಮೀಕಿ ಶ್ರೀಗಳ ನೇತೃತ್ವದಲ್ಲಿ ಚಾಮರಾಜನಗರ ಜಿಲ್ಲಾ ನಾಯಕ ಜನಾಂಗದ ಹೋರಾಟ ಸಮಿತಿಯು ಬೆಂಗಳೂರಿನ ಸಚಿವರ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದರು.
ನಂತರ ಮಾನ್ಯ ಮುಖ್ಯಮಂತ್ರಿ, ಗೃಹ ಮಂತ್ರಿ ಹಾಗೂ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮುಖ್ಯಸ್ಥ ಡಾ. ಎಂ.ಎ. ಸಲೀಂ ಅವರಿಗೆ ಮನವಿ ಸಲ್ಲಿಸಿದರು...
ಚಾಮರಾಜನಗರ ತಾಲೂಕಿ ನ ಜ್ಯೋತಿಗೌಡನಪುರ ಗ್ರಾಮದಲ್ಲಿ
ಅಕ್ಟೊಬರ್ 24 ರಂದು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಪ್ಲೆಕ್ಸ್ ಮತ್ತು ಬುದ್ಧ ಪ್ರತಿಮೆಗಳಿಗೆ ಹಾನಿ ಉಂಟುಮಾಡಿರುವ ಘಟನೆಯ ತನಿಖೆಯಲ್ಲಿ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅವರ ತನಿಖಾ ತಂಡವು ನಿಷ್ಪಕ್ಷಪಾತವಾಗಿ, ದಕ್ಷತೆಯಿಂದ ತನಿಖೆಯನ್ನು ನಡೆಸದೇ ನಾಯಕ ಜನಾಂಗವನ್ನೇ ಗುರಿಯಾಗಿಟ್ಟುಕೊಂಡು ತನಿಖೆ ಮಾಡಿರುವುದು ಖಂಡನೀಯವಾಗಿರುತ್ತದೆ.
ಚಾಮರಾಜನಗರ ತಾಲ್ಲೂಕು ಹರದನಹಳ್ಳಿ ಗ್ರಾಮದ ಶಿವಣ್ಣ ಅಲಿಯಾಸ್ ಜೆಜ್ಜಿ ಎಂಬ ವ್ಯಕ್ತಿಯನ್ನು ತನಿಖೆಗಾಗಿ ಕರೆಸಿಕೊಂಡು ಆಪಾಧಿತ ಮಂಜ ಅಲಿಯಾಸ್ ಪೆಂಡಾಲ್ ಮಂಜನ ವಿರುದ್ಧವಾಗಿ ಸಾಕ್ಷಿಯನ್ನು ನೀನು ಹೇಳಬೇಕು ಎಂದು ಒತ್ತಾಯಿಸಿದ್ದಾರೆ.
ಆ ಸಂದರ್ಭದಲ್ಲಿ ಶಿವಣ್ಣ ನಾನು ಮಂಜನ ಸ್ನೇಹಿತನಾಗಿದ್ದರೂ ಇದುವರೆಗೆ ನನ್ನ ಜೊತೆಗೆ ಯಾವುದೇ ವಿಷಯವನ್ನು ಚರ್ಚಿಸಿಲ್ಲ ಮತ್ತು ಯಾವುದೇ ವಿಷಯ ನನಗೆ ಗೊತ್ತಿಲ್ಲ ಎಂದು ತನಿಖಾ ತಂಡಕ್ಕೆ ತಿಳಿಸಿದ ನಂತರ ಅವನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ನಾಯಕ ಜನಾಂಗದ ಮೇಲೆ ಕಪ್ಪುಚುಕ್ಕೆ ತರುವ ಕೆಲಸ ಮಾಡಿ, ನಿರಪರಾಧಿಗಳಿಗೆ ತೊಂದರೆ ಕೊಟ್ಟಿರುವವ ಪೊಲೀಸರ ಮೇಲೆ ಈ ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು ಎಂದು ಚಾಮರಾಜನಗರ ಜಿಲ್ಲಾ ನಾಯಕ ಜನಾಂಗದ ಹೋರಾಟ ಸಮಿತಿಯು
ಮನವಿಯಲ್ಲಿ ಒತ್ತಾಯಿಸಿದೆ....
ನಂತರ ಸಮುದಾಯದ ಮುಖಂಡರನ್ನು ಉದ್ದೇಶಿಸಿ ಶ್ರೀ ವಾಲ್ಮೀಕಿ ಶ್ರೀಗಳಾದ ಡಾ. ಪ್ರಸನ್ನನಂದಪುರಿ ಸ್ವಾಮೀಜಿ ರವರು ಮಾತನಾಡಿ ಎಸ್ ಸಿ, ಎಸ್ ಟಿ ಸಮುದಾಯ ಒಂದಾಗಿರಬೇಕು.ಹಲವಾರು ವಿಷಯಗಳನ್ನು ಕುರಿತು ಮುಖಂಡರಿಗೆ ಆಶೀರ್ವಾಚನ ಮಾಡಿದರು..
ಮುಖಂಡರಾದ ಗಿರೀಶ್ ರವರು ಮಾತನಾಡಿ ಸಮುದಾಯದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂದುಕೊಳ್ಳುವ ಬಗ್ಗೆ ವಿವರವಾಗಿ ತಿಳಿಸಿದರು...
ಈ ಸಂದರ್ಭದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ರಾಮಚಂದ್ರ, ವಾಲ್ಮೀಕಿ ಸಮಾಜ ಸೇವಾ ಸಮಿತಿ ರಾಜ್ಯಾಧ್ಯಕ್ಷ ಕೆಲ್ಲಂಬಳ್ಳಿ ಸೋಮನಾಯಕ,ತಾಲೂಕು ನಾಯಕ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪು.ಶ್ರೀನಿವಾಸನಾಯಕ, ನಗರಸಭಾ ಮಾಜಿ ಅಧ್ಯಕ್ಷ
ಸುರೇಶ್ ನಾಯಕ, ಕೊಳ್ಳೇಗಾಲ ಚಿಕ್ಕಮಾದನಾಯಕ,
ಮಾಜಿ ಸದಸ್ಯರಾದ ಶಿವರಾಜ್,
ಚೆಂಗುಮಣಿ, ಬುಲೆಟ್ ಚಂದ್ರು, ಮಸಣಾಪುರ ಮಹದೇಶ, ಸಿಂಗನಪುರ ಮಾದೇಶ್,
ಮುಖಂಡರಾದ ಕಪಿನಿನಾಯಕ, ಕಂಡಕ್ಟರ್
ಚಾ.ಸಿ.ಸೋಮನಾಯಕ, ಕೃಷ್ಣನಾಯಕ, ನಾಗೇಂದ್ರ,ಹರದನಹಳ್ಳಿ ಗಣೇಶ, ಚಂದ್ರಶೇಖರ. ಎಸ್, ಸೋಮೇಶ್,ಶಿವುವಿರಾಟ್, ಅಮಚವಾಡಿ ಮಹೇಂದ್ರ, ಬದನಗುಪ್ಪೆ ಶಿವರಾಂ,ಅಲ್ಕೆರೆ ಅಗ್ರಹಾರ ಸಿದ್ದರಾಜ ನಾಯಕ, ನಿಂಗನಾಯಕ, ಬಸವಣ್ಣ ನಾಯಕ, ಚಿಕ್ಕಣ್ಣನಾಯಕ, ನಂಜುಂಡಸ್ವಾಮಿ,ಗುರುಲಿಂಗನಾಯಕ, ನಾಗನಾಯಕ, ಉಮಾಶಂಕರ್,ವೆಂಕಟಛಲ, ಇತರರು ಹಾಜರಿದ್ದರು...
ವರದಿ:ಗೂಳಿಪುರ ಮಣಿಕಂಠ ನಾಯಕ್
ಚಾಮರಾಜನಗರ
@gkarnatakapowertv
@TV5Kannada
@NewsFirstKannada
@tv9kannada
Доступные форматы для скачивания:
Скачать видео mp4
-
Информация по загрузке: