78th Independence Day celebration.
Автор: Adamaru Matha
Загружено: 2024-08-15
Просмотров: 2256
ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶ್ರೀ ದೇವಸ್ಥಾನದ ಆಡಳಿತದಾರರು ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಧ್ವಜಾರೋಹಣ ಮಾಡಿ, ರವೀಂದ್ರನಾಥ ಠಾಗೂರರು ನೀಡಿದ ರಾಷ್ಟ್ರಗೀತೆಯಲ್ಲಿ ರಾಷ್ಟ್ರಭಕ್ತಿ,ರಾಷ್ಟ್ರಚಿಂತನೆಯೊಂದಿಗೆ ದೇಶಭಕ್ತರ ಸಮೂಹಕ್ಕೆ ಅಧಿನಾಯಕನಾದ ಭಗವಂತನ ಚಿಂತನೆಯನ್ನು ಮಾಡುವುದರ ಮುಕಾಂತರ ಜಗನ್ಮಾತೆ ದುರ್ಗೆಯು ನಮ್ಮನ್ನು ಸಲಹಲಿ ಎಂದು ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ತಂತ್ರಿಗಳಾದ ಪುತ್ತೂರು ಶ್ರೀನಿವಾಸ ತಂತ್ರಿ,ಖ್ಯಾತ ವಕೀಲರಾದ ರಾಮಚಂದ್ರ ಅಡಿಗ, ಅರ್ಚಕರಾದ ಗೋಪಾಲಕೃಷ್ಣ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಅರ್ಚಕ ವಿದ್ವಾನ್ ರಾಘವೇಂದ್ರ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ನೀಡಿದರು.ಕುಮಾರಿ ವೈಷ್ಣವಿ ಭಟ್ ಮತ್ತು ಸಂಗಡಿಗರು ವಂದೇಮಾತರಂ ಗೀತೆಯನ್ನು ಹಾಡಿದರು.
Доступные форматы для скачивания:
Скачать видео mp4
-
Информация по загрузке: