AYAPPA ಶಬರಿಮಲೈಯಲ್ಲಿ ಪೊಳಲಿ ಅಯ್ಯಪ್ಪ ವೃತಧಾರಿ ತಂಡದಿಂದ ವಾದ್ಯ ಸಂಗೀತ
Автор: Suddi9
Загружено: 2025-09-21
Просмотров: 568
ವರ್ಷದ ಕೆಲವು ಪವಿತ್ರ ದಿನಗಳಂದು ಶ್ರೀ ಕ್ಷೇತ್ರ ಪೊಳಲಿಯಿಂದ ಶಬರಿಮಲೈಗೆ ಯಾತ್ರೆ ಹೊರಡುವ ಅಯ್ಯಪ್ಪ ವೃತಧಾರಿಗಳ ತಂಡವೊಂದು ಸೆ. 18ರಂದು ಗುರುವಾರ ಅಯ್ಯಪ್ಪ ಸನ್ನಿಧಾನದಲ್ಲಿ ಪ್ರದರ್ಶಿಸಿದ ವಾದ್ಯ ಸಂಗೀತ ಕಾರ್ಯಕ್ರಮ ಶಬರಿಮಲೆಯಲ್ಲಿ ಭಕ್ತಾದಿಗಳ ಮೆಚ್ಚುಗೆ ಗಳಿಸಿದೆ. ಪೊಳಲಿಯ ಅಯ್ಯಪ್ಪ ವೃತಧಾರಿ ತಂಡವು ಓಣಂ, ಮಂಡಲಪೂಜೆ, ಮಕರವಿಳಕ್ಕು ಸಂದರ್ಭಗಳಲ್ಲಿ ಶಬರಿಮಲೈಗೆ ಯಾತ್ರೆ ಕೈಗೊಂಡಾಗ ದೇವಸ್ಥಾನದ ಅನುಮತಿ ಮೇರೆಗೆ ಭಜನೆ, ರಕ್ಷಾಬಂಧನ ಆಚರಿಸುತ್ತಿದ್ದರೆ, ಈ ಬಾರಿ ಪೊಳಲಿಯ ರಾಜೇಶ್ ಬಳಗದವರು ವಾದ್ಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ನಾದಸ್ವರದಲ್ಲಿ ಪೊಳಲಿ ರಾಜೇಶ್ ,ಸಮ್ಮೇಳದಲ್ಲಿ ಕರುಣಾಕರ ದೇವಾಡಿಗ, ತಾಸೆಯಲ್ಲಿ ರವಿ, ಚೆಂಡೆಯಲ್ಲಿ ಹರೀಶ್ ಶೆಟ್ಟಿ ಪೊಳಲಿ, ಡೋಲು ವಾದನದಲ್ಲಿ ಅಭಿಷೇಕ್ ಬೋಳಿಯಾರ್, ತಾಳದಲ್ಲಿ ಸುರಾಜ್ ಹಾಗೂ ಕೃತಿ ದೇವಾಡಿಗ ಪೊಳಲಿ ಸಹಕರಿಸಿದರು. ಶ್ರೀ ಕ್ಷೇತ್ರ ಪೊಳಲಿಯಿಂದ ಸೆ.17ರಂದು ಬುಧವಾರ ಸುಮಾರು 45 ಅಯ್ಯಪ್ಪವೃತಧಾರಿಗಳು ಶಬರಿಮಲೆ ಯಾತ್ರೆ ಕೈಗೊಂಡಿದ್ದರು.
Доступные форматы для скачивания:
Скачать видео mp4
-
Информация по загрузке: