ಸ್ವಾಮಿ ಅಯ್ಯಪ್ಪ! ಸ್ವಾಮಿ ಅಯ್ಯಪ್ಪ! | Powerful Ayyappa Bhajan |
Автор: Sa Sa Pulse
Загружено: 2025-12-07
Просмотров: 205
ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ನೀನೆ ಗತಿಯಪ್ಪ , ನನಗೆ ನೀನೆ ಗತಿಯಪ್ಪ
ಅಂಧಕಾರದಲ್ಲಿ ಅಲೆದಾಡುತಲಿರುವೆ
ಕಂಗಳಿದ್ದು ತಂದೆ ಏನು ಕಾಣದಿರುವೆ
ಏಕೆ ಇನ್ನು ದೇವ ಕರುಣೆ ತೋರದಿರುವೆ
ಬೆಳಕಿನೆಡೆಗೆ ನನ್ನಾ ಬೇಗ ನಡೆಸು
ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ನೀನೆ ಗತಿಯಪ್ಪ , ನನಗೆ ನೀನೆ ಗತಿಯಪ್ಪ
ಸಿರಿಯು ಬೇಕು ಎಂದು ಕೇಳಲಾರೆನಯ್ಯ
ಸ್ವರ್ಗ ನೀಡು ಎಂದು ಬೇಡಲಾರೆನಯ್ಯ
ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ನೀನೆ ಗತಿಯಪ್ಪ , ನನಗೆ ನೀನೆ ಗತಿಯಪ್ಪ
ಮುಕ್ತಿಗಾಗಿ ತಂದೆ ಕೈಯ ಚಾಚೆನಯ್ಯ
ಶಾಂತಿ ನೆಮ್ಮದಿಯನು ನೀಡಿ
ದೇವ ರಕ್ಷಿಸಯ್ಯ
ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ನೀನೆ ಗತಿಯಪ್ಪ , ನನಗೆ ನೀನೆ ಗತಿಯಪ್ಪ
ಕಂಗಳಲ್ಲಿ ನಿನ್ನಾ ಚರಣ ತುಂಬಿಕೊಳಲಿ
ಮನಸ್ಸಿನಲ್ಲಿ ನಿನ್ನ ಮೂರ್ತಿ ತುಂಬಿಕೊಳಲಿ
ಕಿವಿಗಳಲ್ಲಿ ನಿನ್ನಾ ಕೀರ್ತಿ ತುಂಬಿಕೊಳಲಿ
ಉಸಿರು ಉಸಿರಿನಲ್ಲೂ ನಿನ್ನಾ
ನಾಮ ತುಂಬಿಕೊಳಲಿ
ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ನೀನೆ ಗತಿಯಪ್ಪ, ನನಗೆ ನೀನೆ ಗತಿಯಪ್ಪ
Доступные форматы для скачивания:
Скачать видео mp4
-
Информация по загрузке: