ರೈತರ ಬೆಂಬಲಕ್ಕೆ ನಿಂತ ಗುಣಧರನಂದಿ ಮಹಾರಾಜರು | Prudent Namaskara
Автор: Prudent Kannada
Загружено: 2025-11-07
Просмотров: 74
ರೈತರ ಬೆಂಬಲಕ್ಕೆ ನಿಂತ ಗುಣಧರನಂದಿ ಮಹಾರಾಜರು | Prudent Namaskara
ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರಾಷ್ಟ್ರಸಂತರು
ಹುಬ್ಬಳ್ಳಿ: ದೇಶಕ್ಕೆ ಅನ್ನ ಹಾಕುವ ಅನ್ನದಾತನ ಬಗ್ಗೆ ಆಳುವ ಸರ್ಕಾರಕ್ಕೆ ಯಾಕಿಷ್ಟು ನಿರ್ಲಕ್ಷ್ಯ. ರೈತ ಇಲ್ಲದಿದ್ದರೇ ಏನೂ ಇಲ್ಲ ಎಂದು ವರೂರಿನ ನವಗ್ರಹ ತೀರ್ಥ ಕ್ಷೇತ್ರದ ರಾಷ್ಟ್ರಸಂತ ಆಚಾರ್ಯ ಗುಣಧರನಂದಿ ಮಹಾರಾಜರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಬೆಳೆಗಾರರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ಅವರು, ರೈತರ ಸಮಸ್ಯೆಗಳನ್ನು 24 ತಾಸಿನಲ್ಲಿ ಬಗೆಹರಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ರೈತರು ಜಗತ್ತಿನ ಆಸ್ತಿ. ರೈತ ಇಲ್ಲದಿದ್ದರೆ ಏನೂ ಇಲ್ಲ. ರೈತ ಬೆಳೆದಾಗಲೇ ಎಲ್ಲ ವ್ಯಾಪಾರ, ವಹಿವಾಟು ನಡೆಯುತ್ತದೆ. ಹತ್ತಿ ಬೆಳೆದಾಗ ಮಾತ್ರ ಬಟ್ಟೆ ಉದ್ಯಮಕ್ಕೆ ಜೀವ ಬರುತ್ತದೆ. ಎಲ್ಲ ಹಬ್ಬಗಳು, ಉತ್ಸಾಹಗಳಿಗೆ ರೈತರೇ ಕಾರಣ. ಹೀಗಾಗಿ, ರೈತರ ಬೇಡಿಕೆಯನ್ನು ಸರ್ಕಾರ ನಿರ್ಲಕ್ಷಿಸಬಾರದು ಎಂದು ಒತ್ತಾಯಿಸಿದ್ದಾರೆ.
ತಕ್ಷಣವೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಕೆಟ್ಟದಾಗುತ್ತದೆ. ಈಗಾಗಲೇ ರೈತರ ಮಕ್ಕಳು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಈಗಿರುವ ರೈತರ ಬಗ್ಗೆಯಾದರೂ ಸರ್ಕಾರ ಕಾಳಜಿ ತೋರಬೇಕು ಎಂದು ಹೇಳಿದ್ದಾರೆ.
ಒಂದು ಸಣ್ಣ ಪೆನ್ ಉತ್ಪಾದಿಸುವ ಉದ್ಯಮಿ ಅದರ ಬೆಲೆ ನಿಗದಿಪಡಿಸುತ್ತಾನೆ. ಆದರೆ, ರೈತ ಬೆಳೆದ ಬೆಳೆಗಳಿಗೆ ಬೆಲೆ ನಿಗದಿಪಡಿಸುವ ಹಕ್ಕು ಆತನಿಗೆ ಇಲ್ಲದಿರುವುದು ದುರ್ದೈವದ ಸಂಗತಿ. ರೈತರ ಹೋರಾಟದ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಕಬ್ಬು ಫ್ಯಾಕ್ಟರಿ ಮಾಲೀಕರು ಸಹ ರೈತರ ಬಗ್ಗೆ ಕಾಳಜಿ ತೋರಬೇಕು. ಫ್ಯಾಕ್ಟರಿ ಮಾಲೀಕರು ತಮ್ಮ ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ತಿನ್ನುವಷ್ಟು ಹಣವನ್ನು ರೈತರ ಬೆಳೆಯಿಂದ ಗಳಿಸಿದ್ದಾರೆ. ಆದರೆ, ರೈತ ಇನ್ನೂ ಬಡತನದಲ್ಲೇ ಜೀವನ ಸಾಗಿಸುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಫ್ಯಾಕ್ಟರಿಗಳಿಗೆ ಸರ್ಕಾರ 24 ತಾಸು ವಿದ್ಯುತ್, ನೀರು ಮತ್ತಿತರ ಸೌಲಭ್ಯ ಒದಗಿಸುತ್ತದೆ. ಆದರೆ, ರೈತ ವಿದ್ಯುತ್‌ಗಾಗಿ ಪರಿತಪಿಸುತ್ತಿದ್ದಾನೆ. ಸರ್ಕಾರ ಇನ್ನಾದರೂ ರೈತರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು ಹಾಗೂ ಆತನ ಬೆಳೆಗಳಿಗೆ ಸಮರ್ಪಕ ಬೆಲೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
Hubli: National Saint Acharya Gunadharanandi Maharaja of Navagraha Tirtha Kshetra, Varur, slammed the government for neglecting farmers — “Without farmers, there is nothing!” he declared, urging the government to resolve sugarcane growers’ issues within 24 hours.
He said, “A businessman can fix the price of a pen, but a farmer can’t fix the price of his crops — that’s injustice.”
The saint called on both central and state governments to wake up and support the real breadwinners of the nation.
@siddaramaiahmediaofficial @IndianNationalCongress @rahulgandhi
#FarmersProtest #SupportFarmers #SugarcaneFarmers #HubliNews #FarmersVoice #KarnatakaFarmers #AcharyaGunadharanandi #StandWithFarmers #GovernmentWakeUp #FairPriceForFarmers #FarmersAreNationBuilders #AgricultureCrisis #FarmersFirst #KarnatakaPolitics #SugarcaneStruggle
*** *** *** *** ***
ಪ್ರುಡೆಂಟ್ ನಮಸ್ಕಾರ –ಕನ್ನಡದ ಹೊಸ ಡಿಜಿಟಲ್ ಸುದ್ದಿ ವಾಹಿನಿ
ಕನ್ನಡಿಗರ ಹೃದಯಕ್ಕೆ ತಲುಪುವ ನಿಖರ ಸುದ್ದಿ, ತಾಜಾ ಅಪ್ಡೇಟ್ಸ್, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆ, ಮನರಂಜನೆ ಎಲ್ಲವೂ ಇಲ್ಲಿದೆ.
ಜನರ ಧ್ವನಿಯನ್ನು ತಲುಪಿಸುವ ನಿಜವಾದ ವೇದಿಕೆ
ಕರ್ನಾಟಕದ ಮೂಲೆ ಮೂಲೆಯ ಸುದ್ಧಿ – ತಕ್ಷಣ ನಿಮ್ಮ ಮೊಬೈಲ್ ಪರದೆಗೆ
ನಿಷ್ಠೆ, ನಿಖರತೆ, ನಿಜವಾದ ಪತ್ರಿಕೋದ್ಯಮ
ಎಲ್ಲ ಕಡೆ, ಎಲ್ಲ ಸಮಯ – ನಿಮ್ಮ ಪ್ರುಡೆಂಟ್ ನಮಸ್ಕಾರ!
#PrudentNamaskara #KannadaNews #KarnatakaNews #BreakingNewsKannada #DigitalNewsKannada #NamaskaraKannada #NammaKarnataka #KannadaMedia #LiveNewsKannada #VoiceOfKarnataka
Доступные форматы для скачивания:
Скачать видео mp4
-
Информация по загрузке: