ಶ್ರೀ ಬಳೆ ಪದ್ಮಾವತಿ ದೇವಾಲಯ ವಡನಬೈಲು PADMAVATHI TEMPLE VADANBAIL WITH NAGADOSHA ONLINE BOOKING PROCEDURE
Автор: SWAROOP HOLENARASIPURA
Загружено: 2023-02-08
Просмотров: 9808
ಶಿವಮೊಗ್ಗ ಜಿಲ್ಲೆಯ ವಡನಬೈಲು ಶ್ರೀ ಬಳೆ ಪದ್ಮಾವತಿ ದೇಗುಲವು ತಲತಲಾಂತರಗಳಿಂದ ಅಸಂಖ್ಯಾತ ಭಕ್ತರಿಂದ ಆರಾಧಿಸಲ್ಪಡುತ್ತಾ ಬಂದಿರುವ ಪವಿತ್ರ ಹಾಗು ದೇವಿ ಮಹಾತ್ಮೆ ಇರುವಂತಹ ಮಂದಿರ.. ಇದರ ಇತಿಹಾಸ ನೋಡುವುದಾದರೆ ಈ ಪದ್ಮಾವತಿ ಅಮ್ಮನವರು ಈ ಮುನ್ನ ಲಿಂಗನಮಕ್ಕಿ ಜಲಾಶಯದ ಬಳಿಯಿದ್ದ ಹೆಬ್ಬಯಲಿನಲ್ಲಿ ನೆಲೆಯಾಗಿದ್ದರು.. ಈಗ ಈ ಹೆಬ್ಬಯಲು ಎಂಬ ಸ್ಥಳ ಇಲ್ಲ.. ಅದು ಲಿಂಗಮನಕ್ಕಿ ಡ್ಯಾಮ್ ನ ಅಡಿ ಮುಳುಗಡೆಯಾಗಿದೆ.. ಆಗ ದೇಗುಲದ ಮುಂದೆ 23-24 ಅಡಿ ಉದ್ದದ ಹಾವಿನ ಹುತ್ತವಿದ್ದು ಈ ಹುತ್ತದ ಸುತ್ತ ಇದ್ದ ಹಾವಿನ ಮರಿಗಳನ್ನು ಹುತ್ತದ ಮೇಲಿಟ್ಟು ಪೂಜೆ ಸಲ್ಲಿಸಲಾಗುತ್ತಿತ್ತು.. ಗಾಜಿನ ಬಳೆ ಮಾತ್ರವಲ್ಲದೆ ಬಂಗಾರ ಮುಂತಾದ ಲೋಹಗಳಿಂದ ಮಾಡಿದ ಬಳೆಗಳನ್ನೂ ಸಹ ಇಲ್ಲಿ ಭಕ್ತಿಯಿಂದ ಸಲ್ಲಿಸಲಾಗುತ್ತಿತ್ತು.
ಈಗ ಈ ದೇಗುಲದ ಪ್ರಸಕ್ತ ಧರ್ಮದರ್ಶಿಗಳಾದ ಎಚ್ ಎಮ್ ವೀರರಾಜಯ್ಯ ಜೈನ್ ಎಂಬುವವರ ವಂಶಸ್ಥರು ಆಗ ಈ ದೇಗುಲಕ್ಕೆ ಪೂಜೆ ಸಲ್ಲಿಸುತ್ತಿದ್ದರು.. ನೂರಾರು ವರ್ಷಗಳ ಹಿಂದೆಯೇ ಈ ವೀರರಾಜಯ್ಯ ಜೈನ್ ರವರ ಮನೆತನಕ್ಕೆ ಈ ದೇವಿ ಒಲಿದಿತ್ತೆಂದು ಹೇಳಲಾಗುತ್ತದೆ.. ಇದು ಹೇಗೆ ಎಂಬ ಬಗ್ಗೆ ಎಲ್ಲಿಯೂ ಸಹ ಉಲ್ಲೇಖವಿಲ್ಲ.. ಹಾಗೂ ಯಾರೂ ಸಹ ಈ ಬಗ್ಗೆ ವಿವರ ದಾಖಲಿಸಿಟ್ಟಿಲ್ಲ..
ಇಲ್ಲಿ ಡ್ಯಾಮ್ ನಿರ್ಮಾಣ ಸಂಧರ್ಭದಲ್ಲಿ ಈ ಸ್ಥಳವೆಲ್ಲ ನೀರಲ್ಲಿ ಮುಳುಗಡೆಯಾದಾಗ ಸರ್ಕಾರ ತನಗಾಗಿ ನೀಡಿದ ಸ್ಥಳಕ್ಕೆ ಸ್ಥಳಾಂತರವಾದ ಈ ಮನೆತನದ ಪೂರ್ವಜರು ದೇವಿಯ ನೆನಪಿಗಾಗಿ ಅಲ್ಲಿಂದ ಒಂದು ಕಲ್ಲನ್ನು ತೆಗೆದುಕೊಂಡು ಬಂದು ಈಗ ಪ್ರಸ್ತುತ ವಾಡಂಬೈಲಿನಲ್ಲಿ ನೆಲೆಯಾಗುತ್ತಾರೆ.
ಮೂಲ ಸ್ಥಳದಲ್ಲಿಯೇ ಎಲ್ಲವನ್ನು ಕಳೆದುಕೊಂಡು ಬಂದಿದ್ದರಿಂದ ಇಲ್ಲಿ ಜೀವನ ಮಾಡೋದೇ ಜೈನ್ ಪರಿವಾರದವರಿಗೆ ಕಡು ಕಷ್ಟಕರವಾಗಿರುತ್ತದೆ.. ಪೂರ್ವಜರು ವಯಸ್ಸಾದ ಕಾರಣ ಅಸುನೀಗಿದಾಗ ಈಗಿನ ಧರ್ಮದರ್ಶಿಗಳು ಹದಿನೆಂಟು ವರ್ಷದವರಾಗಿದ್ದಾಗ ಅವರ ಕನಸಿನಲ್ಲಿ ದೇವಿ ಕಾಣಿಸಿಕೊಂಡು ತಾನೂ ಸಹ ಮೂಲ ಸ್ಥಳ ಬಿಟ್ಟು ನಿಮ್ಮಲ್ಲಿಗೆ ಬಂದಿರುವೆನೆಂದು ಹೇಳಿದ ಹಾಗೆ ಭಾಸವಾಗುತ್ತದೆ.
ಆದರೆ ಹಿರಿಯರ ಸೂಕ್ತ ಮಾರ್ಗದರ್ಶನ ಇಲ್ಲದೆ ಇವರಿಗೆ ದೇವಿಯ ಪೂಜೆ ವ್ರತಗಳ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ.. ಆಗ ತಾನಿದ್ದೇನೆ ತನ್ನನ್ನು ಪೂಜೆ ಮಾಡಿ ಎನ್ನುವಂತಹ ಆ ದೇವಿಯ ಒಂದಷ್ಟು ಕರಾಳ ಸೂಚನೆಗಳು ಅವರಿಗೆ ಸಿಗುತ್ತವೆ.. ದನ ಕರು ಸಾಯೋದು, ಮನೆಯಲ್ಲಿ ಹಾವು ಮುಂತಾದ ವಿಷ ಜಂತುಗಳ ಓಡಾಟ, ಧವಸ ಧಾನ್ಯದ ಕರಗುವಿಕೆ ಹಾಗು ಅಭಾವ ಇದೆಲ್ಲ ಶುರುವಾದಾಗ ಅವರಿಗೆ ದೇವಿ ತಮ್ಮ ಮೇಲೆ ವ್ಯಗ್ರಳಾಗಿದ್ದಾಳೆಂದು ದೈವದ ಹೇಳಿಕೆಯಾದಾಗ ಅವರು ಪದ್ಮಾವತಿ ದೇವಿಗೆ ನೀನು ನಿಜವಾಗಿಯು ಹುತ್ತದ ದೇವಿಯೇ ಆಗಿದ್ದರೆ ನಮಗೆ ಕಾಣಿಸು ಆಗ ನಾವು ನಿನಗೆ ಪೂಜೆ ಕೈಗೊಳ್ಳುತ್ತೇವೆ.. ಇಲ್ಲವಾದರೆ ಇಲ್ಲ ಎಂದು ಕೇಳಿ ಮನೆಗೆ ವಾಪಸ್ ಬಂದು ನೋಡಿದಾಗ ಇವರೇ ತಂದಿಟ್ಟಿದ್ದ ಕಲ್ಲಿನ ವಿಗ್ರಹವು ಹುತ್ತದ ಮೇಲಿಂದ ತಾನೇ ಎದ್ದು ಅದರ ಸುತ್ತ ಹಾವುಗಳು ಓಡಾಡುತ್ತಿರುತ್ತವೆ.
ಆಗ ಅವರಿಗೆ ಈ ದೇವಿ ಇಲ್ಲಿ ಇರುವುದು ಸತ್ಯ ಎಂಬುದರ ಅರಿವಾಗಿ ಅವರು ಅಲ್ಲಿ ಆಕೆಯ ಪೂಜೆ ನೆರವೇರಿಸಲು ನಿರ್ಧರಿಸುತ್ತಾರೆ.. ಬಳೆ ಹರಕೆ ಸಲ್ಲಿಸುವಂತೆ ದೇವಿಯ ಸೂಚನೆಯಾದಾಗ ಅವರು ಅಲ್ಲಿ ನಿಷ್ಠೆಯಿಂದ ದೇವಿಯ ಆರಾಧನೆ ಕೈಗೊಳ್ಳುತ್ತಾರೆ.. ದೇವಿ ಇದ್ದ ಸ್ಥಳದಲ್ಲಿ ಹುತ್ತದ ಗಾತ್ರವೂ ಸಹ ದಿನೇ ದಿನೇ ವೃದ್ಧಿಯಾಗುತ್ತದೆ..
ಅಲ್ಲಿಗೆ ಯಾರೇ ಪೂಜೆಗೆ ಬರಲಿ ಹುತ್ತದ ಪ್ರಸಾದವನ್ನೇ ಜನರಿಗೆ ನೀಡುವ ಪರಂಪರೆ ರೂಢಿಗೆ ಬರುತ್ತದೆ.. ಈ ಮೂಲಕ ದೇವಿಯ ಪ್ರಭಾವ ಹಾಗು ಶಕ್ತಿಯು ಈ ಸ್ಥಳದಲ್ಲಿ ವಿಸ್ತಾರವಾಗುತ್ತಾ ಹೋಗುತ್ತದೆ.. ಹುತ್ತದ ಪ್ರಸಾದವೇ ಇಲ್ಲಿಗೆ ಬರುವವರ ಖಾಯಿಲೆ ಕಸಾಲೆ, ಸಮಸ್ಯೆ ಮುಂತಾದ ಎಲ್ಲ ಬಗೆಯ ತೊಂದರೆಗಳಿಗು ಸಹ ರಾಮಬಾಣದ ಹಾಗೆ ಔಷಧದ ಹಾಗೆ ಬಳಕೆಯಾಗುತ್ತಾ ಹೋಗುತ್ತದೆ.
ಈ ಸ್ಥಳದ ಇನ್ನೊಂದು ವಿಶೇಷತೆಯೇನೆಂದರೆ ಇಲ್ಲಿ 7 ಅಡಿಯ 77 ಕ್ವಿಂಟಾಲ್ ತೂಗುವ ಒಂದು ಮುಕ್ತಿ ನಾಗರ ಎಂಬ ನಾಗರದ ಬಿಚ್ಚಿದ ಹೆಡೆಯಿದೆ.. ಇದು ಯಾರಿಗೆ ನಾಗ ದೋಷವಿದೆಯೋ ಅವರಿಗೆ, ಯಾರ ಮನೆಯಲ್ಲಿ ಹೆಚ್ಚು ನಾಗರ ಹಾವುಗಳ ಸಂಚಾರವಿದೆಯೋ ಯಾರಿಗೆ ಹೆಚ್ಚಾಗಿ ಮನೆಯ ಮುಂದೆ ಹಾಗು ಕನಸಿನಲ್ಲಿ ಹಾವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೋ ಅವರು ಈ ಸನ್ನಿಧಾನಕ್ಕೆ ಬಂದು ಈ ಮುಕ್ತಿ ನಾಗರವನ್ನು 108 ಸಲ ಸುತ್ತಿ ಹಾಗು ಸ್ತುತಿಸಿ ಹೋದರೆ ಅವರಿಗೆ ಸಮಸ್ಯೆ ಪರಿಹಾರವಾದ ಅನೇಕ ನಿದರ್ಶನಗಳಿವೆ !
ಅನ್ನದಾನ ಹಾಗು ದಾಸೋಹಕ್ಕೂ ಸಹ ಹೆಸರಾದ ಈ ಕ್ಷೇತ್ರದಲ್ಲಿ ಶ್ರೀ ಸುಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿಯ ದೇಗುಲದಲ್ಲಿ ಹೇಗೆ ಯಾವ ರೀತಿ ಮೂರು ಹೊತ್ತೂ ಅನ್ನ ಸಂತರ್ಪಣೆ ಇರುತ್ತದೆಯೊ ಅದೇ ರೀತಿ ಕಳೆದ 25-30 ವರ್ಷಗಳಿಂದಲು ಸಹ ಇಲ್ಲು ಸಹ ಬರುವ ಸಕಲರಿಗು ಅನ್ನದಾನ ಇದ್ದೇ ಇರುತ್ತದೆ.. ನಿತ್ಯವೂ ಸಹ ಯಾವ್ದೆ ಅಡ್ಡಿ ಆತಂಕ ಹಾಗು ತಡೆಯಿಲ್ಲದ ಅನ್ನ ದಾನ ಸೇವೆ ಬರುವ ಸಕಲ ಭಕ್ತಾದಿಗಳಿಗೆ ಇದ್ದೇ ಇರುತ್ತದೆ.. ಒಂದು ದಿನವೂ ಸಹ ಅನ್ನದಾನ ಇಲ್ಲಿ ತಪ್ಪುವುದಿಲ್ಲ.. ಬಂದಂಥ ಜನ ದೇವಿ ಹಾಗು ನಾಗರ ದರ್ಶನದ ಜತೆ ಪುಷ್ಕಳವಾದ ಅನ್ನ ದಾಸೋಹವನ್ನೂ ಸಹ ತೃಪ್ತಿಯಿಂದ ಸೇವಿಸಿ ಹೋಗಬಹುದಾಗಿದೆ.
(ಮಾಹಿತಿ ಕೃಪೆ: ಶ್ರೀಯುತ ದರ್ಶನ್. ಬಳೆ ಪದ್ಮಾವತಿ ಅಮ್ಮನವರ ದೇವಾಲಯ)
#swaroop9186 #holenarasipura #travelvlog #swaroophassan #swaroopholenarasipura #holenarasipura #hnpura #karnatakatemples #karnatakatourism #karnatakatemple #hindutemple #hindutemples #olanadu #annapoornesheari #hornaduannapoorneshwari #hosanadu #horanadu #channarayapatna #crpatna @Parichaya ಪರಿಚಯ @ದೇಗುಲ ದರ್ಶನ @ದಿವ್ಯ ದೇಗುಲ ದರ್ಶನ @Team Modicare @Sathish Eregowda @satwik @MrMrsKamath @panindia360kannada @shree vadanbailu padmavathi temple @Divyashaktitv
@SmithasMagicHands @travelling tekker
Location :
Shri Kshetra Vadanbail Padmavati Digambar Jain Temple
https://maps.app.goo.gl/3EsS5b35yrQvJ...
IN THIS VIDEO background music :
===========================
🎵 Track Info:
Music: Devotional- Deepak Meenu
Music Link: https://royaltyfreebgmusic.blogspot.c...
================================================================================
➤ About Famous Audio Library
Famous Audio Library is a channel to provide store, archives, publish copyright free music, royalty-free music, copyright-free background music for the content creators.
============================================================
IN THIS VIDEO THUMBAIL COURTESY :
M.P.Madhusudhan
MY CHANNEL LINK
/ swaroop9186
MY FACEBOOK LINK
/ swaroop.kumar.31521
MY INSTAGRAM LINK
/ swaroop9186
Доступные форматы для скачивания:
Скачать видео mp4
-
Информация по загрузке: