Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಸಾಯಲು ಹೊರಟಾಕೆಯ ಬಾಳ ಬೆಳಗಿಸಿತು ಸಾವಯವ ಕೃಷಿ! - ಎ.ಆರ್. ಮಣಿಕಾಂತ್।SEP - 3rd Sem BSC।Organic farming।

Автор: ಕನ್ನಡ ಕ್ಲಾಸ್ BTV

Загружено: 2025-11-21

Просмотров: 281

Описание:

ಬಿ.ಎಸ್ಸಿ ದ್ವಿತೀಯ ವರ್ಷ - ದಾವಣಗೆರೆ ವಿಶ್ವವಿದ್ಯಾಲಯ

ಸಾಯಲು ಹೊರಟಾಕೆಯ ಬಾಳ ಬೆಳಗಿಸಿತು ಸಾವಯವ ಕೃಷಿ! - ಎ.ಆರ್. ಮಣಿಕಾಂತ್

ಪಠ್ಯದ ವಿಶ್ಲೇಷಣೆ:-
ಈ ಲೇಖನ ಭಾಗವನ್ನು ಎ.ಆರ್. ಮಣಿಕಾಂತ್ ಅವರು ಬರೆದಿರುವ 'ಮನಸು ಮಾತಾಡಿತು' ಎಂಬ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ. ಕಥೆ ಆರಂಭವಾಗುವುದು ಆಂಧ್ರಪ್ರದೇಶದ ನಲ್ಗೊಂಡ ಜಿಲ್ಲೆಯ ಒಂದು ಹಳ್ಳಿಯಲ್ಲಿ ಅಲ್ಲಿ, ಮಾಧವರೆಡ್ಡಿ ಎಂಬಾತನಿದ್ದ. ಅವನಿಗೆ 18 ಎಕರೆ ಜಮೀನಿತ್ತು. ಕೃಷಿ, ಅವನ ಆಸಕ್ತಿಯ ಕ್ಷೇತ್ರವಾಗಿರಲಿಲ್ಲ. ನೌಕರಿಗೆ ಸೇರಬೇಕು. ಕೆಲಸದ ನೆಪದಲ್ಲಿ ಊರೂರು ತಿರುಗುತ್ತಾ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂಬುದು ಮಾಧವರೆಡ್ಡಿಯ ವಾದವಾಗಿತ್ತು. ಆಗಾಗಿ ಮುಂದೆ ಚಿಟ್ ಫಂಡ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡ.

ಮಾಧವರೆಡ್ಡಿ ಕೆಲಸಕ್ಕೆ ಸೇರಿದ ಕೆಲ ದಿನಗಳಲ್ಲಿ ಶಶಿಕಲಾರೊಂದಿಗೆ ಮದುವೆಯಾಯಿತು. ಆಕೆಗೆ ಆಗಷ್ಟೇ 18 ವರ್ಷವಾಗಿತ್ತು. ಒಮ್ಮೆ ಮನೆಯಲ್ಲಿ ಹೆಂಡತಿಯನ್ನು ಕೂರಿಸಿಕೊಂಡು ಮನೆಯಲ್ಲಿ ಚಿಕ್ಕಪುಟ್ಟ ಕೆಲಸ ಮಾಡಿಕೊಂಡು ಆರಾಮಾಗಿ ಇರು. ಜಮೀನಿನ ಉಸಾಬರಿ ಬೇಡವೆಂದು ಹೇಳಿದ. ಮುಂದೆ ದಂಪತಿಗೆ ಗಂಡು ಮಗುವಾಯಿತು ಮಗುವಿಗೆ ಸಾಯಿರಾಂ ರೆಡ್ಡಿ ಎಂದು ಹೆಸರಿಡಲಾಯಿತು.ಮದುವೆಯ ನಂತರ ಶಶಿಕಲಾ ಬದುಕಲ್ಲಿ ಗಂಡ, ಮಗುವೇ ಅವಳ ಪ್ರಪಂಚವಾಯಿತು. ಓದಿನ ಬಗೆಗೆ ಆಸಕ್ತಿಯಿರುವುದರಿಂದ ಗಂಡನನ್ನು ಒಪ್ಪಿಸಿ ತೆಲುಗು ಸಾಹಿತ್ಯದಲ್ಲಿ ಪದವಿ ಮುಗಿಸಿದಳು. ಆಕೆಗೆ ಆಗ 30ವರ್ಷವಾಗಿದ್ದರೆ ಮಗುವಿಗೆ 10ವರ್ಷವಾಗಿತ್ತು.

ಸಂಸಾರ ನಿರ್ವಹಣೆಗೆ ಗಂಡನ ಸಂಪಾದನೆಯಿದೆ. ಜಮೀನಿನ ಉಸ್ತುವಾರಿ ಬಂಧುಗಳ ಕೈಯಲ್ಲಿದೆ. ಗೊಂದಲವೇ ಇಲ್ಲದ ಸಂತೃಪ್ತ ಬದುಕು ನನ್ನದು ಎಂಬ ಸಡಗರದಲ್ಲಿ ಶಶಿಕಲಾ ಇದ್ದಾಗಲೇ, ಆಕೆ ಕನಸಿನಲ್ಲೂ ಊಹಿಸಿರದಂಥ ದುರಂತವೊಂದು ನಡೆದುಹೋಯಿತು. ಅದೊಂದು ಮುಂಜಾನೆ ಮಾದವರೆಡ್ಡಿ ಹೃದಯಾಘಾತದಿಂದ ತೀರಿಕೊಂಡ. ಜತೆಗೆ ಕುಟುಂಬದ ಮೇಲೆ 4.50ಲಕ್ಷ ರೂಪಾಯಿ ಸಾಲ ಮಾಡಿ ಹೋಗಿದ್ದ. ರೆಡ್ಡಿಯ ಮದುವೆಯಾದ ಮೂರು ವರ್ಷದಲ್ಲಿಯೇ ಆತನ ಹೆತ್ತವರು ತೀರಿಕೊಂಡಿದ್ದರು. ಈಗ, ಇಡೀ ಮನೆಗೆ, ಶಶಿಕಲಾ ಮತ್ತು ಆಕೆಯ ಮಗ ಇಬ್ಬರೇ ಅದರು. ಅದುವರೆಗೂ ಮನೆಯಿಂದ ಹೊರಗೇ ಬಾರದಿದ್ದ ಶಶಿಕಲಾ, ಈಗ ಹೊಟ್ಟೆಪಾಡಿನ ಕಾರಣಕ್ಕಾದರೂ ಹೊರಗೆ ಬರಲೇಬೇಕಿತ್ತು. ಸಂಬಂಧಿಕರ ಬಳಿಯಿದ್ದ ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಲು ಸಿದ್ದಳಾದಳು. ಸಂಬಂಧಿಕರ ಮಾನಸಿಕ ಕಿರಿಕಿರಿಯಿದ್ದರು ಬೇಸಾಯಕ್ಕೆ ಮುಂದಾದಳು.

ಶಶಿಕಲಾ ಕೂಲಿ ಕಾರ್ಮಿಕರ ಸಹಾಯದಿಂದ ಕೃಷಿಯನ್ನು ಆಂಭಿಸಿದಳು. ಕೆಲವೇ ತಿಂಗಳಲ್ಲೇ ಹಣ್ಣು ತರಕಾರಿಯ ಬೆಳೆಯಿಂದ ಕೃಷಿ ಭೂಮಿ ನಳನಳಿಸಿತು. ಶಶಿಕಲಾಳ ಈ ಏಳಿಗೆಯನ್ನು ಸಹಿಸದ ಬಂಧುಗಳು, ರಾತ್ರೋ ರಾತ್ರಿ ತೋಟಕ್ಕೆ ನುಗ್ಗಿ ಬೆಳೆಯನ್ನೆಲ್ಲ ಕತ್ತರಿಸಿ ಹಾಕಿದರು. ಜಮೀನಿಗೆ ನೀರಾವರಿಯ ಅನುಕೂಲವೇ ಸಿಗದಂತೆ ತಂತ್ರ ರೂಪಿಸಿದರು. ಕೂಲಿಗೆ ಬರುತ್ತಿದ್ದ ಕಾರ್ಮಿಕರಿಗೆ ಬೆದರಿಕೆ ಹಾಕಿ, ಅವರನ್ನೆಲ್ಲ ಹಿಂದಕ್ಕೆ ಕಳಿಸಿಬಿಟ್ಟರು. ಹಳೆಯ ಸಾಲದ ಮರುಪಾವತಿಗೆ ಒತ್ತಾಯಿಸುವಂತೆ ಶಶಿಕಲಾಳ ಗಂಡನಿಗೆ ಸಾಲ ಕೊಟ್ಟಿದ್ದವರಿಗೆಲ್ಲ ಹೇಳಿಕೊಟ್ಟರು.

ಶಶಿಕಲಾ ಸಂಬಂಧಿಕರ ಕಿರಿಕಿರಿಯಿಂದ ಬಹಳ ನೊಂದುಕೊಂಡು ಸಾಯಲು ಮುಂದಾಗಿ ತನ್ನ ಮನೆಗೆ ಪತ್ರ ಬರೆದಳು. ಆಗ ಶಶಿಕಲಾಳ ಅಣ್ಣ ರಾಮಕೃಷ್ಣ ಪರಮಹಂಸರ ಪುಸ್ತಕನೀಡಿದ ಓದಿದ ಶಶಿಕಲಾ ಮಾನಸಿಕವಾಗಿ ಗಟ್ಟಿಯಾದಳು. 2005ರ ಸಂದರ್ಭ ಜಮೀನಿನಲ್ಲಿ ಜನರೇಟರ್ ಸ್ಟಾರ್ಟ ಮಾಡಲು ಆಳದ ಬಾವಿಯಿಂದ ನೀರು ತರಬೇಕಿತ್ತು. ಈಜು ಬರದಿದ್ದರು ಕೃಷಿಯನ್ನು ಆರಂಭಿಸಿ ಜತೆಗೆ ಕೆಲವರ ಸಲಹೆಯಂತೆ ಹತ್ತು ಹಸುಗಳನ್ನು ಖರೀದಿಸಿ ಡೈರಿಗೆ ಹಾಲು ಮಾರಲು ಮುಂದಾದಳು.

ಶಶಿಕಲಾ ಹಸುವಿನ ಸಗಣಿ ಹಾಗೂ ಕೊಟ್ಟಿಗೆಯ ಕಸದಿಂದ ಎರೆಗೊಬ್ಬರ ತಯಾರಿಸಿ ಲಾಭ ಪಡೆಯಬಹುದೆಂದು ತಿಳಿದು ಹೈದರಾಬಾದ್‌ನಲ್ಲಿ ತರಬೇತಿ ಪಡೆದ ನಂತರ, ಅವಳ ಆದಾಯದ ಮೊತ್ತ ದುಪ್ಪಟ್ಟಾಯಿತು. ಐದು ಹಸುಗಳಿಂದ ಸಂಗ್ರಹವಾದ ಸಗಣಿ ಹಾಗೂ ಕೊಟ್ಟಿಗೆಯ ಕಸದಿಂದ, ಕೆಲವೇ ತಿಂಗಳುಗಳಲ್ಲಿ 2000 ಟನ್ ಎರೆಗೊಬ್ಬರ ತಯಾರಿಸಲು ಸಾಧ್ಯವಾಯಿತು. ಎರೆಗೊಬ್ಬರ ಮಾರಾಟದಿಂದ, ಕನಸಿನಲ್ಲೂ ನಿರೀಕ್ಷಿಸದಷ್ಟು ಲಾಭ ಅವಳಿಗೆ ಬಂತು.

ಸಾವಯವ ಗೊಬ್ಬರ ತಯಾರಿಕೆಯಿಂದಲೂ ಭಾರಿ ಲಾಭವಿದೆ ಎಂದು ತಕ್ಷಣವೇ ಬ್ಯಾಂಕ್ ಸಾಲಕ್ಕೆ ಅರ್ಜಿ ಹಾಕಿದಳು. ಗಂಡನ ಹೆಸರಿನಲ್ಲಿದ್ದ ಜಮೀನನ್ನು ಆಧಾರವಾಗಿಟ್ಟು, 10 ಲಕ್ಷ ರೂ. ಸಾಲ ಪಡೆದು. ಅಷ್ಟೂ ಹಣ ಕೈ ಸೇರಿದ ತಕ್ಷಣ, ಗಂಡ ಮಾಡಿದ್ದ 4.50 ಲಕ್ಷ ರೂ. ಮತ್ತು ಹಸುಗಳನ್ನು ಖರೀದಿಸಲು ಮಾಡಿದ್ದ ಸಾಲ ತೀರಿಸಿದಳು. 2 ಲಕ್ಷ ರೂ. ಗಳಲ್ಲಿ ಎರಡೆಕರೆ ಜಮೀನು ಹಾಗೂ ಉಳಿದ ಹಣದಲ್ಲಿ ಮತ್ತಷ್ಟು ಹಸುಗಳನ್ನು ಖರೀದಿಸಿದಳು. ಮುದಿ, ರೋಗಗ್ರಸ್ತ ಮತ್ತು ಹಾಲು ಕೊಡದ ಹಸುಗಳಿಂದ ಮೋಸ ಹೋದಳು.

ಈ ವೇಳೆಗೆ, ಸಾವಯವ ಕೃಷಿ ಪದ್ಧತಿಯಲ್ಲೂ ಸಾಕಷ್ಟು ಆವಿಷ್ಕಾರಗಳಾಗಿದ್ದವು. ಸಗಣಿ ಹಾಗೂ ಕಸದಿಂದ ಎರೆಹುಳು ಗೊಬ್ಬರವನ್ನು ತಯಾರಿಸುವುದಷ್ಟೇ ಅಲ್ಲ, ಒಂದು ಜೈವಿಕ ಕ್ರಿಯಾ ಘಟಕ ಆರಂಭಿಸಿ, ಅದರಿಂದ ಜೈವಿಕ ಅನಿಲ ತಯಾರಿಸಿ ವಿದ್ಯುತ್ ಉತ್ಪಾದಿಸುವ ಕೃಷಿ ಕ್ರಾಂತಿಯನ್ನು ಅರಿತು ಯಶಸ್ಸಿನ ಹಾದಿಯೆಡೆಗೆ ಸಾಗಿದಳು. ಇದೆ ವೇಳೆಗೆ ಮಗ ಸಾಯಿರಾಂ ರೆಡ್ಡಿ ಓದಿ ಸಾಪ್ಟ್ ವೇರ್ ಎಂಜಿನಿಯರ್ ಆದ.

ಕೃಷಿಯಾಗಲಿ , ಹಾಲು ಮಾರಾಟದ ಕೆಲಸವಾಗಲಿ, ಎರೆಗೊಬ್ಬರ ತಯಾರಿಸುವುದಾಗಲಿ ಸುಲಭವಲ್ಲ, ಅಲ್ಲಿ, ಮುಂಜಾನೆ 3 ಗಂಟೆಯಿಂದಲೇ ಕೆಲಸ ಶುರುವಾಗುತ್ತದೆ. ಮೈ-ಕೈಗೆ ಹಸುವಿನ ಸೆಗಣಿ, ಗಂಜಲ, ಗೊಬ್ಬರದ ವಾಸನೆ ಮೆತ್ತಿಕೊಳ್ಳುತ್ತದೆ. ಆಗಾಗಿ ಬಂಧುಗಳ ಮಾತಿಗೆ ತಲೆಕೆಡಿಸಿಕೊಳ್ಳದೆ. ಸಾವಯವ ಕೃಷಿಯಲ್ಲಿ ಪೂರ್ತಿಯಾಗಿ ತೊಡಗಿಕೊಂಡಳು. ಮುಂದೆ ತನ್ನ ಯಶೋಗಾಥೆಯನ್ನು ಆಂಧ್ರದ ಸರ್ಕಾರ ಹಾಗೂ ಸ್ಯಾವೀ ಪತ್ರಿಕೆ ಗುರುತಿಸಿದವು. ಐದಾರು ಕಡೆ ಸನ್ಮಾನಿಸಿದವು. 'ಅಬಲೆಯರಿಗೆಲ್ಲಾ ಶಶಿಕಲಾರ ಬದುಕು ಸ್ಫೂರ್ತಿಯಾಗಲಿ' ಎಂದು ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾದವು. ನನ್ನ ಯಶಸ್ಸನ್ನೇ ಮಾದರಿಯಾಗಿಟ್ಟುಕೊಂಡು 50ಕ್ಕೂ ಹೆಚ್ಚು ಕೃಷಿಕರು ಸಾವಯವ ಕೃಷಿ ಪದ್ಧತಿಯಲ್ಲಿ ಬೇಸಾಯ ಆರಂಭಿಸಿದ್ದಾರೆ. ಹೀಗೆ ಎದೆ ಗುಂದದೆ ದಿಟ್ಟಹೆಜ್ಜೆಗಳನ್ನಿಟ್ಟು, ಮುಂದಕ್ಕೆ ಸಾಗಿದ್ದಲ್ಲಿ ಯಶಸ್ಸು ಖಂಡಿತ. ಆಗಾಗಿ ಶಶಿಕಲಾಳ ಹೋರಾಟದ ಬದುಕು ಅದೆಷ್ಟೋ ಮನಸ್ಸುಗಳಿಗೆ ಸ್ಫೂರ್ತಿದಾಯಕವಾಗಿ ನಿಲ್ಲುತ್ತದೆ.

ಸಾಯಲು ಹೊರಟಾಕೆಯ ಬಾಳ ಬೆಳಗಿಸಿತು ಸಾವಯವ ಕೃಷಿ! - ಎ.ಆರ್. ಮಣಿಕಾಂತ್।SEP - 3rd Sem BSC।Organic farming।

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

🔴Канцлер Германии сравнил президента РФ с Гитлером. Берлинский саммит по Украине. DW Новости

🔴Канцлер Германии сравнил президента РФ с Гитлером. Берлинский саммит по Украине. DW Новости

Как получить плодовые веточки из волчковых (жировых) побегов

Как получить плодовые веточки из волчковых (жировых) побегов

МЕГАМАШИНЫ Китая Нарушили Все Законы Физики - Это Шокировало Весь Мир

МЕГАМАШИНЫ Китая Нарушили Все Законы Физики - Это Шокировало Весь Мир

ಕೃಷ್ಣ ಮತ್ತು ಕರ್ಣನ ಭೇಟಿಯ ಪ್ರಸಂಗ - ಪಂಪ ॥ಪಂಪಭಾರತ॥ Krishna matthu Karna Betiya Prasanga - Pampa

ಕೃಷ್ಣ ಮತ್ತು ಕರ್ಣನ ಭೇಟಿಯ ಪ್ರಸಂಗ - ಪಂಪ ॥ಪಂಪಭಾರತ॥ Krishna matthu Karna Betiya Prasanga - Pampa

❗8 МИНУТ НАЗАД! В РФ ВСЁ РУХНУЛО! АДСКОЕ МЕСИВО! БОЙНЯ С НАБИУЛЛИНОЙ! ВОТ ЭТО ДА! | Наки

❗8 МИНУТ НАЗАД! В РФ ВСЁ РУХНУЛО! АДСКОЕ МЕСИВО! БОЙНЯ С НАБИУЛЛИНОЙ! ВОТ ЭТО ДА! | Наки

Почему римский БЕТОН прослужит 2000 лет, а наш — умрёт через 50 лет

Почему римский БЕТОН прослужит 2000 лет, а наш — умрёт через 50 лет

Защита от бродячих собак | Наука Побеждать

Защита от бродячих собак | Наука Побеждать

ಚಂಡಿಯ ಕಥೆ  - ಲಕ್ಷ್ಮೀಶ ॥ಜೈಮಿನಿಭಾರತ॥Chandi Kathe - Lakshmisha॥Jaimini Bharata

ಚಂಡಿಯ ಕಥೆ - ಲಕ್ಷ್ಮೀಶ ॥ಜೈಮಿನಿಭಾರತ॥Chandi Kathe - Lakshmisha॥Jaimini Bharata

ರೊಕ್ಕ ಎರಡಕ್ಕೂ ದುಃಖ ಕಾಣಕ್ಕ- ಪುರಂದರದಾಸ।Rokka Eradakku Dukha Kaanakka - Purandaradasa

ರೊಕ್ಕ ಎರಡಕ್ಕೂ ದುಃಖ ಕಾಣಕ್ಕ- ಪುರಂದರದಾಸ।Rokka Eradakku Dukha Kaanakka - Purandaradasa

Я беру джойстик, лечу в поле и зарабатываю 3,6 млн чистой прибыли за сезон

Я беру джойстик, лечу в поле и зарабатываю 3,6 млн чистой прибыли за сезон

Армия резко пошла в атаку / Ракеты развёрнуты на Европу

Армия резко пошла в атаку / Ракеты развёрнуты на Европу

ПОЛИВАНОВ - лингвист СССР знал 30 ЯЗЫКОВ: создал ПИСЬМЕННОСТЬ для народов, РАССТРЕЛЯН как ШПИОН

ПОЛИВАНОВ - лингвист СССР знал 30 ЯЗЫКОВ: создал ПИСЬМЕННОСТЬ для народов, РАССТРЕЛЯН как ШПИОН

Почему средневековое железо никогда не ржавело, а ваше умирает через 2 года

Почему средневековое железо никогда не ржавело, а ваше умирает через 2 года

Устройство Николы Теслы включили спустя 80 лет, только взгляните на это…

Устройство Николы Теслы включили спустя 80 лет, только взгляните на это…

The Potato Production Process: From the Potato Farm to the Perfect Finished Product

The Potato Production Process: From the Potato Farm to the Perfect Finished Product

Как сделать сверхмощный сварочный аппарат своими руками из свечи зажигания!

Как сделать сверхмощный сварочный аппарат своими руками из свечи зажигания!

⚡️ Военные США ликвидированы || Президент бьёт тревогу

⚡️ Военные США ликвидированы || Президент бьёт тревогу

Inside a Crispy Grasshopper Farm: How They Make the Perfect Crunch (Full Process)

Inside a Crispy Grasshopper Farm: How They Make the Perfect Crunch (Full Process)

Почему мусульмане бегут в Европу, а не в богатые арабские страны?

Почему мусульмане бегут в Европу, а не в богатые арабские страны?

Сельскохозяйственные инструменты, изобретения и хитрости, которые вам не хотят показывать

Сельскохозяйственные инструменты, изобретения и хитрости, которые вам не хотят показывать

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]