ಕಲ್ಲಹಳ್ಳಿ
Автор: Umashankar kr
Загружено: 2026-01-11
Просмотров: 98
ಕನಕೋತ್ಸವ - 2026 ರ ಪ್ರಯುಕ್ತ "ಮನೆಗೆ 5 ಗ್ಯಾರಂಟಿ- ಮನೆಗೊಂದು ರಂಗೋಲಿ ಸ್ಪರ್ಧೆ" ಕಾರ್ಯಕ್ರಮವು ದಿನಾಂಕ: 11-1-2026 ರಂದು ಕಸಬಾ ಹೋಬಳಿಯ ಕಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಆಡನಕುಪ್ಪೆ ,ಆಡನ ಕುಪ್ಪೆ ಬಂಗ್ಲೆ, ತಾಮಸಂದ್ರ, ಕಲ್ಲಹಳ್ಳಿ ಗ್ರಾಮಗಳಲ್ಲಿ ರಂಗೋಲಿ ಸ್ಪರ್ಧೆ ನಡೆಯಿತು. ನೂರಾರು ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬಂಗ್ಲೆ ಗ್ರಾಮದ ಶೋಭಾ ಪ್ರಥಮ, ಚಂದನ ದ್ವಿತೀಯ ಭಾಗ್ಯಮ್ಮ ತೃತೀಯ ಸ್ಥಾನ ಪಡೆದರು/ ಆಡನ ಕುಪ್ಪೆ ಗ್ರಾಮದ ರಮ್ಯಾ ಪ್ರಥಮ ,ಪಲ್ಲವಿ ದ್ವಿತೀಯ, ಪ್ರಿಯಾಂಕ ತೃತೀಯ ಸ್ಥಾನ ಪಡೆದರು /ಕಲ್ಲಹಳ್ಳಿ ಗ್ರಾಮದ ಪ್ರತಿಭಾ ಮತ್ತು ಚೈತ್ರ ಪ್ರಥಮ /ಶಶಿಕಲಾ ಮತ್ತು ಶ್ವೇತಾ ದ್ವಿತೀಯ/ ಲಕ್ಷ್ಮಿ ಮತ್ತು ಐಶ್ವರ್ಯ ತೃತೀಯ ಸ್ಥಾನ ಪಡೆದರು. ಥಾಮಸಂದ್ರ ಗ್ರಾಮದ ರಂಜಿತ ಪ್ರಥಮ, ವರ್ಷಿಣಿ ದ್ವಿತೀಯ ,ಸಂಜು ತೃತೀಯ ಸ್ಥಾನ ಪಡೆದರು/ ಕಾಮಿಡಿ ಕಿಲಾಡಿ ಖ್ಯಾತಿಯ ತುಕಾಲಿ ಸಂತೋಷ್ ಮತ್ತು ಮಾನಸ ಆಗಮಿಸಿ ರಂಗೋಲಿ ಸ್ಪರ್ಧೆಗೆ ಮೆರಗು ತುಂಬಿದರು. ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಪುರುಷೋತ್ತಮ್, ರಾಜಶೇಖರ್, ಪಿಎಪಿಸಿ ಎಮ್ ಎಸ್ ಅಧ್ಯಕ್ಷರಾದ ವೆಂಕಟೇಶ್, ಕಲ್ಲಹಳ್ಳಿ ವೆಂಕಟರಮಣ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್, ಕಲ್ಲಳ್ಳಿ ಉಮೇಶ್, ಕುಮಾರ್ ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುತ್ತು, ಗ್ಯಾರಂಟಿ ಸಮಿತಿ ಅಧ್ಯಕ್ಷ ದಿಲೀಪ್, ಮುಖಂಡರುಗಳಾದ ಡಿ ಎಂ, ವಿಶ್ವನಾಥ್, ಬಿ ಎಸ್. ಗೌಡ, ರಮೇಶ್ ,ಮಂಜು ಮತ್ತು ಬೈರೇಗೌಡ ಸೇರಿದಂತೆ ಇನ್ನು ಹಲವಾರು ಮುಖಂಡರುಗಳು ವಿಜೇತರಾದವರಿಗೆ ಬಹುಮಾನ ವಿತರಿಸಿದರು.
Доступные форматы для скачивания:
Скачать видео mp4
-
Информация по загрузке: