Putta Putta Kaigalinda Kannada Song ಪುಟ್ಟ ಪುಟ್ಟ ಕೈಗಳಿಂದ by Rwindshet
Автор: Aravinda Shet U
Загружено: 2022-12-25
Просмотров: 4157
Watch and Subscribe our New Original Kannada Song Putta Putta Kaigalinda by Aravinda shet u
song is based on girl child. the goddess from haven. kids song. hope you like this song. thank you
Vocal : Aravinda Shet U
lyrics : Aravinda Shet U
Music: Aravinda Shet U
Artwork: Ashok Shet
YouTube Music: • Putta Putta Kaigalinda
Itunes: / putta-putta-kaigalinda-single
Amazon Music : https://music.amazon.in/albums/B0BRBR...
JioSaavn: https://www.jiosaavn.com/song/putta-p...
lyrics:
| ಪುಟ್ಟ ಪುಟ್ಟ ಕೈಗಳಿಂದ ನನ್ನ ಬೆರಳ ಹಿಡಿಯುತಾಳೆ
ಪುಟ್ಟ ಹೆಜ್ಜೆ ಹಾಕುತಾಳೆ
ನನ್ನ ಕಂದವ್ವ ಇವಳ ಚಂದ ನೋಡವ್ವ |
|ಮೂಡುತಾನೆ ಸೂರ್ಯ
ಇವಳ್ ಜೊತೆ ಆಟವಾಡಲೆಂದೇ
ಉದೈಸುತಾನೆ ಚಂದ್ರ
ಇವಳಿಗೆ ಊಟ ಮಾಡಿಸಲೆಂದೆ
ಮಿನುಗುತಾವೇ ನಕ್ಷತ್ರಾ
ಇವಳಿಗೆ ಲಾಲಿ ಹಾಡುತಾ |
| ಪುಟ್ಟ ಪುಟ್ಟ ಕೈಗಳಿಂದ ನನ್ನ ಬೆರಳ ಹಿಡಿಯುತಾಳೆ
ಪುಟ್ಟ ಹೆಜ್ಜೆ ಹಾಕುತಾಳೆ
ನನ್ನ ಕಂದವ್ವ ಇವಳ ಚಂದ ನೋಡವ್ವ |
-------------------------------
| ಇವಳ ಮಧುರ ಸ್ವರಗಳ ಸಂಗಮದ ಈ ಲೀಲೆ
ಕೇಳಿ ನಾಚಿ ಹೋಗಿದೆ ಆ ಅಹಂಕಾರಿ ಕೋಗಿಲೆ
ಅರಳಿದ ಹೂವುಗಳೆಲ್ಲ ಇವಳ ಕಾಂತಿಗೆ ಬೆರಗು
ಎಲ್ಲಿಂದ ತಂದೆ ಯಮ್ಮ ಇಂತಾ ಸೊಬಗು
ವರ್ಣರಂಜಿತ ನವಿಲೇ ಚಿಂತಿತ ಇವಳ ಕುಣಿತದ ಶೈಲಿಗೆ |
| ಪುಟ್ಟ ಪುಟ್ಟ ಕೈಗಳಿಂದ ನನ್ನ ಬೆರಳ ಹಿಡಿಯುತಾಳೆ
ಪುಟ್ಟ ಹೆಜ್ಜೆ ಹಾಕುತಾಳೆ
ನನ್ನ ಕಂದವ್ವ ಇವಳ ಚಂದ ನೋಡವ್ವ |
---------------------------------
| ಬಳಲಿ ಒಣಗಿದ ಕಾಡಿಗೆ ವರ್ಷಧಾರೆಯ ಬಳುವಳಿ
ಕಾಂತಿವಂಚಿತ ಮೊಗದಲಿ ಮಂದಹಾಸವು ಚಿಗುರಿದೆ
ದಾರಿದೀಪವಾಗಿ ಬಂದೆ ಅಂಧಕಾರದ ಬದುಕಿಗೆ
ಶುದ್ಧ ಪ್ರೀತಿ ಸ್ನೇಹದಾ ಅನುಭವ ಮಾಡಿಸಿದೆ
ಸ್ವರ್ಗವನ್ನೇ ಧರೆಗೆ ತಂದು ಇಟ್ಟೆ ನಮ್ಮ ಮಡಿಲಿಗೆ |
| ಪುಟ್ಟ ಪುಟ್ಟ ಕೈಗಳಿಂದ ನನ್ನ ಬೆರಳ ಹಿಡಿಯುತಾಳೆ
ಪುಟ್ಟ ಹೆಜ್ಜೆ ಹಾಕುತಾಳೆ
ನನ್ನ ಕಂದವ್ವ ಇವಳ ಚಂದ ನೋಡವ್ವ |
| ಮೂಡುತಾನೆ ಸೂರ್ಯ
ಇವಳ್ ಜೊತೆ ಆಟವಾಡಲೆಂದೇ
ಉದೈಸುತಾನೆ ಚಂದ್ರ
ಇವಳಿಗೆ ಊಟ ಮಾಡಿಸಲೆಂದೆ
ಮಿನುಗುತಾವೇ ನಕ್ಷತ್ರಾ
ಇವಳಿಗೆ ಲಾಲಿ ಹಾಡುತಾ |
| ಪುಟ್ಟ ಪುಟ್ಟಾ ಹೆಜ್ಜೆ ಇಟ್ಟು , ಬರುತಾಳೆ ನನ್ನವ್ವ
ಇವಳ ಆಟ ತುಂಟಾಟದಾ ಚೆಲುವ ಬಾ ನೋಡವ್ವ
ನಗುವಿನಾ ಹೂರಾಶಿಯನ್ನೇ ಸುರೀತಾಳೆ ನನ್ನವ್ವ
ಇವಳೇ ನನ್ ಜೀವ , ಇವಳೇ ನನ್ನವ್ವಾ |
Доступные форматы для скачивания:
Скачать видео mp4
-
Информация по загрузке: