ಮಲ್ಲೇಶ್ವರಂ ಕಡಲೆಕಾಯಿ ಪರಿಷೆ 2024 | Malleshwara Kadalekayi Parishe 2024
Автор: Adrushtavantha ಅದೃಷ್ಟವಂತ
Загружено: 2024-11-20
Просмотров: 661
ಓಂ ಶ್ರೀ ಮಲ್ಲಿಕಾರ್ಜುನ ಸ್ವಾಮಿಯೇ ನಮಃ.
ಪ್ರತೀ ವರ್ಷ ಕಾರ್ತೀಕ ಮಾಸದ 3ನೇ ಸೋಮವಾರ ಕಡಲೆಕಾಯಿ ಪರಿಷೆ ನಡೆಯುತ್ತದೆ. ಕಾಡು ಮಲ್ಲೇಶ್ವರ ಗೆಳೆಯರ ಬಳಗವು ನವೆಂಬರ್ ೧೫ ರಿಂದ ೧೮ ರವರೆಗೆ ೮ನೆ ಆವೃತ್ತಿಯ ಕಡಲೇಕಾಯಿ ಪರಿಷೆಯನ್ನ ಆಯೋಜನೆ ಮಾಡಿತ್ತು. ಈ ವರ್ಷದ ವಿಶೇಷತೆ ಅಂದರೆ ಶೇಂಗಾ ಮೇಳವು ಪ್ಲಾಸ್ಟಿಕ್ ಮುಕ್ತ ಹಾಗು ರೈತ ಸ್ನೇಹಯಾಗಿ ನಡೆದಿರುತ್ತದೆ. ವಿದ್ಯಾರ್ಥಿ ಸ್ವಯಂ ಸೇವಕರು ತಯಾರಿಸಿದ ಸುಮಾರು ಎರಡರಿಂದ ಮೂರು ಕೆಜಿ ಕಡಲೆಕಾಯಿ ಸಾಗಿಸುವ ಕಾಗದ ಚೀಲಗಳನ್ನ ಬಳಸಿರುತ್ತಾರೆ.
ಕರ್ನಾಟಕದಾದ್ಯಂತ ಹಾಗು ತಮಿಳುನಾಡು ಆಂದ್ರಪ್ರದೇಶದ ರೈತರು ಮತ್ತು ಬೀದಿ ವ್ಯಾಪಾರಿಗಳು ಈ ಮೇಳದಲ್ಲಿ ಭಾಗವಹಿಸಿರುತ್ತಾರೆ. ೧೦೦ ಕ್ಕೂ ಹೆಚ್ಚು ಮಳಿಗೆಗಳನ್ನ ತೆರೆದಿದ್ದರು.
ದೇವಸ್ಥಾನದ ಇತಿಹಾಸ -
ಕೆಲವು ಶತಮಾನಗಳ ಹಿಂದ ಬಿಜಾಪುರ ರಾಜ್ಯಕ್ಕೆ ಸೇರಿದ ಈ ಬೆಂಗಳೂರು ಗ್ರಾಮವು ಮರಾಠ ಸಂಸ್ಥಾನ ಸ್ಥಾಪಕರಾದ ಶ್ರೀ ಶಿವಾಜಿ ಮಹಾರಾಜರ ತಂದೆ ಷಾಹಜಿ ಯವರಿಗೆ ಜಹಗೀರಾಗಿ (ಕೊಡುಗೆಯಾಗಿ) ಕೊಡಲ್ಪಟ್ಟಿತು. ಷಾಹಜಿ ಯವರ ಆನಂತರ ಕ್ರಿ.ಶ. 1664ನೇ ವರ್ಷದಲ್ಲಿ ಈ ಗ್ರಾಮವು ಶಿವಾಜಿಯವರ ಸಹೋದರರಾದ ಎಕೋಜಿ(ವೆಂಕೋಜಿ) ರಾಯರ ಪಾಲಿಗೆ ಬಂದಿತು. ಇವರು 1669ನೇ ವರ್ಷದಲ್ಲಿ ಚೌತಾಯವನ್ನು(ತೆರಿಗೆ) ವಿಧಿಸುವುದಕ್ಕೆ ಮಂತ್ರಿಗಳಾದ ಬಾಜೀರಾವ್ ಪೇಷ್ಪೆಯವರೊಂದಿಗೆ ಈ ಪ್ರಾಂತ್ಯಕ್ಕೆ ಬಂದರು. ಮಲ್ಲಾಪುರದ ಮಲ್ಲಿಕಾರ್ಜುನ ಸ್ವಾಮಿಯೆಂಬ ಹೆಸರಿನಿಂದ ಪ್ರಖ್ಯಾತವಾಗಿದ್ದ ಶ್ರೀ ಕಾಡುಮಲ್ಲೇಶ್ವರ ಸ್ವಾಮಿಯವರನ್ನು ಕಂಡು ದೇವರನ್ನು ಪೂಜಿಸಿ ತರುವಾಯ ಗ್ರಾಮಸ್ಥರ ಪ್ರಾರ್ಥನೆ ಮೇರೆಗೆ ಮಲ್ಲೇಶ್ವರದ ಬಳಿ ಇದ್ದ ಮೇದರ ನಿಂಗನಹಳ್ಳಿಯೆಂಬ ಗ್ರಾಮವನ್ನು ಈ ಸ್ವಾಮಿಗೆ ಮಾನ್ಯವಾಗಿ ಅರ್ಪಿಸಿ ಈ ಧರ್ಮವು ಆಚಂದ್ರಾರ್ಕವು ನಡೆಯಬೇಕೆಂದು ಇದಕ್ಕೆ ಯಾರು ಭಂಗವನ್ನು ಉಂಟು ಮಾಡಕೂಡದೆಂದು ವಿಧಿಸಿ ಈ ಕಳಕಂಡಂತೆ ಶಿಲಾ ಶಾಸನವನ್ನು ಬರೆಯಿಸಿರುತ್ತಾರೆ.
ಮುಂದೆ ಶ್ರೀ ಮಲ್ಲಪ್ಪ ಶೆಟ್ಟರು ಹಾಗೂ ಅನೇಕ ಭಕ್ತಾಧಿಗಳು ಸೇರಿ ದೇವಾಲಯದ ಅಭಿವೃದ್ಧಿ ಮಾಡಿರುತ್ತಾರೆ.
ಈ ದೇವಾಲಯದಲ್ಲಿ ಪ್ರತಿ ಸೋಮವಾರ ವಿಶೇಷ ಅಭಿಷೇಕ ಪೂಜೆಗಳು ನೆರವೇರುತ್ತದೆ ಕಾರ್ತೀಕ ಮಾಸದಲ್ಲಿ ವಿಶೇಷ ಪೂಜೆ ಮತ್ತು ಶಿವದೀಪೋತ್ಸವ ಪೂಜಾ ಕೈಂಕರ್ಯಗಳು ನಡೆಯಲ್ಪಡುತ್ತದೆ. ಕಾರ್ತೀಕ ಮಾಸದ 3ನೇ ಸೋಮವಾರ ಕಡಲೆಕಾಯಿ ಪರಿಷೆ ನಡೆಯುತ್ತದೆ. ಪ್ರತಿ ಹದಿನೈದು ದಿನಗಳಲ್ಲಿ ಬರುವ ಪ್ರದೋಷ ಪೂಜೆಗಳು ವಿಶೇಷವಾಗಿರುತ್ತದೆ. ಮಹಾ ಶಿವರಾತ್ರಿ ದಿನದಂದು ಆಹೋರಾತ್ರಿ ಪೂಜಾ ಕೈಂಕರ್ಯಗಳು ನಡೆಯುತ್ತದೆ. ಈ ದಿನದಂದು ಅಸಂಖ್ಯಾತ ಭಕ್ತಾಧಿಗಳು ದೇವರ ದರ್ಶನಕ್ಕೆ ಆಗಮಿಸುತ್ತಾರೆ. ಈ ದೇವಾಲಯದ ಬ್ರಹ್ಮ ರಥೋತ್ಸವವು ಮಹಾಶಿವರಾತ್ರಿಯ ಮರು ದಿನ ವಿಶೇಷವಾಗಿ ನಡೆಯಲ್ಪಡುತ್ತದೆ.
ರಥೋತ್ಸವದ ಉತ್ಸವಗಳು ಒಂದು ತಿಂಗಳ ಕಾಲ ನಡೆಯುವುದು ವಿಶೇಷವಾಗಿದೆ. ಯುಗಾದಿ, ಗೌರಿ-ಗಣೇಶ, ನವರಾತ್ರಿ, ಧನುರ್ಮಾಸಗಳಲ್ಲಿ ಗುರುಬಲ ಹಾಗೂ ವಿದ್ಯಾಭ್ಯಾಸಕ್ಕಾಗಿ ದಕ್ಷಿಣಾ ಮೂರ್ತಿ ಪೂಜೆ, ಅನಾರೋಗ್ಯ ಪರಿಹಾರಕ್ಕಾಗಿ ಮೃತ್ಯುಂಜಯ ಹೋಮ, ವಿವಾಹಕ್ಕಾಗಿ ಕದಲಿ ಹಾಗೂ ಅರ್ಕ ವಿವಾಹ ನಡೆಸುವುದು ವಿಶೇಷವಾಗಿರುತ್ತದೆ. ಶ್ರೀಯವರಿಗೆ ರಾಜಗೋಪುರ, ವಿಮಾನಗೋಪುರ ನಿರ್ಮಿಸಲಾಗಿದೆ. ಈ ದೇವಾಲಯದ ಆವರಣದಲ್ಲಿ ಶ್ರೀ ವಲ್ಲಿ ಸಮೇತ ಸುಬ್ರಹ್ಮಣ್ಯ ಸ್ವಾಮಿ ದೇವಾಲಯವು ಇರುತ್ತದೆ.
ನೀವೇನಾದ್ರು ಈ ದೇವಸ್ಥಾನಕ್ಕೆ ಹೋಗ್ಬೇಕು ಅಂತ ಅಂದ್ಕೊಂಡಿದ್ರೆ ದೇವಸ್ಥಾನದ ಸಮಯ ಹೀಗಿದೆ
ಬೆಳಿಗ್ಗೆ 7.30 ರಿಂದ ಮದ್ಯಾಹ್ನ 12.00 ಗಂಟೆ ಮತ್ತು ಸಂಜೆ 6.00 ಗಂಟೆಯಿಂದ 9.00 ಗಂಟೆ
Address :
15th Cross, Malleswaram, Bangalore - 560003
Google Map : https://maps.app.goo.gl/nDTYbskqaLG37...
ಕಾರ್ಯನಿರ್ವಾಹಕ ಅಧಿಕಾರಿ
ಶ್ರೀ ಡಿ.ನಾಗರಾಜು
ಕಾರ್ಯನಿರ್ವಾಹಕ ಅಧಿಕಾರಿ ಗ್ರೇಡ್ - I
ಶ್ರೀ ಕಾಡು ಮಲ್ಲೇಶ್ವರ ಸ್ವಾಮಿ ದೇವಾಲಯ
Mail : [email protected]
ಬಿಡುವಾದಾಗ ಒಮ್ಮೆಯಾದರೂ ನೀವು ನಿಮ್ಮ ಕುಟುಂಬದವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಭೇಟಿ ನೀಡಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಆಶೀರ್ವಾದ ಪಡೆಯಿರಿ.
ಈ ವಿಡಿಯೋ ಇಷ್ಟವಾಗಿದ್ದಲ್ಲಿ ನಿಮ್ಮ ಸ್ನೇಹಿತರೊಂದಿನಿಗೆ ಹಂಚಿಕೊಳ್ಳಿ ಮತ್ತು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ
#Malleswaram #parishe #kadalekayiparishe #kadumalleshwaraswamy #kadumalleshwara #KannadaVlog #indiangods #jatre #jathre
#ಕಡಲೆಕಾಯಿಪರಿಷೆ #ಮಲ್ಲೇಶ್ವರಂ #ಕನ್ನಡವ್ಲಾಗ್ #ಕನ್ನಡಸಂಸ್ಕೃತಿ #KadalekaiParishe #Malleswaram #KannadaVlog #2024
#indianfestival #god #karnatakatemples #karnatakatourism #indiangods #hindutemples
#subscribe #share #like #comment
Доступные форматы для скачивания:
Скачать видео mp4
-
Информация по загрузке: