ಪುದಿನ ರೈಸ್ | Pudina rice recipe | Quick and healthy Breakfast/Lunch box recipe Pudina rice|Mint rice
Автор: YashodaGanga PS Loka
Загружено: 2024-06-20
Просмотров: 4681
ಪುದಿನ ರೈಸ್ | Pudina rice recipe | Quick and healthy Breakfast/Lunch box recipe Pudina rice|Mint rice
ಮೊದಲೆ ಉದುರಾಗಿ ಅನ್ನ ತಯಾರುಮಾಡಿಟ್ಟುಕೊಂಡಿರಬೇಕು.ನಂತರ 1ಕಟ್ಪು ಪುದೀನಾ ಎಲೆಗಳನ್ನು ತೊಳೆದು ಮಿಕ್ಸಿ ಜಾರಿಗೆ ಹಾಕಿ 1ಗಡ್ಡೆ ಬೆಳ್ಳುಳ್ಳಿ 1ಇಂಚು ಹಸಿ ಶುಂಠಿ ಖಾರಕ್ಕೆ ತಕ್ಕಷ್ಟು ಹಸಿರು ಮೆಣಸಿನಕಾಯಿ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿ.ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ 15-20ಗೋಡಂಬಿ ಫ್ರೈ ಮಾಡಿ ತೆಗೆದಿಡಿ.ನಂತರ ಅದೇ ಬಾಣಲೆಗೆ 2 ಟೀ ಸ್ಪೂನ್ ಎಣ್ಣೆ ಹಾಕಿ 1ಟೀಸ್ಪೂನ್ ಕಡ್ಲೆ ಬೇಳೆ 1ಟೀ ಸ್ಪೂನ್ ಉದ್ದಿನಬೇಳೆ ಹಾಕಿ ಫ್ರೈ ಮಾಡಿ 1 ಟೀ ಸ್ಪೂನ್ ಸೋಂಪು ಕಾಳು,3ಲವಂಗ,1-2 ಏಲಕ್ಕಿ, ಸ್ವಲ್ಪ ಚೆಕ್ಕೆ ಹಾಕಿ ಫ್ರೈ ಮಾಡಿ ಸ್ವಲ್ಪ ಕರಿಬೇವು ಹಾಕಿ 1ಒಣ ಮೆಣಸಿನಕಾಯಿ ಮುರಿದು ಹಾಕಿ 1ಕಟ್ ಮಾಡಿದ ಈರುಳ್ಳಿ ಹಾಕಿ ಬಾಡಿಸಿ ಈಗ ರುಬ್ಬಿದ ಪುದೀನಾ ಪೇಸ್ಟ್ ಹಾಕಿ ಬಾಡಿಸಿ ನಂತರ ಸ್ವಲ್ಪ ಪುದೀನಾ ಎಲೆಗಳನ್ನು ಹಾಕಿ ಫ್ರೈ ಮಾಡಿ ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನಂತರ ಉದುರಾಗಿ ಮಾಡಿರುವ ಅನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ 1 ನಿಂಬೆರಸ ಹಾಕಿ ಫ್ರೈ ಮಾಡಿದ ಗೋಡಂಬಿ ಹಾಕಿ ಮಿಕ್ಸ್ ಮಾಡಿಕೊಂಡರೆ ರುಚಿಯಾದ ಆರೋಗ್ಯಕರವಾದ ಪುದೀನಾ ರೈಸ್ ಸಿದ್ದ ಆಗುತ್ತೆ ಮೊಸರುಬಜಿಯೊಂದಿಗೆ ಸರ್ವ್ ಮಾಡಿ.
Доступные форматы для скачивания:
Скачать видео mp4
-
Информация по загрузке: