ಲೋಕಾಪುರದಿಂದ ಧಾರವಾಡ ಯೋಜನೆಗೆ ತಾತ್ಕಾಲಿಕ ಅನುಮೋದನೆಗೆ ಸಿದ್ಧತೆ!
Автор: AM KANNADA NEWS
Загружено: 2025-10-25
Просмотров: 6909
ರಾಮದುರ್ಗ : ತಾಲೂಕಿನ ಜನರ ಬಹುದಿನಗಳ ಬೇಡಿಕೆಯಾಗಿದ್ದ ರಾಮದುರ್ಗ ಪಟ್ಟಣಕ್ಕೆ ರೈಲು ಸಂಪರ್ಕ ಕಲ್ಪಿಸುವ ಉದ್ದೇಶದಿಂದ ತಾಲೂಕಿನಲ್ಲಿ ಸುಮಾರು ಎರಡು ದಶಕಗಳಿಂದ ಅನೇಕ ಹೋರಾಟಗಳು ನಡಿತಾ ಬಂದಿವೆ.
ಇತ್ತೀಚೆಗೆ ರಾಮದುರ್ಗ ತಾಲೂಕ ರೈಲ್ವೆ ಹೋರಾಟ ಕ್ರಿಯಾ ಸಮಿತಿಯಿಂದ ರಾಮದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ತರಲಾಗಿತ್ತು. ಅದೇ ರೀತಿಯಲ್ಲಿ ಸವದತ್ತಿ ಪಟ್ಟಣದಲ್ಲಿಯೂ ಕೂಡ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು.
ಇದೆಲ್ಲದರ ಫಲವಾಗಿ ಸದ್ಯ ಲೋಕಾಪುರದಿಂದ ರಾಮದುರ್ಗ ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ನೂತನ ರೈಲು ಮಾರ್ಗದ ಯೋಜನೆಗೆ ರೈಲ್ವೆ ಇಲಾಖೆಯು ತಾತ್ಕಾಲಿಕ ಅನುಮೋದನೆಗೆ ಸಿದ್ಧತೆ ನಡದಿದೆ. ಇದರಿಂದ ರಾಮದುರ್ಗ ರೈಲು ಹೋರಾಟ ಸಮಿತಿಗೆ ಪ್ರಾಥಮಿಕ ಜಯ ಸಿಕ್ಕಂತಾಗಿದೆ. ಒಟ್ಟು 132.20 ಕಿ.ಮೀ ಉದ್ದದ ಲೋಕಾಪುರ - ಧಾರವಾಡ ರೈಲು ಮಾರ್ಗಕ್ಕಾಗಿ ಅಂದಾಜು ವೆಚ್ಚ ಸುಮಾರು 1660.70 ಕೋಟಿ ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಅದರ ಜತೆಗೆ ರೈಲ್ವೆ ಇಲಾಖೆಗೆ ಬರುವ ಆದಾಯ ದರ 8.07℅ ಕ್ಕಿಂತ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ರೈಲು ಅಭಿವೃದ್ಧಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕುತ್ಬುದ್ದಿನ್ ಕಾಜಿಯವರು “ ಲೋಕಾಪುರದಿಂದ ಧಾರವಾಡಕ್ಕೆ ನೂತನ ರೈಲು ಮಾರ್ಗ ನಿರ್ಮಾಣಕ್ಕಾಗಿ ರಾಮದುರ್ಗ ಹಾಗೂ ಸವದತ್ತಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆಗಳನ್ನು ನಡೆಸಿ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರದ ಮೇಲೆ ಒತ್ತಡ ತರಲಾಗಿತ್ತು. ಅದೇ ರೀತಿ ನಮ್ಮ ಬೆಳಗಾವಿ ಸಂಸದರಾದ ಮಾನ್ಯ ಜಗದೀಶ್ ಶೆಟ್ಟರ್ ಅವರು ಕೇಂದ್ರ ರೈಲ್ವೆ ಮಂತ್ರಿ ಅಶ್ವಿನ್ ವೈಷ್ಣವ ಅವರಿಗೆ ಈ ಮಾರ್ಗದ ಲಾಭ ಮತ್ತು ಅವಶ್ಯಕತೆ ಕುರಿತು ಮನವರಿಕೆ ಮಾಡಿ ಯೋಜನೆಯ ಅನುಷ್ಠಾನಕ್ಕಾಗಿ ಸಚಿವರಿಗೆ ಮನವಿ ಸಲ್ಲಿಸಿದ್ದರು.
ಇದೆಲ್ಲದರ ಫಲವಾಗಿ ಸದ್ಯ ಹುಬ್ಬಳ್ಳಿ ರೈಲ್ವೆ ಅಧಿಕಾರಿಗಳು ಈ ಯೋಜನೆಯು ಲಾಭದಾಯಕ ವಾಗಿದ್ದು ಯೋಜನೆಯ ಅನುಷ್ಠಾನಕ್ಕಾಗಿ ಯಾವುದೇ ಸಮಸ್ಯೆಗಳಿಲ್ಲದ ಕಾರಣ ಯೋಜನೆಗೆ ಅನುಮೋದನೆ ನೀಡಬಹುದು ಎಂದು ರೈಲ್ವೆ ಇಲಾಖೆಗೆ ವರದಿ ಸಲ್ಲಿಸಿದೆ. ಇದರಿಂದ ರೈಲ್ವೆ ಇಲಾಖೆಯು ಈ ಯೋಜನೆಗೆ ತಾತ್ಕಾಲಿಕ ಅನುಮೋದನೆಗೆ ಸಿದ್ಧತೆ ನಡಸಿದ್ದು ಇನ್ನೂ ಅಧಿಕೃತ ಆದೇಶ ಒಂದೇ ಬರಬೇಕಾಗಿದೆ.
ಆದ್ದರಿಂದ ನಾವೆಲ್ಲರೂ ಇಲ್ಲಿಗೆ ನಮ್ಮ ಹೋರಾಟವನ್ನು ನಿಲ್ಲಿಸದೇ ಈ ಯೋಜನೆಯ ಅನುಷ್ಠಾನಕ್ಕಾಗಿ ಅಧಿಕೃತ ಆದೇಶ ಹೊರಡಿಸುವವರೆಗೆ ಮುಂದುವರೆಸ ಬೇಕಾಗಿದೆ. ನಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಅವಶ್ಯಕತೆ ಇದೆ. ಇನ್ನು ಹೆಚ್ಚಿನ ಹೋರಾಟವನ್ನು ಮಾಡುವುದರ ಮೂಲಕ ಅಧಿಕೃತ ಆದೇಶ ಹೊರಡಿಸಲು ಒತ್ತಾಯಿಸಬೇಕಾಗಿದೆ.” ಎಂದು ಹೇಳಿದ#ರು.
ಈ ಸಂಧರ್ದಲ್ಲಿ ರಾಮದುರ್ಗ ರೈಲ್ವೆ ಹೋರಾಟ ಸಮಿತಿಯ ಮುಖಂಡ ಎಂ ಕೆ ಯಾದವಾಡ ಉಪಸ್ಥಿತರಿದ್ದರು.
ವರದಿ : ರಾಜು ಮಾದರ #kannadanews #news #entertainment #kannadanewslive #karnatakanewslive #public #kannadalatestnews
Доступные форматы для скачивания:
Скачать видео mp4
-
Информация по загрузке: