Kannada Worship Song(Audio)||ಕನ್ನಡ ಆರಾಧನಾ ಗೀತೆ(ಆಡಿಯೋ)||Hebron songs Zion
Автор: JOSHUA RAJU
Загружено: 2024-08-17
Просмотров: 152
Lyrics shared from Songs of Zion Application
153 . ವಿಜಯನು ಕ್ರಿಸ್ತ ಪ್ರಭಾವದಿ೦ದ
ಹಿ.270 ತೆ.181 1 ಕೊರಿಂಥ 15:57
*ಪಲ್ಲವಿ: ವಿಜಯನು ಕ್ರಿಸ್ತ ಪ್ರಭಾವದಿ೦ದ - ಘನ ವಿಜಯನಾದನು*
* ಸೈತಾನನ ತಲೆಯ ಜಜ್ಜಿ ಹಾಕಿದನು - ಸದಾ ರಾಜ್ಯವಾಳುವನು*
1. ಓ ಮರಣವೇ ನಿನ್ ಮುಳ್ಳು ಎಲ್ಲಿದೆ? - ಓ ಸಮಾಧಿ ನಿನ್ ವಿಜಯ ಎಲ್ಲಿದೆ?
ಶಿಲುಬೆ ಶಕ್ತಿಯಿ೦ದ ಮುರಿದು ಬಿಟ್ಟನು - ವಿಜಯನು ಸರ್ವದಲ್ಲಿ ॥ವಿಜಯನು॥
2. ಯೂದ ಗೋತ್ರದ ಸಿಂಹವಾತನೇ - ಗ್ರಂಥವ ಬಿಚ್ಚಲು ಯೋಗ್ಯನು ತಾನೇ
ಏಳು ಮುದ್ರೆಗಳ ಒಡೆಯುವಾತನು - ಯೋಗ್ಯನು ಸರ್ವದಲ್ಲಿ ॥ವಿಜಯನು॥
3. ಆತನೇ ಶಿರಸ್ಸು ತನ್ನದಾದ ಸಭೆಗೆ - ಮೃತರೊಳಗಿ೦ಂದ ಮೊದಲು ಎದ್ದನು
ನಮ್ಮ ಪ್ರಭು ಯೇಸು ಮರಣವ ಗೆದ್ದ - ಸರ್ವದೊಳ್ ಪ್ರಧಾನನು ॥ವಿಜಯನು॥
4. ಸಿ೦ಹಾಸನದಲ್ಲಿರುವ ನಮ್ಮ ಪ್ರಭುವೇ - ಪದ್ಮರಾಗ ಮಣಿಗಳ ಹಾಗೆ
ಸೂರ್ಯ ಕಾಂತಿ ಹಾಗೆ ಪ್ರಕಾಶಿಸಿದ - ಜಯವೆಂದು ಹಾಡುವೆವು ॥ವಿಜಯನು॥
5. ಆತನ ಮುಂದೆ ಸಾಷ್ಟಾಂಗವೆರಗಿ - ನಾಲ್ಕು ಜೀವಿಗಳು ಹಿರಿಯರೆಲ್ಲರು
ಸರ್ವಸೃಷ್ಟಿಗೆ ದೇವರು ಎ೦ದು - ಆರಾಧಿಸಿ ಕೊಂಡಾಡಿದರು ॥ವಿಜಯನು॥
6. ಕ್ರಿಸ್ತ ಯೇಸು ಮೂಲಕ ದೇವರಿಗೆ ಸ್ತುತಿಗಳು - ವಿಜಯವ ಕೊಟ್ಟನು ತನ್ನ ಮೂಲಕ
ಅಧಿಕ ವಿಜಯವ ಕೊಡುವ ಪ್ರಭುವೇ - ಎಲ್ಲರಲ್ಲಿ ಶ್ರೇಷ್ಠನು ॥ವಿಜಯನು॥
Доступные форматы для скачивания:
Скачать видео mp4
-
Информация по загрузке: