ಗಣಪತಿ ಕೌತುಕ | GANAPATHI KAUTHUKA| AMBURUHA| YAKSHASADANA|
Автор: Amburuha Yaksha sadana
Загружено: 2020-06-16
Просмотров: 419
ಯಕ್ಷಗಾನದ ಪೂರ್ವರಂಗದಲ್ಲಿ ಬಾಲಗೋಪಾಲರ ಭಾಗದ ಒಂದು ನಾಟ್ಯವಿಶೇಷ. ಈ ಹಿಂದೆ ಈ ರಂಗಕ್ರಮ ಇದ್ದುದನ್ನು ಹಿರಿಯರು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ. ಆದರೆ ಈಗ ಇತರ ವಿಶಿಷ್ಟ ರಂಗಕ್ರಮಗಳಂತೆ ಈ "ಗಣಪತಿ ಕೌತುಕ"ವೂ ಕೂಡ ಲುಪ್ತವಾಗಿದೆ. ಅದನ್ನೊಮ್ಮೆ ಜ್ಞಾಪಿಸಿಕೊಳ್ಳುವ ಪ್ರಯತ್ನವಿದು.ಇದು ಈ ಹಿಂದೆ ಆಗುತ್ತಿದ್ದ ಕೌತುಕದ ನೊಣಪ್ರತಿಯಲ್ಲ.ಪುನರ್ ಸಂಯೋಜನೆಯಷ್ಟೆ. ಈ ಬಗ್ಗೆ ಸಲಹೆ ಸೂಚನೆಗಳನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆ. ಮಂಗಳೂರು ವಿ.ವಿ.ಯ ಯಕ್ಷಗಾನ ಕೇಂದ್ರದಲ್ಲಿ ನಡೆದ ತೆಂಕುತಿಟ್ಟು ಹಿಮ್ಮೇಳದ ಕಮ್ಮಟದಲ್ಲಿ ನಾವು ಪ್ರಸ್ತಾಪಿಸಿದ "ತಿತಿತೈ"ಯ ನಿರೂಪಣಾ ಕ್ರಮವನ್ನು ಇಲ್ಲಿ ಅಳವಡಿಸಿಕೊಳ್ಳಲಾಗಿದೆ. ಈ ಬಗ್ಗೆ ಆರೋಗ್ಯಪೂರ್ಣ ಟೀಕೆ ಟಿಪ್ಪಣಿಗಳನ್ನು ಸ್ವಾಗತಿಸುತ್ತೇವೆ.
ಮಾರ್ಗದರ್ಶನ ಮತ್ತು ಭಾಗವತಿಕೆ: ಬೊಟ್ಟಿಕೆರೆ ಪುರುಷೋತ್ತಮ ಪೂಂಜ
ಮದ್ದಳೆ: ಮಯೂರ ನಾಯ್ಗ
ನೃತ್ಯ ಪ್ರಸ್ತುತಿ: ದೀವಿತ್ .ಎಸ್. ಕೆ. ಪೆರಾಡಿ
ಜೀವಿತೇಶ್ ಪೂಂಜ
ಚಲಚ್ಚಿತ್ರ ಗ್ರಹಣ: ಪರೀಕ್ಷಿತ್ ಪೂಂಜ
ಧ್ವನಿ ವ್ಯವಸ್ಥೆ: ನಾಗೇಶ್ ಅಸೈ
Доступные форматы для скачивания:
Скачать видео mp4
-
Информация по загрузке: