ಜೋಕುಮಾರನ ಪದ | Jokumara pada
Автор: Shobha Sagar Official
Загружено: 2023-08-18
Просмотров: 771877
#ShobhaSagaOfficial #ShobhaSagar
ಜೋಕುಮಾರನ ಪದ | Jokumara pada #janapada #uttarakarnataka #janapada_geete #janapada_geethegalu #folk #folksongs #ಜಾನಪದ_ಹಾಡುಗಳು #ಜಾನಪದ_ಹಾಡುಗಳು_ಡಿಜೆ #ಜಾನಪದಹಾಡುಗಳುಡಿಜೆ #jaanapada #kannadajanapada
Shobha Sagar Official songs
Song Credit
lyrics - janapada
title - jokumara pada
singer - Shobha sagar
lyrics 👇
ಜೋಕುಮಾರನ ಪದ
ಬಲ ಬಂದ ನಿಮ್ಮ ಬಾಗುಲದಾಗ
ನಿಂತಾನ
ಬೇಗ ನೀಡವ್ವ ಕೊಡುರವ್ವ
ಜೋಕುಮಾರ
ಬೇಗ ನೀಡವ್ವ ಕೊಡುರವ್ವ
ಕುಮುರಯ್ಯ
ಬಾಗಿಲಗ್ ಹರಕಿ ಕೊಡುತಾನ
ಜೋಕುಮಾರ
ಕೆಂಚಿ ನನ ಕುಮರಗ ಮಿಂಚಿ
ನೋಡಲ್ಲಿ ಹೋಗ್ಯಾನ
ಮಿಂಚೌ ಮಗ್ಗಿ ಮಳೆಗಾಲ
ಜೋಕುಮಾರ
ಮಿಂಚೌ ಮಗ್ಗಿ ಮಳೆಗಾಲ
ಕುಮುರಯ್ಯ
ಕೆಂಪ ಶಲ್ಯ ಹೋಚ್ಯಾನ
ಜೋಕುಮಾರ
ಕರಿ ನನ ಕುಮುರಯ್ಯ ಕೆರಿ
ನೋಡಲ್ಲಿ ಹೋಗ್ಯಾನ
ಕರದೌ ಮಗ್ಗಿ ಮಳೆಗಾಲ
ಜೋಕುಮಾರ
ಕರದೌ ಮಗ್ಗಿ ಮಳೆಗಾಲ
ಕುಮುರಯ್ಯ
ಕರಿಯ ಶಲ್ಯ ಹೊಚ್ಯಾನ
ಜೋಕುಮಾರ
ಅರಗಿದ ಹೊಲದಾಗ ಅರ್ದ
ಚಂಡಾಡ್ಯಾನ
ಅರದಿಯ ಮಗ ಕುಮುರಯ್ಯ
ಜೋಕುಮಾರ
ಅರಾಗಿದ ಮಗ ಕುಮುರ
ಚಂಡಾಡಿದಲ್ಲಿ
ಹವಳ ಮುತ್ತು ಬೇಳೆದಾವ
ಜೋಕುಮಾರ
ಬಿತ್ತಿದ ಹೊಲದಾಗ ಬಿಚ್ಚಿ
ಚಂಡಾಡ್ಯಾನ
ಬಿತ್ರಿಯ ಮಗ ಕುಮುರಯ್ಯ
ಜೋಕುಮಾರ
ಬಿತ್ರಿಯ ಮಗ ಕುಮುರ
ಚಂಡಾಡಿದಲ್ಲಿ
ಗೋದಿ ಕಡ್ಲಿಗೋಳು ಬೆಳೆದಾವ
ಜೋಕುಮಾರ
ಅಡ್ಡಡ್ಡ ಮಳಿ ಬಂದು ದೊಡ್ ದೊಡ್ಡ
ಹನಿಯಾಗಿ
ಗೊಡ್ಡು ಗೋಳೆಲ್ಲ ಹೈನಾಗಿ
ಜೋಕುಮಾರ
ಗೊಡ್ಡು ಗೋಳೆಲ್ಲ ಹೈನಾಗಿ
ಕುಮುರಯ್ಯ
ದೊಡ್ಡೋರ ಮ್ಯಾಲ ಸಿರಿ ಬಂದ
ಜೋಕುಮಾರ
ವಕ್ಕಲಗೇರ್ಯಾಗ ಹೊಕ್ಯಾನ
ಕುಮುರಯ್ಯ
ಚಕ್ಕರ ಗಣ್ಣ ತಿರುವ್ಯಾನ
ಜೋಕುಮಾರ
ಚಕ್ಕರ ಗಣ್ಣ ತಿರುವ್ಯಾನ
ಕುಮುರಯ್ಯ
ಅಕ್ಕನಂದರಿಗಿ ಬಿಡಿನಂದ
ಜೋಕುಮಾರ
ಚನ್ನಯ್ನ ಮಗಳ ಹೆಣ್ಣಿಗಿ
ನೋಡ ಹೋದರ
ಕಣ್ಣಿಟ್ಟ ಕಾಲ ಅಡ್ಡಿಟ್ಟ
ಜೋಕುಮಾರ
ಕಣ್ಣಿಟ್ಟ ಕಾಲ ಅಡ್ಡಿಟ್ಟ
ಕೇಳ್ಯಾನ
ಹೆಣ್ಣ ನೀನ್ಯಾರ ಮಗಳಂದ
ಜೋಕುಮಾರ
ನನ ಕುಲ ಕೇಳಾಕ ನೀನ್ಯಾರ
ಮಗನಯ್ಯ
ಕಣ್ಣ ಗುಡ್ಡಿಗೋಳು ತೆಗಸೇನ
ಜೋಕುಮಾರ
ಕಣ್ಣ ಗುಡ್ಡಿಗೋಳು ತೆಗಸೇನ
ಜೋಕುಮಾರ
ಅಗಸರ ಬಂಡಿಗಿ ಬಡಿಸೇನ
ಜೋಕುಮಾರ
Доступные форматы для скачивания:
Скачать видео mp4
-
Информация по загрузке: