ನೋಡ ಬಂದೆನು ನಾನು- ಶ್ರೀ ಚಾಮುಂಡೇಶ್ವರಿ ಬಸಪ್ಪನವರ ಪುಣ್ಯಕ್ಷೇತ್ರ, ಗೌಡಗೆರೆ, ಚನ್ನಪಟ್ಟಣ
Автор: nagarjun cm
Загружено: 2025-01-02
Просмотров: 438
#gowdagere #chamundeshwari #ಬೊಂಬೆನಾಡು
ರಚನೆ, ಗಾಯನ,ಸಂಕಲನ- ನಾಗಾರ್ಜುನ್ ಸಿ ಎಂ
ನೋಡಬಂದೆನು ನಾನು ತಾಯಿ ಚಾಮುಂಡಿಯನು
ಗೌಡಗೆರೆಯಲಿ ಇರುವ ಶ್ರೀ ಜಗನ್ಮಾಥೆಯನು
ನಿನ್ನ ದರ್ಶನ ಪಡೆದು ಧನ್ಯವಾಯಿತು ಬದುಕು ಮೂಡಿಹುದು ಮನದಲ್ಲಿ ಭರವಸೆಯ ಬೆಳಕು
ನಾಡದೇವತೆ ನೀನು ನಾಡಿಮಿಡಿತವ ಬಲ್ಲೆ
ಇರಬೇಕೆಂದೆನಿಸುತಿದೆ ನಿನ್ನ ಮಡಿಲಲ್ಲೆ
ಕಾಡಬಂದಹ ದುಷ್ಟ ಶಕ್ತಿಗಳ ಸಂಹರಿಸಿ
ಸಿಂಹವಾಹಿನಿ ನೀ ಹೊರಟೆ ಮೆರವಣಿಗೆ
ಬೇಡಿಬಂದಿಹ ಎಲ್ಲ ಭಕ್ತರ ಮೊರೆಗಳನು
ಪೂರೈಸುವ ದೇವಿ ನಿನಗೆ ಶರಣು.
ಶಿಷ್ಟರ ಕಾಯುವ ಜನನಿ ತೋರು ನಿನ್ನ ಕರುಣೆ
ಶಾಂತಳಾಗಿ ನಿಂತಿರುವ ಪ್ರಸನ್ನ ವದನೆ
ಶ್ರೀ ಕಾತ್ಯಾಯಿನಿ ನಿನ್ನಿಂದಲೆ ಧರಣಿ
ಜೀವ ನೀಡಿದ ನಿನಗೆ ಕೋಟಿ ವಂದನೆ
ಜಗವನುದ್ದರಿಸುವ ಜಗದಂಬೆ ಪಾರ್ವತಿಯೆ
ಜಗನ್ಮಂಗಳ ಗೌರಿ ನಿನಗೆ ಶರಣು.
ಬಂದ ಭಕ್ತರಿಗೆಲ್ಲ ನಡೆಯುತಿದೆ ದಾಸೋಹ
ಹಸಿವು ನೀಗಿಸುತಿಹುದು ನಿನ್ನ ಸನ್ನಿಧಿ
ತೀರ್ಥ ಪ್ರಸಾದಗಳ ಅವಿರತ ವಿನಿಯೋಗ
ಬಂದಿಹುದು ನಿನ್ನ ಪಾದ ಸ್ಪರ್ಶಿಪ ಅವಧಿ
ಭಕ್ತರ ಬಾಳನ್ನು ಉದ್ದರಿಸೊ ಶಾಂಭವಿಯೆ
ಭವಾನಿ ಶ್ರೀದುರ್ಗೆ ನಿನಗೆ ಶರಣು.
Доступные форматы для скачивания:
Скачать видео mp4
-
Информация по загрузке: