ಬಸವಣ್ಣನವರ ಮಹಾಮನೆಯೆ ಅನುಭವ ಮಂಟಪ-ವಚನಗಳಲ್ಲಿ ದಾಖಲೆ
Автор: ಅನುಭವ ಮಂಟಪ ಟಿವಿ Anubhava Mantapa TV
Загружено: 2025-03-31
Просмотров: 520
ಭೌತಿಕವಾಗಿ ಅನುಭವ ಮಂಟಪ ಅಸ್ತಿತ್ವದಲ್ಲಿ ಇತ್ತು ಎನ್ನುವುದಕ್ಕೆ 12ನೇ ಶತಮಾನದ ಅನೇಕ ವಚನಗಳಲ್ಲಿ ದಾಖಲೆಗಳು ಸಿಗುತ್ತವೆ.
ಭಕ್ತರು ಇರುವ ಸ್ಥಳಕ್ಕೆ ಮನೆ ಎಂದೂ, ಭವಿಗಳು ಇರುವ ಸ್ಥಳಕ್ಕೆ ಕೆಮ್ಮನೆ ಎಂದೂ,
ಅರಿವೆ ಗುರುವಾದ ಬಸವಣ್ಣನವರ ಮನೆ=ಅರಿವಿನ ಮನೆ=ಮಹಾಮನೆ=ಅನುಭವ ಮಂಟಪ ಎಂದೂ ವಚನಗಳಲ್ಲಿ ದಾಖಲೆ ಇದೆ.
ಆದಿಯಾಧಾರವಿಲ್ಲದಂದು, ಕಳೆಮೊಳೆದೋರದಂದು, ಕಾಮನಿಃಕಾಮವಿಲ್ಲದಂದು, ವೀರವಿತರಣವಿಲ್ಲದಂದು,ಯುಗಜುಗವಿಲ್ಲದಂದು, ಪಿಂಡಾಂಡ ಬ್ರಹ್ಮಾಂಡವಿಲ್ಲದಂದು,
ಏನೂ ಏನೂ ಇಲ್ಲದಂದು, ಎಲ್ಲಾ ಮೂರ್ತಿಗಳು ನೆಲೆಗೊಳ್ಳದಂದು,
ಅಂದು ಏನೆಂದು ಅರಿಯದಿರ್ಪ ನಮ್ಮ ಬಸವಯ್ಯನು.
........................................................................................................
ಪ್ರಣವದ ಬೀಜವ ಬಿತ್ತಿ, ಪಂಚಾಕ್ಷರಿಯಬೆಳೆಯ ಬೆಳೆದು,
ಪರಮಪ್ರಸಾದವನೊಂದು ರೂಪಮಾಡಿ ಮೆರೆದು,
ಭಕ್ತಿಫಲವನುಂಡಾತ ನಮ್ಮ ಬಸವಯ್ಯನು.
ಚೆನ್ನಬಸವನೆಂಬ ಪ್ರಸಾದಿಯ ಪಡೆದು, ಅನುಭವಮಂಟಪವನನುಮಾಡಿ, ಅನುಭವಮೂರ್ತಿಯಾದ ನಮ್ಮ ಬಸವಯ್ಯನು.ಅರಿವ ಸಂಪಾದಿಸಿ ಆಚಾರವನಂಗಂಗೊಳಿಸಿ, ಏಳುನೂರೆಪ್ಪತ್ತು ಅಮರಗಣಂಗಳ ಅನುಭವಮೂರ್ತಿಗಳ ಮಾಡಿದಾತ ನಮ್ಮ ಬಸವಯ್ಯನು. ಆ ಅನುಭವದಲ್ಲಿ ಐಕ್ಯಪ್ರಸಾದವನಂಗಂಗೊಂಡು,ಮಂತ್ರ ನಿರ್ಮಂತ್ರವಾದಾತ ನಮ್ಮ ಬಸವಯ್ಯನು. ಭಕ್ತಿಸ್ಥಲವನಳಿದು ಭಾವವಡಗಿ ಬಟ್ಟಬಯಲ ಕೂಡಿ,ಸಂಗಯ್ಯನಲ್ಲಿ ಸ್ವಯಲಿಂಗಿಯಾದ ನಮ್ಮ ಬಸವಯ್ಯನು.
-ಸಮಗ್ರ ವಚನ ಸಂಪುಟ: 5-ನೀಲಾಂಬಿಕಾ ವಚನದ ಸಂಖ್ಯೆ: 844
Доступные форматы для скачивания:
Скачать видео mp4
-
Информация по загрузке: