ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಆನ್‌ಲೈನ್ ಅರ್ಜಿ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಿ, ಸರ್ಕಾರ ಘೋಷಿಸಿದ
Автор: @gKarnataka Power tv
Загружено: 2025-11-17
Просмотров: 101
gkarnataka power tv//17//11//2025//#@
ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಆನ್‌ಲೈನ್ ಅರ್ಜಿ ತಾಂತ್ರಿಕ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಿ, ಸರ್ಕಾರ ಘೋಷಿಸಿದ ಎಲ್ಲಾ ಸೌಲಭ್ಯಗಳನ್ನು ತಕ್ಷಣ ಜಾರಿಗೆ ತರಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ (AIUTUC) ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಸಂಘದ ಜಿಲ್ಲಾ ಸಂಚಾಲಕ ಶರಣು ಗಡ್ಡಿ ಅವರು ಮಾತನಾಡಿ, ಹೊಸ ಸಾಫ್ಟ್‌ವೇರ್‌ನ ತಾಂತ್ರಿಕ ದೋಷಗಳಿಂದ ಕಾರ್ಮಿಕರು ಅರ್ಜಿ, ನೋಂದಣಿ, ರಿನಿವಲ್ ಮಾಡಲು ಸಾಧ್ಯವಾಗದೆ ವಂಚಿತರಾಗುತ್ತಿರುವ ಬಗ್ಗೆ ಗಂಭೀರವಾಗಿ ತಿಳಿಸಿದ್ದಾರೆ. ಇಲಾಖೆಯ ವಿಳಂಬ, ಅರ್ಜಿಗಳ ಅನಾವಶ್ಯಕ ರಿಜೆಕ್ಷನ್, ಮತ್ತು ಸಹಾಯಧನಗಳ ವಿತರಣೆಯಲ್ಲಿ ಅವ್ಯವಸ್ಥೆ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಶೈಕ್ಷಣಿಕ, ಮದುವೆ, ಆರೋಗ್ಯ, ಡೆಲಿವರಿ ಸೇರಿದಂತೆ ಎಲ್ಲ ಸಹಾಯಧನಗಳನ್ನು ಅರ್ಹ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ನೀಡಬೇಕು. ಕಿಟ್ಟುಗಳ ವಿತರಣೆಯಲ್ಲಿ ನಡೆದಿರುವ ಅವ್ಯವಹಾರಗಳಿಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸಂಘ ಆಗ್ರಹಿಸಿದೆ.
ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಪರವಾಗಿ ಹೇಮಂತ್ ಸಿಂಗ್ ಮನವಿ ಸ್ವೀಕರಿಸಿದರು. ಹಲವಾರು ಕಾರ್ಮಿಕರು ಮತ್ತು ಸಂಘದ ಮುಖಂಡರಾದನಾಗರಾಜ್ ಹುಲಿಗಿ, ರಾಮಲಿಂಗ ಶಾಸ್ತ್ರಿ,ಶರಣಪ್ಪ, ಶಬ್ಬೀರ್ ಕುಲಿಮಿ, ರಾಜೇಶ್, ಸಿದ್ದಪ್ಪ, ಎಲ್ಲಪ್ಪ ಬೋಚನಹಳ್ಳಿ, ಗಂಗಮ್ಮ, ಹುಸೇನ್ ಭಾಷಾ, ರಾಮಣ್ಣ, ಕಟ್ಟೆಪ್ಪ ಭಾಗ್ಯನಗರ, ಪ್ರತಿಭಟನೆಯಲ್ಲಿ ಭಾಗವಹಿಸಿದರು.
@gkarnatakapowertv
@TV5Kannada
@NewsFirstKannada
@tv9kannada
Доступные форматы для скачивания:
Скачать видео mp4
-
Информация по загрузке: