shimoga | ಶಿವಮೊಗ್ಗ ಹೊರ ವರ್ತುಲ ರಸ್ತೆ : ಕೆಲವೇ ದಿನಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ 9 ಕಿ.ಮೀ.! |
Автор: Udaya Saakshi
Загружено: 2025-01-27
Просмотров: 1660
ಶಿವಮೊಗ್ಗ ಹೊರ ವರ್ತುಲ ರಸ್ತೆ : ಕೆಲವೇ ದಿನಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ 9 ಕಿ.ಮೀ.!
ವರದಿ : ಬಿ. ರೇಣುಕೇಶ್
ಶಿವಮೊಗ್ಗ, ಜನವರಿ 28: ಶಿವಮೊಗ್ಗ ನಗರದ ಹೊರವಲಯದಲ್ಲಿ ನಿರ್ಮಿಸಲಾಗುತ್ತಿರುವ, ಮೊದಲ ಹಂತದ 200 ಅಡಿ ಅಗಲದ ಹೊರವರ್ತುಲ ರಸ್ತೆ ಕಾಮಗಾರಿ ಬಿರುಸುಗೊಂಡಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇನ್ನೊಂದು ತಿಂಗಳಲ್ಲಿ ಸುಮಾರು 9 ಕಿ.ಮೀ. ರಸ್ತೆಯು ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆಗಳಿವೆ.
ಮೊದಲ ಹಂತದಲ್ಲಿ ಒಟ್ಟಾರೆ 15 ಕಿ.ಮೀ. ಉದ್ದದ ರಸ್ತೆ ನಿರ್ಮಿಸಲಾಗುತ್ತಿದೆ. ಸದ್ಯ ಹರಕೆರೆಯಿಂದ ಶ್ರೀರಾಂಪುರದ ನಡುವೆ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇದರಲ್ಲಿ ಈಗಾಗಲೇ ಅನುಪಿನಕಟ್ಟೆಯಿಂದ ಶ್ರೀರಾಂಪುರದ ನಡುವಿನ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅನುಪಿನಕಟ್ಟೆಯಿಂದ ಊರುಗಡೂರು, ಹರಕೆರೆ ನಡುವೆ ರಸ್ತೆ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ. ಇನ್ನೊಂದು ತಿಂಗಳಲ್ಲಿ ಸದರಿ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಗಳಿದೆ. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಂಡರೆ, ಮೊದಲ ಹಂತದ 15 ಕಿ.ಮೀ. ರಸ್ತೆಯಲ್ಲಿ 9 ಕಿ.ಮೀ. ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ.
ಉಳಿದಂತೆ ಮೊದಲ ಹಂತದಲ್ಲಿ ಎಂಆರ್’ಎಸ್ ವೃತ್ತದಿಂದ ಊರುಗಡೂರು ಮಾರ್ಗವಾಗಿ ನಿರ್ಮಿಸಲು ಉದ್ದೇಶಿಸಿದ್ದ ಸುಮಾರು 5. 36 ಕಿ.ಮೀ. ರಸ್ತೆಯನ್ನು ಡಿ ಸ್ಕೋಪ್ (ರಸ್ತೆ ನಿರ್ಮಾಣದಿಂದ ಹಿಂದಕ್ಕೆ) ಮಾಡಲಾಗಿದೆ. ಹರಿಗೆ, ವಡ್ಡಿನಕೊಪ್ಪ ಮಾರ್ಗವಾಗಿ (ವಿಮಾನ ನಿಲ್ದಾಣ ಸಮೀಪ) ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ.
ಈಗಾಗಲೇ ಸದರಿ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಇದಕ್ಕೆ ಇನ್ನಷ್ಟೆ ಅನುಮತಿ ದೊರಕಬೇಕಾಗಿದೆ. ಇದಕ್ಕೆ ಅನುಮತಿ ದೊರಕಿದರೆ ಭೂ ಸ್ವಾದೀನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಾರಿಗೆ ಇಲಾಖೆ ಮೂಲಗಳು ಮಾಹಿತಿ ನೀಡುತ್ತವೆ.
ಎರಡನೇ ಹಂತ : ಹೊರವರ್ತುಲ ರಸ್ತೆ 2 ನೇ ಹಂತದಲ್ಲಿ 150 ಅಡಿ ಅಗಲದ ಸುಮಾರು 13 ಕಿ.ಮೀ. ರಸ್ತೆ ನಿರ್ಮಿಸಲಾಗುತ್ತಿದೆ. ಶ್ರೀರಾಂಪುರ ಸಮೀಪದಿಂದ ಆರಂಭವಾಗಿ ಕೋಟೆಗಂಗೂರು ಕೋಚಿಂಗ್ ಡಿಪೋ ಸಮೀಪದಿಂದ ಸಾಗಿ, ಪುರಲೆ ಮಾರ್ಗವಾಗಿ ಭದ್ರಾವತಿ ರಾಷ್ಟ್ರೀಯ ಹೆದ್ಧಾರಿ ಸಂಪರ್ಕಿಸಲಿದೆ.
ಸದರಿ ಯೋಜನೆಯ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಕೇಂದ್ರದ ಹೊಸ ನಿಯಮದ ಪ್ರಕಾರ, ಹೊಸ ರಾಷ್ಟ್ರೀಯ ಹೆದ್ಧಾರಿಗಳ ನಿರ್ಮಾಣಕ್ಕೆ ಭೂ ಸಾರಿಗೆ ಇಲಾಖೆಗೆ ಬದಲಾಗಿ, ಪ್ರಧಾನ ಮಂತ್ರಿ ಕಚೇರಿಯಿಂದ ಅನುಮತಿ ಪಡೆದುಕೊಳ್ಳಬೇಕಾಗಿದೆ.
2 ನೇ ಹಂತದ ಯೋಜನೆಯ ಕಡತ ಕಳೆದ ಹಲವು ತಿಂಗಳುಗಳಿಂದ ಪ್ರಧಾನಮಂತ್ರಿ ಕಚೇರಿಯಲ್ಲಿದೆ. ಅನುಮತಿ ದೊರಕುತ್ತಿದ್ದಂತೆ ಭೂ ಸ್ವಾದೀನ ಪ್ರಕ್ರಿಯೆಗಳು ಪ್ರಾರಂಭವಾಗಲಿದೆ. ತದನಂತರ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಬೇಕಾಗಿದೆ ಎಂದು ಮೂಲಗಳು ಮಾಹಿತಿ ನೀಡುತ್ತವೆ.
ಒಟ್ಟಾರೆ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ, ಶಿವಮೊಗ್ಗ ನಗರದ ಹೊರವಲಯದಲ್ಲಿ ಸುಸಜ್ಜಿತ ಹೊರವರ್ತುಲ ರಸ್ತೆ ಯೋಜನೆ ಅನುಷ್ಠಾನಗೊಳ್ಳುವಂತಾಗಿದೆ. ಆದರೆ ಮೊದಲ ಹಂತದ ಬಾಕಿ ಕಾಮಗಾರಿ ಹಾಗೂ ಎರಡನೇ ಹಂತದ ರಸ್ತೆ ನಿರ್ಮಾಣ ಕಾರ್ಯ ಆರಂಭಗೊಂಡು, ಪೂರ್ಣ ಪ್ರಮಾಣದಲ್ಲಿ ಹೊರವರ್ತುಲ ರಸ್ತೆ ಸಿದ್ಧವಾಗುವುದು ಯಾವಾಗ ಎಂಬುವುದು ಮಾತ್ರ ಯಕ್ಷಪ್ರಶ್ನೆಯಾಗಿದೆ.
ಪ್ರಧಾನಮಂತ್ರಿ ಕಚೇರಿ ಅನುಮತಿ ನಿರೀಕ್ಷೆಯಲ್ಲಿ 2 ನೇ ಹಂತದ ಯೋಜನೆ!
*** ಹೊರವರ್ತುಲ ರಸ್ತೆ ಯೋಜನೆಯ ಮೊದಲ ಹಂತದ 5. 36 ಕಿ.ಮೀ. ರಸ್ತೆ ಹಾಗೂ 2 ನೇಹಂತದ 13 ಕಿ.ಮೀ. ರಸ್ತೆ ನಿರ್ಮಾಣ ಯೋಜನೆಯ ಪ್ರಸ್ತಾವನೆಯು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಇದಕ್ಕೆ ಸಂಬಂಧಿಸಿದ ಕಡತಗಳು ಪ್ರಧಾನಮಂತ್ರಿ ಕಚೇರಿಯ ಅನುಮತಿ ನಿರೀಕ್ಷೆಯಲ್ಲಿದೆ. ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರರವರು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿ ತ್ವರಿತಗತಿಯೊಳಗೆ ಯೋಜನೆ ಅನುಷ್ಠಾನಕ್ಕೆ ಚಿತ್ತ ಹರಿಸಬೇಕಾಗಿದೆ. ಈ ಮೂಲಕ ಶಿವಮೊಗ್ಗ ನಗರದ ಸಂಚಾರ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆಗೆ ಕ್ರಮಕೈಗೊಳ್ಳಬೇಕಾಗಿದೆ.
Доступные форматы для скачивания:
Скачать видео mp4
-
Информация по загрузке: